ಅತ್ಯುತ್ತಮ ಬೌನ್ಸರ್ ನ ಮೂಲಕ ಉಮೇಶ್ ಯಾದವ್ ಡಿ ಕಾಕ್ ರವರನ್ನು ಔಟ್ ಮಾಡಿದ್ದು ಹೇಗೆ ಗೊತ್ತಾ??

ಅತ್ಯುತ್ತಮ ಬೌನ್ಸರ್ ನ ಮೂಲಕ ಉಮೇಶ್ ಯಾದವ್ ಡಿ ಕಾಕ್ ರವರನ್ನು ಔಟ್ ಮಾಡಿದ್ದು ಹೇಗೆ ಗೊತ್ತಾ??

ಇಂದು ಉಮೇಶ್ ಯಾದವರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿಯೇ ಅತ್ಯುತ್ತಮ ಬಾಲ್ ನ ಮೂಲಕ ದಕ್ಷಿಣ ಆಫ್ರಿಕಾದ ಆಟಗಾರ ಕ್ವಿಂಟನ್ ಡಿ ಕಾಕ್ ರವರನ್ನು ಔಟ್ ಮಾಡಿದ್ದಾರೆ. ಇದೀಗ ಭಾರತ ಹಾಗೂ ದಕ್ಷಿಣ ಆಫ್ರಿಕಾದ ತಂಡಗಳ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ನ ಎರಡನೇ ದಿನದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾಕ್ಕೆ ಬ್ಯಾಟಿಂಗ್ ಮಾಡಲು ಅನುವು ಮಾಡಿಕೊಟ್ಟ ಮೊದಲನೇ ಓವರ್ನಲ್ಲಿ ಉಮೇಶ್ ಅವರು ಮಿಂಚಿದ್ದಾರೆ. ಭಾರತದ ಮತ್ತೊಬ್ಬ ಬೌಲರ್ ಮೊಹಮ್ಮದ್ ಶಮಿ ರವರೊಂದಿಗೆ ಹೊಸ ಚೆಂಡನ್ನು ಹಂಚಿಕೊಂಡ ಉಮೇಶ್ ಯಾದವ್ ರವರು ಬೌನ್ಸರ್ ಎಸೆಯುವ ಮೂಲಕ ಸೌತ್ ಆಫ್ರಿಕಾದ ಬ್ಯಾಟ್ಸ್ ಮ್ಯಾನ್ ಅನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಬೌನ್ಸರ್ ಹೇಗಿತ್ತು ಎಂದರೆ ಅಂತಿಮವಾಗಿ ಕ್ವಿಂಟನ್ ಡಿ ಕಾಕ್ ರವರು ಚೆಂಡನ್ನು ಬಿಡುವುದಾಗಲಿ ಅಥವಾ ಆಡುವುದಾಗಲಿ ಯಾವುದೇ ಸ್ಥಿತಿಯಲ್ಲಿ ನಿರ್ಧಾರ ಮಾಡುವಂತಹ ಸಾಧ್ಯತೆ ಇರಲಿಲ್ಲ. ಕೊನೆಗೆ ಬೇರೆ ವಿಧಿ ಇಲ್ಲದೆ ಅತ್ಯುತ್ತಮ ಬೌನ್ಸರ್ ಗೆ ಕ್ವಿಂಟನ್ ಡಿ ಕಾಕ್ ರವರು ವೃದ್ಧಿಮಾನ್ ಸಹಾ ರವರಿಗೆ ಕ್ಯಾಚ್ ನೀಡಿ ಪೆವಿಲಿಯನ್ ಗೆ ತೆರಳಿದರು.

ಇನ್ನುಳಿದಂತೆ ಶಮಿ ರವರು ಸಹ ಮೊದಲ ಓವರ್ನಲ್ಲಿ ದಕ್ಷಿಣ ಆಫ್ರಿಕಾದ ಮತ್ತೊಬ್ಬ ಬ್ಯಾಟ್ಸ್ಮನ್ ಎಲ್ಗರ್ ರವರನ್ನು ಪೆವಿಲಿಯನ್ಗೆ ಇದೇ ರೀತಿ ಕಳುಹಿಸಿದ್ದರು. ಇದನ್ನು ಕಂಡ ಸುನಿಲ್ ಗವಾಸ್ಕರ್ ರವರು ಭಾರತೀಯ ಬೌಲರ್ ಗಳು ಭಾರತದ ಪಿಚ್ ಗಳಲ್ಲಿ ವಿದೇಶಿ ಬ್ಯಾಟ್ಸ್ಮನ್ ಗಳನ್ನು ಬೌನ್ಸರ್ ಗಳ ಮೂಲಕ ಔಟ್ ಮಾಡುತ್ತಿರುವುದು ಬಹಳ ವಿಶೇಷವಾಗಿದೆ ಎಂದು ಹಾಡಿ ಹೊಗಳಿದ್ದಾರೆ. ಮಂದ ಬೆಳಕಿನ ಕಾರಣ ಎರಡನೇ ದಿನದ ಆಟವನ್ನು ನಿಲ್ಲಿಸಲಾಗಿದ್ದು ಕೇವಲ ಮೊದಲ 5 ಓವರ್ಗಳಲ್ಲಿ ಭಾರತೀಯ ಬೌಲರ್ ಗಳು ಪರಾಕ್ರಮವನ್ನು ಮೆರೆದು ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟ್ಸ್ಮನ್ ಗಳನ್ನು ಔಟ್ ಮಾಡಿದ್ದಾರೆ. ಉಮೇಶ್ ಯಾದವ್ ರವರು ಎಸೆದಿರುವ ಬೌನ್ಸರ್ ವಿಡಿಯೋ ಮೇಲಿದೆ. ದಯವಿಟ್ಟು ಒಮ್ಮೆ ನೋಡಿ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸಿ ಹಾಗೂ ಮತ್ತಷ್ಟು ಸುದ್ದಿಗಳಿಗಾಗಿ ಕರುನಾಡ ವಾಣಿಯನ್ನು ಫಾಲೋ ಮಾಡುವ ಮೂಲಕ ಬೆಂಬಲಿಸಿ.