ಭಾರತೀಯ ಸೇನೆಯ ತಿರು ಗೇಟಿನ ಬಳಿಕ ಕೆಲವೇ ಘಂಟೆಗಳಲ್ಲಿ ರಾಜಕೀಯವನ್ನು ಎಳೆದು ತಂದ ಕಾಂಗ್ರೆಸ್ ನಾಯಕ !! ಹೇಳಿದ್ದೇನು ಗೊತ್ತಾ??

ಇತ್ತೀಚಿಗೆ ಭಾರತೀಯ ಸೇನೆಯ ವಿಚಾರದಲ್ಲಿ ರಾಜಕೀಯ ಸುತ್ತಿ ಕೊಳ್ಳುತ್ತಿರುವುದು ಬಹಳ ವಿಪರ್ಯಾಸದ ಸಂಗತಿಯಾಗಿದೆ. ದೇಶದ ಭದ್ರತೆಯ ವಿಚಾರದಲ್ಲಿ ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ನಿಲ್ಲಬೇಕು ಎಂಬುದನ್ನು ಕೆಲವು ಪಕ್ಷಗಳು ಮರೆತಂತೆ ಕಾಣುತ್ತಿದೆ. ಭಾರತೀಯ ಸೇನೆಯು ಪಾಕಿಸ್ತಾನದ ಮೇಲೆ ಎರಗಿ ತಕ್ಕ ತಿರುಗೇಟು ಗಳನ್ನು ನೀಡುತ್ತಿರುವುದನ್ನು ಕಂಡು ಪಾಕಿಸ್ತಾನದಲ್ಲಿ ಇರುವವರಿಗೆ ನೋವಾಗುವುದು ಸಹಜ. ಆದರೆ ವಿಪರ್ಯಾಸವೆಂದರೆ ಭಾರತೀಯ ಸೇನೆಯ ಪ್ರತಿಯೊಂದು ದಾಳಿಗಳಿಗೆ ರಾಜಕೀಯ ಸುತ್ತಿಕೊಂಡು ಮತ್ತೊಂದು ಪಕ್ಷಗಳನ್ನು ಟೀಕೆ ಮಾಡುವ ಉದ್ದೇಶದಿಂದ ಸೇನಾ ಸಾಮರ್ಥ್ಯ ಪ್ರಶ್ನೆ ಮಾಡುವುದು, ಸೇನೆಯ ದಾಳಿಗಳಿಗೆ ಸಾಕ್ಷಿ ಕೇಳುವುದು, ನಾವು ದಾಳಿ ಮಾಡಿದ್ದೀವಾ ಅಥವಾ ಅವರು ದಾಳಿ ಮಾಡಿದ್ದಾರಾ ಎಂಬ ವ್ಯಂಗ್ಯಭರಿತ ಮಾತುಗಳು ಸೇರಿದಂತೆ ಇನ್ನು ಹಲವಾರು ಮುಜುಗರದ ಸಂಘಟನೆಗಳು ದೇಶದಲ್ಲಿ ನಡೆಯುತ್ತಿವೆ.

ಈ ಹಿಂದೆ ನಡೆದ ಸರ್ಜಿಕಲ್ ಸ್ಟ್ರೈಕ್ ಹಾಗೂ ಏರ್ ಸ್ಟ್ರೈಕ್ ಗಳಿಗೆ ಸಾಕ್ಷ ಕೇಳಿದಷ್ಟೇ ಅಲ್ಲದೆ ಭಾರತೀಯ ಸೇನೆಯ ಪರಾಕ್ರಮವನ್ನು ಪ್ರಶ್ನೆ ಮಾಡಿ, ಭಾರತೀಯ ಸೇನೆಯು ಈ ರೀತಿ ಪಾಕಿಸ್ತಾನದ ಮೇಲೆ ವರ್ತನೆ ತೋರುವುದು ಸರಿಯಲ್ಲ ಎಂದು ಕೆಲವು ಪಕ್ಷಗಳು ದೂಷಿಸಿದ್ದವು. ಇನ್ನು ಕೆಲವು ಪಕ್ಷಗಳು ಸರ್ಜಿಕಲ್ ಸ್ಟ್ರೈಕ್ ಎಂಬುದೇ ನಡೆದಿಲ್ಲ, ಕೇವಲ ನರೇಂದ್ರ ಮೋದಿ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ ಎಂದು ಸುದ್ದಿ ಹಬ್ಬಿಸಿ, ಅದರ ಲಾಭಗಳನ್ನು ಪಡೆದುಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ ಎಂದು ಸೇನೆ ಹಾಗೂ ಮೋದಿ ಅವರನ್ನು ಟೀಕೆ ಮಾಡಿದ್ದು ಉಂಟು. ಇದೀಗ ಮತ್ತೊಮ್ಮೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಪಾಕಿಸ್ತಾನಕ್ಕೆ ತನ್ನದೇ ಆದ ರೀತಿಯಲ್ಲಿ ಉತ್ತರ ನೀಡಿ ವಾಪಸ್ಸು ಬಂದಿದೆ.

ಈ ಘಟನೆ ಹೊರಬಿದ್ದ ಕೆಲವೇ ಕೆಲವು ಗಂಟೆಗಳಲ್ಲಿ ಎಂದಿನಂತೆ ಟೀಕೆಗಳು ಆರಂಭವಾಗಿವೆ. ಇದರ ಕುರಿತು ಮಾತನಾಡಿರುವ ಕಾಂಗ್ರೆಸ್ ಪಕ್ಷದ ನಾಯಕ ಅಖಿಲೇಶ್ ಸಿಂಗ್ ರವರು ದೇಶದ ಪ್ರಮುಖ ರಾಜ್ಯಗಳಲ್ಲಿ ಚುನಾವಣೆ ಇರುವ ಸಂದರ್ಭದಲ್ಲಿ ನರೇಂದ್ರ ಮೋದಿ ಅವರ ಸರ್ಕಾರವು ಸರ್ಜಿಕಲ್ ಸ್ಟ್ರೈಕ್ ಮಾಡುತ್ತದೆ. ಮುಖ್ಯ ವಿಚಾರಗಳಿಂದ ಜನರ ಗಮನವನ್ನು ಬೇರೆ ಕಡೆ ಸೆಳೆಯಲಾಗುತ್ತಿದೆ. ನನಗೆ ಈ ವಿಷಯ ಮಾಧ್ಯಮಗಳಿಂದ ತಿಳಿದುಬಂದಿದೆ, ಒಂದು ವೇಳೆ ಭಾರತೀಯ ಸೇನೆಯು ನಿಜವಾಗಿಯೂ ಪಾಕಿಸ್ತಾನದ ಮೇಲೆ ದಾಳಿ ಮಾಡಿದ್ದಲ್ಲಿ ಇದು ಪಾಕಿಸ್ತಾನದ ಮೇಲಿನ ದಾಳಿಯಲ್ಲ ಬದಲಾಗಿ ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಯ ಕಡೆಗೆ ಗುರಿಮಾಡಿ ದಾಳಿ ಮಾಡಿದಂತೆ ಕಾಣುತ್ತದೆ. ಭಾರತೀಯ ಸೇನೆಯ ದಾಳಿಯ ಬಗ್ಗೆ ನನಗೆ ತಿಳಿದಿಲ್ಲ ಮಾಧ್ಯಮಗಳು ಪ್ರಸಾರ ಮಾಡುತ್ತಿರುವ ಸುದ್ದಿ ನಿಜವೋ ಸುಳ್ಳೋ ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

Facebook Comments

Post Author: Ravi Yadav