ಪವನ್ ದಯಮಾಡಿ ಈ ತಪ್ಪು ಸೆಮಿಫೈನಲ್ ನಲ್ಲಿ ಮಾಡ್ಬೇಡಿ.. ಮಾಡಿದರೇ ಸೋಲು ಕಟ್ಟಿಟ್ಟ ಬುತ್ತಿ

ಪವನ್ ದಯಮಾಡಿ ಈ ತಪ್ಪು ಸೆಮಿಫೈನಲ್ ನಲ್ಲಿ ಮಾಡ್ಬೇಡಿ.. ಮಾಡಿದರೇ ಸೋಲು ಕಟ್ಟಿಟ್ಟ ಬುತ್ತಿ

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಬೆಂಗಳೂರು ಬುಲ್ಸ್ ತಂಡದ ಅಪ್ರತಿಮ ಆಟಗಾರ ಪವನ್ ಶೆರಾವತ್ ರವರು ತಂಡವನ್ನು ಜಯದ ಹಾದಿಗೆ ಬಹಳ ಸುಲಭವಾಗಿ ತಲುಪಿಸುತ್ತಾರೆ. ಎಂತಹ ತಂಡವೇ ಎದುರಾಳಿ ಯಾಗಿರಲಿ ಪವನ್ ರವರು ಅಂಗಣದಲ್ಲಿ ಇದ್ದಾರೆ ಎಂದರೇ ನಡುಗುತ್ತವೆ. ಕಳೆದ ಬಾರಿ ಬೆಂಗಳೂರು ಬುಲ್ಸ್ ತಂಡವನ್ನು ಚಾಂಪಿಯನ್ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪವನ್ ರವರು ಈ ಬಾರಿಯೂ ಸಹ ಹಿಂದೆ ಬಿದ್ದಿಲ್ಲ. ಪ್ರತಿಯೊಂದು ಪಂದ್ಯದಲ್ಲಿಯೂ ಟಾಪ್ ರೈಡರ್ ಹಾಗಿ ಹೊರಹೊಮ್ಮುತ್ತಿರುವ ಪವನ್ ಶೆರಾವತ್ ರವರು ಇದೀಗ ಸೆಮಿ ಫೈನಲ್ ಪಂದ್ಯಕ್ಕೆ ಸಿದ್ದತೆಯಲ್ಲಿ ತೊಡಗಿಕೊಂಡಿದ್ದಾರೆ. ಈಗಾಗ್ಲೇ ಕ್ವಾಲಿಫೈರ್ ಹಂತದಲ್ಲಿ ಹಲವಾರು ತಪ್ಪುಗಳನ್ನು ಮಾಡಿದ್ದರೂ ಸಹ ಕೊನೆಗೆ ಎಚ್ಚೆತ್ತುಕೊಂಡು ಜಯ ಗಳಿಸಿದ್ದು ಹಾಗಿದೆ. ಆದರೆ ಈ ಪಂದ್ಯದಲ್ಲಿ ಒಂದು ವೇಳೆ ಅದೇ ತಪ್ಪು ಮಾಡಿದರೇ, ಬಲಿಷ್ಠ ಎದುರಾಳಿಯಾಗಿರುವ ದೆಹಲಿ ವಿರುದ್ಧ ಗೆಲ್ಲುವುದು ಅಸಾಧ್ಯವಾಗಲಿದೆ

ಹೌದು, ಕಳೆದ ಪಂದ್ಯದಲ್ಲಿ ಪವನ್ ರವರು ಬಹುತೇಕ ಸಮಯವನ್ನು ಬೆಂಚ್ ನಲ್ಲಿ ಕಳೆದರು. ಆದ್ಯಾಗೂ ತಂಡದ ಮತ್ತೊಬ್ಬ ಆಟಗಾರ ಸುಮಿತ್ ರವರು ನೀಡಿದ ಅದ್ವಿತೀಯ ಪ್ರದರ್ಶನದಿಂದ ಅಂಗಳಕ್ಕೆ ವಾಪಸ್ಸು ಬಂದು ತಂಡವನ್ನು ಪವನ್ ಗೆಲ್ಲಿಸಿದರು. ಇದಕ್ಕೆ ಪ್ರಮುಖ ಕಾರಣವೇನೆಂದರೆ ಪವನ್ ರವರು ಡಿಫೆಂಡರ್ ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ತಾವು ಎದುರಾಳಿ ತಂಡದ ರೈಡರ್ ಗಳನ್ನೂ ಹಿಡಿಯಲು ಪ್ರಯತ್ನ ಪಡುತ್ತಿದ್ದಾರೆ. ಆದರೆ, ಈಗಾಗಲೇ ಅಭ್ಯಾಸ ತಪ್ಪಿ ಹೋಗಿರುವ ಕಾರಣ ಹಲವಾರು ಬಾರಿ ತಪ್ಪು ಎಸಗಿ ಔಟ್ ಆಗುತ್ತಿದ್ದಾರೆ. ಈ ಬಾರಿ ಬೆಂಗಳೂರು ತಂಡವು ಬಲಿಷ್ಠ ಎದುರಾಳಿ ತಂಡವಾದ ದೆಹಲಿ ಯನ್ನು ಎದುರಿಸುತ್ತಿರುವ ಕಾರಣ ಇದೇ ರೀತಿಯ ತಪ್ಪುಗಳನ್ನು ಪವನ್ ಮಾಡಿ, ಬೆಂಚ್ ನಲ್ಲಿ ಕುಳಿತುಕೊಂಡರೇ, ತಂಡವು ಸಂಕಷ್ಟದಲ್ಲಿ ಸಿಲುಕಲಿದೆ. ಇಷ್ಟು ಸಾಲದು ಎಂಬಂತೆ ರೋಹಿತ್ ರವರು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಪವನ್ ರವರು ಹೆಚ್ಚು ಕಾಲ ಬೆಂಚ್ ನಲ್ಲಿ ಕಳೆದರೇ ಬೆಂಗಳೂರು ಬುಲ್ಸ್ ತಂಡ ದೆಹಲಿ ವಿರುದ್ಧ ಸೋಲುವ ಸಾಧ್ಯತೆಗಳು ಹೆಚ್ಚಾಗಿವೆ.