ಕರ್ನಾಟಕ ರಾಜಕೀಯ ಅಲ್ಲೋಲ ಕಲ್ಲೋಲ ! ಸ್ಪೋಟಕ ಹೇಳಿಕೆ ಸಿಡಿಸಿ ಯು ಟರ್ನ್ ಹೊಡೆದ ಸಿದ್ದು !

ಕರ್ನಾಟಕ ರಾಜಕೀಯ ಅಲ್ಲೋಲ ಕಲ್ಲೋಲ ! ಸ್ಪೋಟಕ ಹೇಳಿಕೆ ಸಿಡಿಸಿ ಯು ಟರ್ನ್ ಹೊಡೆದ ಸಿದ್ದು !

ಇದೀಗ ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಕರ್ನಾಟಕ ರಾಜ್ಯದಲ್ಲಿ ಉಪ ಚುನಾವಣೆಯ ಕಾವು ಏರ ತೊಡಗಿದೆ. ಬಿಜೆಪಿ ಪಕ್ಷವು ತನ್ನ ಸರಕಾರ ರಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಅನರ್ಹ ಶಾಸಕರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ತಪ್ಪಿಸುವುದಿಲ್ಲ ಎಂದು ಮಾತು ನೀಡಿರುವ ಕಾರಣ ಬಿಜೆಪಿ ಪಕ್ಷದಲ್ಲಿ ಉಪ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಬಂಡಾಯದ ಮುನ್ಸೂಚನೆ ನೀಡಿದ್ದಾರೆ. ಇಷ್ಟು ದಿವಸ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕರಿಗೆ ಪ್ರಭಾವಿ ವಿರೋಧಿಗಳಾಗಿ ಕಾರ್ಯ ನಿರ್ವಹಿಸಿದ ಬಿಜೆಪಿ ಕಾರ್ಯಕರ್ತರು ಇದೀಗ ಏಕಾ ಏಕಿ ಅದೇ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಹೀಗೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಬಂಡಾಯದ ಲಾಭವನ್ನು ಪಡೆದುಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಕಾದು ಕುಳಿತಿವೆ. ಆದರೆ ಮಾಜಿ ಮುಖ್ಯ ಮಂತ್ರಿಗಳಾಗಿರುವ ಸಿದ್ದರಾಮಯ್ಯ ರವರು ಸಿಡಿಸಿರುವ ಸ್ಪೋಟಕ ಹೇಳಿಕೆಗೆ ರಾಜಕೀಯವನ್ನು ಮತ್ತಷ್ಟು ರಂಗೇರಿದೆ.

ಅನರ್ಹ ಶಾಸಕರು ಮುಂಬೈಗೆ ತೆರಳಿದ ಕ್ಷಣ ದಿಂದಲೂ ಇದರ ಹಿಂದೆ ಸಿದ್ದರಾಮಯ್ಯ ರವರ ಕೈವಾಡವಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ಮಾತುಗಳು ಕೇಳಿ ಬರಲು ಕಾರಣವೇನೆಂದರೆ ಮುಂಬೈಗೆ ತೆರಳಿದ್ದು ಪಕ್ಕಾ ಸಿದ್ದರಾಮಯ್ಯ ರವರ ಆಪ್ತ ಬಳಗದವರು. ಹೀಗಿರುವಾಗ ಸಾಮಾನ್ಯವಾಗಿ ಸಿದ್ದರಾಮಯ್ಯರವರ ಹೆಸರು ಕೇಳಿಬಂದಿತ್ತು, ಇನ್ನುಳಿದಂತೆ ಮೈತ್ರಿ ಸರ್ಕಾರ ಉರುಳಿ ಬಿದ್ದ ಮೇಲೆ ಕುಮಾರಸ್ವಾಮಿ ಹಾಗೂ ದೇವೇಗೌಡರು ಸಹ ಇದೇ ಹೇಳಿಕೆ ನೀಡಿ ನಮ್ಮ ಸರ್ಕಾರ ಪತನ ವಾಗಲು ಸಿದ್ದರಾಮಯ್ಯ ನೇರ ಕಾರಣ ಎಂದು ಆರೋಪ ಮಾಡಿದ್ದರು ಇಷ್ಟೆಲ್ಲಾ ವಿದ್ಯಮಾನಗಳ ನಡುವೆ ಸಿದ್ದರಾಮಯ್ಯರವರು ಅನರ್ಹ ಶಾಸಕರನ್ನು ಯಾವುದೇ ಕಾರಣಕ್ಕೂ ಮತ್ತೊಮ್ಮೆ ಪಕ್ಷಕ್ಕೆ ವಾಪಸ್ಸು ಸೇರಿಸಿ ಕೊಳ್ಳುವುದಿಲ್ಲ ಎಂದು ಖಡಾ ಖಂಡಿತವಾಗಿ ಕಡ್ಡಿ ಮುರಿದಂತೆ ಹೇಳಿದ್ದರು.

ಇದನ್ನು ಕಂಡ ಜನ ಸಿದ್ದರಾಮಯ್ಯ ರವರ ಮೇಲೆ ಕೇಳಿ ಬರುತ್ತಿದ್ದ ಅನುಮಾನದ ಮಾತುಗಳಿಗೆ ಬ್ರೇಕ್ ಹಾಕಿದ್ದರು. ಇದರಿಂದ ಅನರ್ಹ ಶಾಸಕರ ರಾಜೀನಾಮೆ ಹಿಂದೆ ಯಾವುದೇ ರೀತಿಯ ಕೈವಾಡವನ್ನು ಸಿದ್ದರಾಮಯ್ಯ ರವರು ನಡೆಸಿಲ್ಲ ಎಂದು ನಂಬಿದ್ದರು. ಇದರ ನಡುವೆ ಅನರ್ಹ ಶಾಸಕರು ಸಹ ಬಹಿರಂಗವಾಗಿ ಸಿದ್ದರಾಮಯ್ಯರವರ ವಿರುದ್ಧ ಕಠಿಣ ಮಾತುಗಳ ಮೂಲಕ ಟೀಕೆಗಳನ್ನು ಆರಂಭಿಸಿದರು. ಆದರೆ ಇದೀಗ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ ಹಾಗೂ ಮತ್ತೊಮ್ಮೆ ಅನುಮಾನ ಗಳನ್ನು ಬಡಿದೆಬ್ಬಿಸಿದೆ. ಸಿದ್ದರಾಮಯ್ಯ ರವರನ್ನು ಮಾಧ್ಯಮ ದವರು ಮತ್ತೊಮ್ಮೆ ನೀವು ಅನರ್ಹ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಸೇರಿಸಿಕೊಳ್ಳಲು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದಾಗ ಸಿದ್ದರಾಮಯ್ಯ ಅವರು ನೀಡಿದ ಉತ್ತರ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಈ ಪ್ರಶ್ನೆಗೆ ಉತ್ತರ ನೀಡಿರುವ ಸಿದ್ದರಾಮಯ್ಯ ರವರು, ಕಾಂಗ್ರೆಸ್ ಪಕ್ಷವನ್ನು ತೊರೆದು ಮೈತ್ರಿ ಸರ್ಕಾರ ಉರುಳಿಸಿದ ಅನರ್ಹ ಶಾಸಕರನ್ನು ಯಾವುದೇ ಕಾರಣಕ್ಕೂ ವಾಪಸ್ಸು ಕರೆದುಕೊಳ್ಳುವುದಿಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯ ರವರು ಅನರ್ಹ ಶಾಸಕರು ಒಂದು ವೇಳೆ ಪಕ್ಷದ ಸಿದ್ಧಾಂತಗಳಿಗೆ ಬದ್ಧವಾಗಿ, ಪಕ್ಷದ ಸಿದ್ಧಾಂತವನ್ನು ನಂಬಿಕೊಂಡು ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳಲು ಸಿದ್ಧರಿರುವುದಾಗಿ ಹೇಳಿದ್ದಾರೆ. ಆದರೆ ಉಪ ಚುನಾವಣೆ ಟಿಕೆಟ್ ನೀಡುವ ವಿಚಾರದಲ್ಲಿ ಯಾವುದೇ ಖಾತರಿಯನ್ನು ನಾನು ನೀಡಲು ಸಾಧ್ಯವಿಲ್ಲ, ಬಹುತೇಕ ಅನರ್ಹ ಶಾಸಕರು ಈಗಾಗಲೇ ಪಕ್ಷಕ್ಕೆ ವಾಪಸ್ಸು ಬರಲು ಸಿದ್ಧವಿದ್ದೇವೆ ಎಂದು ನನ್ನ ಬಳಿ ಹೇಳಿಕೊಂಡಿದ್ದಾರೆ. ಯಾರಾದರೂ ಆಗಲಿ ಪಕ್ಷದ ಸಿದ್ಧಾಂತವನ್ನು ನಂಬಿ ಬಂದರೆ ನಮ್ಮ ಪಕ್ಷ ಒಪ್ಪಿಕೊಳ್ಳುತ್ತದೆ ಎಂದು ಹೇಳುವ ಮೂಲಕ ಅನರ್ಹ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಇದೇ ನಡೆದು ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ತೆರಳಿದರೇ, ಕರ್ನಾಟಕ ರಾಜ್ಯದ ಮುಂದಿನ ರಾಜಕೀಯ ಚಿತ್ರಣ ಸಂಪೂರ್ಣವಾಗಿ ಬದಲಾಗಲಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.