ಸಾವರ್ಕರ್‌ಗೆ ಭಾರತ ರತ್ನ ಘೋಷಿಸುತ್ತೇವೆ ಎಂದ ಬಿಜೆಪಿ ಪಕ್ಷದ ವಿರುದ್ಧ ಡಿ.ರಾಜಾ ಟೀಕೆ ಮಾಡಿದ್ದು ಹೇಗೆ ಗೊತ್ತಾ?

ಸಾವರ್ಕರ್‌ಗೆ ಭಾರತ ರತ್ನ ಘೋಷಿಸುತ್ತೇವೆ ಎಂದ ಬಿಜೆಪಿ ಪಕ್ಷದ ವಿರುದ್ಧ ಡಿ.ರಾಜಾ ಟೀಕೆ ಮಾಡಿದ್ದು ಹೇಗೆ ಗೊತ್ತಾ?

ಇದೀಗ ಬಿಜೆಪಿ ಪಕ್ಷವು ವಿನಾಯಕ ದಾಮೋದರ ಸಾವರ್ಕರ್ ರವರಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಇಂಗಿತವನ್ನು ವ್ಯಕ್ತಪಡಿಸಿದೆ. ಈಗಾಗಲೇ ಕೇಂದ್ರ ಸರ್ಕಾರವು ಈ ನಿರ್ಣಯ ಕೈಗೊಂಡಿದೆ ಎಂಬ ಮಾತುಗಳು ಕೇಳಿಬಂದಿವೆ ಇದಕ್ಕೆ ಪೂರಕ ಎಂಬಂತೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಪಕ್ಷವು ವೀರ ಸಾರ್ವರ್ಕರ್ ಅವರಿಗೆ ಭಾರತರತ್ನ ಘೋಷಿಸಲಾಗುವುದು ಎಂದು ಖಚಿತಪಡಿಸಿದೆ. ಈ ಎಲ್ಲಾ ವಿದ್ಯಮಾನಗಳ ನಡುವೆ ಸುಬ್ರಹ್ಮಣ್ಯಂ ಸ್ವಾಮಿ ರವರು ಸಹ ಕೇಂದ್ರ ಸರ್ಕಾರವು ವೀರ ಸಾವರ್ಕರ್ ಅವರಿಗೆ ಭಾರತರತ್ನ ಪೋಷಿಸುತ್ತಿರುವುದು ಬಹಳ ಒಳ್ಳೆಯ ವಿಚಾರ ಎಂದು ಹಾಡಿ ಹೊಗಳಿದ್ದಾರೆ. ಆದರೆ ಕೇಂದ್ರ ಸರ್ಕಾರದ ಈ ನಿರ್ಣಯದ ವಿರುದ್ಧ ಹಲವಾರು ವಿರೋಧಗಳು ಕೇಳಿ ಬಂದಿವೆ. ಅದ್ಯಾಕೋ ತಿಳಿದಿಲ್ಲ ವಿನಾಯಕ ದಾಮೋದರ ಸಾರ್ವರ್ಕರ್ ರವರಿಗೆ ಭಾರತರತ್ನ ಪೋಷಿಸುತ್ತಿರುವುದು ಇದೀಗ ವಿವಾದವಾಗಿ ಮಾರ್ಪಟ್ಟಿದೆ. ಬಹುತೇಕ ಜನರು ಕೇಂದ್ರ ಸರ್ಕಾರದ ಈ ನಿರ್ಣಯದ ಪರ ನಿಂತರೆ ವಿರೋಧಪಕ್ಷಗಳು ಎಂದಿನಂತೆ ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿವೆ.

ಇದರ ಕುರಿತು ಮಾತನಾಡಿರುವ ಸಿಪಿಐ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ರಾಜ ರವರು, ವಿನಾಯಕ ದಾಮೋದರ ಸಾರ್ವಕರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಎನಿಸಿಕೊಂಡಿರುವ ಭಾರತ ರತ್ನವನ್ನು ನೀಡುವುದು ಅತ್ಯಂತ ದೊಡ್ಡ ವ್ಯಂಗ್ಯದ ವಿಷಯವಾಗಿದೆ. ಇಡೀ ದೇಶ ಗಾಂಧಿಜಯಂತಿಯನ್ನು ಆಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಬಿಜೆಪಿ ಪಕ್ಷವು ಗಾಂಧಿ ರವರ ಕೊಲೆಯ ಪ್ರಕರಣದಲ್ಲಿ ಆರೋಪಿ ಯಾಗಿರುವ ಸಾರ್ವರ್ಕರ್ ಅವರಿಗೆ ಭಾರತ ರತ್ನ ನೀಡುವ ಪ್ರಯತ್ನ ಮಾಡುತ್ತಿದೆ. ಮುಂದೊಂದು ದಿನ ಮಹಾತ್ಮ ಗಾಂಧಿ ರವರ ಹಂತಕ ರಾಗಿರುವ ನಾಥುರಾಮ್ ಗೂಡ್ಸೆ ಅವರಿಗೂ  ಭಾರತರತ್ನ ನೀಡುತ್ತೇವೆ ಎಂದು ಬಿಜೆಪಿ ಪಕ್ಷ ಪ್ರಸ್ತಾವನೆ ಮಾಡಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ. ಇದೇ ತಿಂಗಳ 21ನೇ ತಾರೀಕಿನಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 288 ಸ್ಥಾನಗಳ ಪೈಕಿ ಹದಿನಾರರಲ್ಲಿ ಸಿಪಿಐ ಪಕ್ಷವು ಸ್ಪರ್ಧೆ ಮಾಡಿದ್ದು, ಇದರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುವಾಗ ಡಿ.ರಾಜಾ ಅವರು ಈ ವಾಗ್ದಾಳಿ ನಡೆಸಿದ್ದಾರೆ.