ಕಾಂಗ್ರೆಸ್ ಗೆ ಬಾರಿ ಮುಜುಗರ : ಪಕ್ಷದ ಕರಾಳ ಆಡಳಿತವನ್ನು ಬಿಚ್ಚಿಟ್ಟ ರಾಹುಲ್ ಗಾಂಧಿ ಬಲಗೈ ಬಂಟ

ಇದೀಗ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿದ ನಂತರ ಕಾಂಗ್ರೆಸ್ ಪಕ್ಷವು ಹೇಗಾದರೂ ಮಾಡಿ ಮುಂದಿನ ಚುನಾವಣೆ ಯಾದ ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳನ್ನು ವಶಪಡಿಸಿಕೊಂಡು ಮುಂದಿನ ಲೋಕಸಭಾ ಚುನಾವಣೆಗೆ ಸ್ಪಷ್ಟ ಸಂದೇಶವನ್ನು ಸಾರಬೇಕು ಹಾಗೂ ಹೇಗಾದರೂ ಮಾಡಿ ನರೇಂದ್ರ ಮೋದಿ ಎಂಬ ಸುನಾಮಿಯನ್ನು ತಡೆಯಬೇಕು ಎಂದು ಇನ್ನಿಲ್ಲದ ರಣತಂತ್ರವನ್ನು ಹೂಡಿಕೊಂಡು ಚುನಾವಣೆಗೆ ಸಿದ್ಧವಾಗುತ್ತಿದೆ. ಒಂದು ಕಾಲದಲ್ಲಿ ನಾನೂರಕ್ಕೂ ಹೆಚ್ಚು ಲೋಕಸಭಾ ಸೀಟುಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡು ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷವು ಇಂದು ಇಡೀ ದೇಶದಲ್ಲಿ ಕೇವಲ ತನ್ನ ಅಸ್ತಿತ್ವಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಹಾಗೂ ರಾಹುಲ್ ಗಾಂಧಿ ರವರ ಬಲಗೈ ಬಂಟ ಜ್ಯೋತಿರಾಧಿತ್ಯ ಸಿಂಧ್ಯಾರವರು ಕಾಂಗ್ರೆಸ್ ಪಕ್ಷದ ಕರಾಳ ಆಡಳಿತದ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾರೆ.

ಮಧ್ಯಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್ ಪಕ್ಷವು ಹರಿಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸಹ ಇದೇ ತಂತ್ರವನ್ನು ಎಣೆಯುತ್ತಿದೆ. ಆದರೆ ಇದೇ ಸಮಯದಲ್ಲಿ ಜ್ಯೋತಿರಾಧಿತ್ಯ ಸಿಂಧ್ಯ ರವರು ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಮಾತಿನಂತೆ ಸಾಲಮನ್ನಾ ನಡೆದಿಲ್ಲ ಕೇವಲ ರೈತರ ಸಾಲ ಮನ್ನಾ ಆದೇಶ ಗಳಿಗೆ ಸೀಮಿತವಾಗಿದೆ. ಆದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಸರ್ಕಾರ ರಚಿಸಿದ ಕಾಂಗ್ರೆಸ್ ಪಕ್ಷವು ಕೆಲವೇ ಗಂಟೆಗಳಲ್ಲಿ ಸಾಲ ಮನ್ನಾ ಘೋಷಣೆ ಮಾಡಿದ್ದೇವೆ ಎಂದು ಬೀಗಿತು. ಇದರ ಕುರಿತು ರಾಹುಲ್ ಗಾಂಧಿ ರವರು ಟ್ರೀಟ್ ಮಾಡಿ ನರೇಂದ್ರ ಮೋದಿ ಯವರಿಗಿಂತ ನಾವು ಫಾಸ್ಟ್ ಇದ್ದೇವೆ ಎಂದು ಪ್ರಧಾನಿಯವರ ಕಾಲೆಳೆಯಲು ಪ್ರಯತ್ನ ಪಟ್ಟಿದ್ದರು. ಆದರೆ ಅಸಲಿ ಸತ್ಯ ಇದೀಗ ಜ್ಯೋತಿರಾಧಿತ್ಯ ಸಿಂಧ್ಯ ರವರಿಂದ ಹೊರಬಿದ್ದಿದೆ.

Facebook Comments

Post Author: Ravi Yadav