ಪಾಕಿಸ್ತಾನದ ಪರ ನಿಂತ ಟರ್ಕಿ ದೇಶಕ್ಕೆ ಪಾಠ ಕಲಿಸಲು ಮುಂದಾದ ಭಾರತ??

ಪಾಕಿಸ್ತಾನದ ಪರ ನಿಂತ ಟರ್ಕಿ ದೇಶಕ್ಕೆ ಪಾಠ ಕಲಿಸಲು ಮುಂದಾದ ಭಾರತ??

ವಿಶ್ವದ ಬಹು ತೇಕ ರಾಷ್ಟ್ರಗಳು ಜಮ್ಮು ಹಾಗೂ ಕಾಶ್ಮೀರದ ವಿಚಾರ ಭಾರತದ ಆಂತರಿಕ ವಿಚಾರ ಎಂದು ಈ ವಿಷಯದಲ್ಲಿ ಮೂಗು ತೂರಿಸಲು ಬಂದಿಲ್ಲ. ಆದರೆ ಕೆಲವು ರಾಷ್ಟ್ರಗಳು ಮಾತ್ರ ಪಾಕಿಸ್ತಾನದ ಪರ ನಿಂತು ಜಮ್ಮು ಹಾಗೂ ಕಾಶ್ಮೀರ ವಿಚಾರವನ್ನು ಮಾತುಕತೆ ಗಳಿಂದ ಬಗೆ ಹರಿಸಿಕೊಳ್ಳಬೇಕು ಹಾಗೂ ಶಾಂತಿ ಕಾಪಾಡಬೇಕು ಹೇಳಿಕೆ ನೀಡಿದ್ದಾರೆ. ಇತ್ತೀಚಿಗಷ್ಟೇ ಟರ್ಕಿ ದೇಶದ ಅಧ್ಯಕ್ಷ ಕೂಡ ಇದೇ ರೀತಿ ಮಾತನಾಡಿ ಪಾಕಿಸ್ತಾನ ದೇಶಕ್ಕೆ ಹೊಸ ರೀತಿಯ ನೌಕಾಪಡೆಗೆ ಆಯುಧಗಳನ್ನು ಸರಬರಾಜು ಮಾಡುತ್ತಿರುವ ಸಂದರ್ಭದಲ್ಲಿ ಭಾರತದ ವಿರುದ್ಧ ನಾಲಿಗೆ ಹರಿ ಬಿಟ್ಟಿದ್ದರು. ಜಮ್ಮು ಹಾಗೂ ಕಾಶ್ಮೀರ ವಿಚಾರದಲ್ಲಿ ಭಾರತದ ನಿರ್ಧಾರ ಸರಿ ಇಲ್ಲ ಎಂದು ಪಾಕಿಸ್ತಾನದ ಪರ ನಿಂತಿದ್ದರು. ಇದೇ ಕಾರಣಕ್ಕಾಗಿ ಇದೀಗ ಭಾರತ ಸರ್ಕಾರ ಟರ್ಕಿ ದೇಶದ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಕಳೆದ ಜೂನ್ ತಿಂಗಳಲ್ಲಿ ಭಾರತ ಕರೆದ ಟೆಂಡರ್ ನಲ್ಲಿ ಭಾಗವಹಿಸಿದ ಟರ್ಕಿ ದೇಶವು ಇತರ ದೇಶಗಳಿಗೆ ಹೋಲಿಸಿದರೆ ಬಹಳ ಕಡಿಮೆ ಮೊತ್ತದಲ್ಲಿ ಭಾರತದ ಆಂಧ್ರಪ್ರದೇಶದ ಎಚ್ಚೆಸೆಲ್ ಫ್ಯಾಕ್ಟರಿ ನಲ್ಲಿ ಭಾರತೀಯ ನೌಕಾಪಡೆಗೆ ಅಗತ್ಯವಿರುವ FSV ನೌಕ ಹಡಗುಗಳನ್ನು ತಯಾರಿಸಲು ಬಿಡ್ ಮಾಡಿತ್ತು. ಇದು ಕೇವಲ ಇತರ ದೇಶಗಳಿಗೆ ಹೋಲಿಸಿದರೆ ಕಡಿಮೆಯಾಗಿತ್ತು, ಅಂದರೆ ಈ ಸಂಪೂರ್ಣ ಯೋಜನೆಯ ಮೊತ್ತ ಬರೋಬ್ಬರಿ 2.3 ಬಿಲಿಯನ್ ಡಾಲರ್. ಆದರೆ ಈ ಯೋಜನೆಯ ಮೇಲೆ ಇದೀಗ ಕರಿನೆರಳು ಆವರಿಸಿದೆ, ಯಾಕೆಂದರೆ ಇತ್ತೀಚೆಗೆ ಟರ್ಕಿ ದೇಶದ ಅಧ್ಯಕ್ಷ ಸುಖಾ ಸುಮ್ಮನೆ ಭಾರತದ ವಿರುದ್ಧ ಅಂತರಾಷ್ಟ್ರೀಯ ಜಾಗತಿಕ ಮಟ್ಟದಲ್ಲಿ ಹೇಳಿಕೆ ನೀಡಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತ ದೇಶವು ಕೆಲವೊಂದು ಅಂಶಗಳನ್ನು ಮುಂದಿಟ್ಟುಕೊಂಡು ಟರ್ಕಿ ದೇಶದ ಜೊತೆ ಒಪ್ಪಂದವನ್ನು ಮುರಿದುಕೊಳ್ಳಲು ಎದುರು ನೋಡುತ್ತಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಪ್ರಮುಖ ಅಂಶಗಳು ಯಾವುವು ಗೊತ್ತಾ?? ತಿಳಿಯಲು ಕೆಳಗಡೆ ಓದಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಟರ್ಕಿ ದೇಶವು ಪಾಕಿಸ್ತಾನದ ನೌಕಾಪಡೆಗೆ ಪ್ರಮುಖ ಯುದ್ಧ ನೌಕೆಗಳನ್ನು ಪೂರೈಕೆ ಮಾಡುತ್ತದೆ. ಟರ್ಕಿ ದೇಶದ ಬಹುತೇಕ ನೌಕಾಪಡೆಯ ಆಯುಧಗಳನ್ನು ತಯಾರಿಸುವ ಇಂಜಿನಿಯರ್ಗಳು ಹಾಗೂ ಕಾರ್ಮಿಕರು ಪಾಕಿಸ್ತಾನದ ಯುದ್ಧ ನೌಕೆಗಳ ತಯಾರಿಕೆಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಾರೆ. ಹೀಗಿರುವಾಗ ಎಲ್ಲಾ ಕಾರ್ಯತಂತ್ರಗಳನ್ನು ಬಳಸಿರುವ ಇಂಜಿನಿಯರ್ಗಳು ಹಾಗೂ ಕಾರ್ಮಿಕರು ಆಂಧ್ರ ಪ್ರದೇಶದ ಭಾರತದ ನೌಕಾಪಡೆಯ HSL ಫ್ಯಾಕ್ಟರಿಗೆ ಪ್ರವೇಶ ಮಾಡಿದರೆ ಗಂಭೀರ ಭದ್ರತಾ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಅಷ್ಟೇ ಅಲ್ಲದೆ ಈ ಫ್ಯಾಕ್ಟರಿಯು ಭಾರತದ ನೌಕಾಪಡೆಯ ಪ್ರಮುಖ ಕಚೇರಿಯ ಹತ್ತಿರದಲ್ಲಿದೆ. ಅಷ್ಟೇ ಅಲ್ಲದೆ ಭಾರತದ ಪರಮಾಣು ಸಶಸ್ತ್ರ ಜಲಾಂತರ್ಗಾಮಿ ನೌಕೆಗಳನ್ನು ಇಲ್ಲಿಯೇ ನಿರ್ಮಿಸಲಾಗಿರುವ ಕಾರಣ ದೇಶದ ಭದ್ರತೆಯ ವಿಚಾರವನ್ನು ಮುಂದಿಟ್ಟುಕೊಂಡು ಟರ್ಕಿ ದೇಶದ ಯಾವುದೇ ಎಂಜಿನಿಯರ್ ಗಳನ್ನು ಕಾರ್ಮಿಕರನ್ನು ದೇಶದ ಒಳಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಒಪ್ಪಂದವನ್ನು ಮುರಿದುಕೊಳ್ಳುವ ಮೂಲಕ ಪಾಕಿಸ್ತಾನದ ಪರ ನಿಂತಿದ್ದ ಕಾರಣಕ್ಕೆ ತಕ್ಕ ಪಾಠ ಕಲಿಸುವ ಯೋಜನೆ ಮೋದಿ ಸರ್ಕಾರದ್ದು.