ಪರಮೇಶ್ವರ್ ರವರ ಮನೆಯ ಮೇಲಿನ ಐಟಿ ದಾಳಿಗೆ ಪ್ರತಿಕ್ರಿಯೆ ನೀಡಿ ಮಲ್ಲಿಕಾರ್ಜುನ ಖರ್ಗೆ ಆಗ್ರಹ ಮಾಡಿದ್ದು ಏನ್ ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂದು ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಆಸ್ತಿ ಪಾಸ್ತಿಗಳ ಮೇಲೆ ಐಟಿ ಇಲಾಖೆ ಅಧಿಕಾರಿ ಗಳು ದಾಳಿ ಮಾಡಿದ್ದಾರೆ. ವರ್ಷಕ್ಕೆ ಸಾವಿರಾರು ಕೋಟಿ ವ್ಯವಹಾರ ನಡೆಸುವ ಕಾಲೇಜು ಗಳ ಒಡೆಯ ರಾಗಿರುವ ಪರಮೇಶ್ವರ್ ರವರ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ನಲ್ಲಿ ಬಿರುಗಾಳಿ ಎದ್ದಿದೆ. ಒಂದೆಡೆ ಸಿದ್ದರಾಮಯ್ಯರವರು ಪ್ರತಿಪಕ್ಷ ಸ್ಥಾನಕ್ಕಾಗಿ ಬೇಡಿಕೆ ಇಡುತ್ತಿದ್ದ ಸಂದರ್ಭದಲ್ಲಿ ಪರಮೇಶ್ವರ್ ರವರು ಮತ್ತೊಂದು ಬಣ ಕಟ್ಟಿಕೊಂಡು ಸಿದ್ದರಾಮಯ್ಯ ರವರ ವಿರುದ್ಧ ಹೋರಾಟ ಮಾಡಿದ ಕಾರಣ ಸಿದ್ದರಾಮಯ್ಯ ರವರು ದೂರು ನೀಡಿ ಇಲಾಖೆಯ ಕದ ತಟ್ಟಿದ್ದಾರೆ ಎಂಬ ಮೂಲಾಧಾರ ವಿಲ್ಲದ ಗಾಳಿ ಮಾತುಗಳು ಕೇಳಿಬರುತ್ತವೆ, ಮತ್ತೊಂದೆಡೆ ಎಂದಿನಂತೆ ನರೇಂದ್ರ ಮೋದಿ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ.

ಇದರ ಕುರಿತು ಮುತ್ತು ಪರಮೇಶ್ವರ್ ರವರು ಪ್ರತಿಕ್ರಿಯೆ ನೀಡಿ, ಐಟಿ ಇಲಾಖೆ ಅಧಿಕಾರಿ ಗಳು ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಹೇಳಿಕೆಯನ್ನು ಹೇಳಿದ್ದಾರೆ. ಆದರೆ ಇದರ ಕುರಿತು ಮಾತನಾಡಿರುವ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಎಂದಿನಂತೆ ನರೇಂದ್ರ ಮೋದಿ ರವರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉಪ ಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿ ಬಿಜೆಪಿ ಸರ್ಕಾರವು ಐಟಿ ದಾಳಿ ಮಾಡಿಸುವ ಮೂಲಕ ದ್ವೇಷ ರಾಜಕೀಯ ವನ್ನು ಮುಂದುವರೆಸುತ್ತಿದೆ. ರಾಜ್ಯದಲ್ಲಿ ಇನ್ನೇನು ಕೆಲವು ದಿನಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಅಷ್ಟೇ ಅಲ್ಲದೆ ಇತರ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ, ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿ ಬಲ ಕುಗ್ಗಿಸುವ ಯತ್ನ ಮಾಡುತ್ತಿದ್ದಾರೆ. ಈ ಕೂಡಲೇ ಬಿಜೆಪಿ ಪಕ್ಷ ಗಳು ರಾಜಕೀಯ ಪ್ರವೇಶ ದಾಳಿಯನ್ನು ನಿಲ್ಲಿಸಬೇಕು ಎಂದು ಆಗ್ರಹ ಮಾಡಿದ್ದಾರೆ.

Facebook Comments

Post Author: RAVI