ಅಭಿಮಾನಿಯ ಮನವಿಗೆ ಸ್ಪಂದಿಸಿ ಕೆಲವೇ ಗಂಟೆಗಳಲ್ಲಿ ಖ್ಯಾತ ನಟ ಅನಿರುಧ್ ಮಾಡಿದ್ದೇನು ಗೊತ್ತಾ??

ಇದೀಗ ಕನ್ನಡ ಕಿರುತೆರೆಯಲ್ಲಿ ಎಲ್ಲಿ ನೋಡಿದರೂ ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ ರವರ ಅಳಿಯ  ಅನಿರುಧ್ ಅವರ ಹೆಸರು ಕೇಳಿಬರುತ್ತಿದೆ. ಇತ್ತೀಚೆಗಷ್ಟೇ ಕನ್ನಡ ಕಿರುತೆರೆಗೆ ಕಾಲಿಟ್ಟ ಅನಿರುಧ್ ರವರು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಎಂಬ ಧಾರವಾಹಿಯಲ್ಲಿ ಮಿಂಚುತ್ತಿದ್ದಾರೆ. ಬಿಡುಗಡೆಯಾಗಿ ಕೇವಲ ಕೆಲವೇ ಕೆಲವು ದಿನಗಳು ಕಳೆದರೂ ಸಹ ಈಗಾಗಲೇ ಇಷ್ಟು ದಿವಸ ತನಗೆ ಎದುರಾಳಿಯೇ ಇಲ್ಲದಂತೆ ಮೆರೆದಿದ್ದ ಎಲ್ಲ ಧಾರವಾಹಿಗಳನ್ನು ಮೀರಿಸಿ ಇದೀಗ ನಂಬರ್ 1 ಸ್ಥಾನದಲ್ಲಿ ಜೊತೆ ಜೊತೆಯಲಿ ಧಾರವಾಹಿ ಬಂದು ಕುಳಿತುಕೊಂಡಿದೆ. ಇಷ್ಟೆಲ್ಲಾ ಯಶಸ್ಸಿನ ನಂತರ ಅನಿರುಧ್ ರವರು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬ ಕೇಳಿದ ಮನವಿಗೆ ಕೇವಲ ಕೆಲವೇ ಕೆಲವು ಗಂಟೆಗಳಲ್ಲಿ  ಸ್ಪಂದಿಸಿ ವಿಶೇಷ ಮಾತುಗಳ ಮೂಲಕ ಗಮನ ಸೆಳೆದಿದ್ದಾರೆ.

ಅಷ್ಟಕ್ಕೂ ಅಭಿಮಾನಿಯ ಮನವಿ ಏನು ಗೊತ್ತಾ? ಅನಿರುಧ್ ಅವರು ಮಾಡಿದ್ದಾದರೂ ಏನು ಗೊತ್ತಾ? ತಿಳಿಯಲು ಕೆಳಗಡೆ ಓದಿ !

ಸಾಮಾಜಿಕ ಜಾಲತಾಣ ವಾದ ಫೇಸ್ಬುಕ್ನಲ್ಲಿ ಅನಿರುಧ್ ರವರು ಮಾಡಿದ ಒಂದು ಪೋಸ್ಟಿಗೆ ಅಭಿಮಾನಿಯೊಬ್ಬ ಸರ್ ದಯವಿಟ್ಟು. ಡಾಕ್ಟರ್ ವಿಷ್ಣುವರ್ಧನ್ ರವರ ಅಪರೂಪದ ಫೋಟೋ ಹಂಚಿಕೊಳ್ಳಿ ಎಂದು ಮನವಿ ಮಾಡಿದ್ದರು. ಕೂಡಲೇ ಈ ಮನವಿಗೆ ಸ್ಪಂದಿಸಿದ ಅನಿರುಧ್ ರವರು, ಡಾಕ್ಟರ್ ವಿಷ್ಣುವರ್ಧನ್ ರವರ ಅಪರೂಪದ ಫೋಟೋ ಒಂದನ್ನು ಹಂಚಿಕೊಂಡು, ಸಾಲುಗಳ ಬರೆಯುವಷ್ಟು ದೊಡ್ಡವನಲ್ಲ ನಾ.. ನನ್ನ ಪೂರ್ವ ಜನ್ಮದ ಪುಣ್ಯವೆನ್ನಬಹುದಷ್ಟೆ ನಾನು.. ನಿಮ್ಮ ಪ್ರೀತಿಯ ಋಣ ತೀರಿಸಲು ನೂರು ಜನ್ಮವೂ ಸಾಲುವುದಿಲ್ಲವೆನಗೆ.. ನಾ ಕಂಡ ನಿಜ ದೈವ ನೀವು.. ಮತ್ತೇನು ಹೇಳಲಿ ಮೂಕನಾಗಿ ಹೋದೆ ನಾ..” ಎಂದು ಬರೆದು ಕೊಂಡು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗಿದ್ದು, ಬಾರಿ ಸದ್ದು ಮಾಡಿದೆ. (ಪೋಸ್ಟ್ ಕೆಳಗಡೆ ಇದೆ.)

Facebook Comments

Post Author: Ravi Yadav