ಹೊರಬಿತ್ತು ಮಹಾ ಸಮೀಕ್ಷೆ ಸಮೀಕ್ಷೆ; ಕಾಂಗ್ರೆಸ್-ಎನ್ಸಿಪಿ ಪಕ್ಷಗಳ ಅಂತ್ಯಕ್ಕೆ ನಾಂದಿ ಆಡಲಿರುವ ಮಹಾರಾಷ್ಟ್ರ ಚುನಾವಣೆ ?? ಬಿಜೆಪಿ ಗೆಲ್ಲುವುದು ಎಷ್ಟು ಸೀಟುಗಳು ಗೊತ್ತಾ??

ಇದೀಗ ಕಳೆದ ಬಾರಿ ಇಡೀ ಮಹಾರಾಷ್ಟ್ರ ಲೋಕಸಭಾ ಹಾಗೂ ವಿಧಾನಸಭಾ ಎರಡು ಚುನಾವಣೆಗಳು ಕೇಸರಿಮಯ ವಾಗಿವೆ. ಶಿವಸೇನಾ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿರುವ ಬಿಜೆಪಿ ಪಕ್ಷವು ಈ ಬಾರಿಯೂ ಜನರ ನಿರೀಕ್ಷೆಗೆ ತಕ್ಕಂತೆ ತನ್ನ ಐದು ವರ್ಷದ ಅವಧಿಯನ್ನು ಪೂರ್ಣಗೊಳಿಸಿದೆ ಎಂಬ ಮಾತುಗಳು ಮೊದಲಿನಿಂದಲೂ ಕೇಳಿಬರುತ್ತಿದ್ದವು. ಮತ್ತೊಂದೆಡೆ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ರವರು ರೈತರನ್ನು ಎದುರು ಹಾಕಿಕೊಂಡಿದ್ದಾರೆ, ಆದಕಾರಣ ಈ ಬಾರಿ ಸೋಲು ಕಟ್ಟಿಟ್ಟ ಬುತ್ತಿ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿದ್ದರು. ಆದರೆ ಈ ಎಲ್ಲಾ ಟೀಕೆಗಳನ್ನು ಬದಿಗೊತ್ತಿ ಬಿಜೆಪಿ ಪಕ್ಷ ಮಹಾರಾಷ್ಟ್ರದಲ್ಲಿ ಮಹಾ ಗೆಲುವು ಸಾಧಿಸುವ ಎಲ್ಲಾ ಲಕ್ಷಣಗಳು ಕಾಣಸಿಗುತ್ತವೆ. ಇದೀಗ ರಾಷ್ಟ್ರದ ಪ್ರತಿಷ್ಠಿತ ಸಂಸ್ಥೆಗಳಾದ ಎಬಿಪಿ ನ್ಯೂಸ್ ಹಾಗೂ ಸಿ ಓಟರ್ ಜಂಟಿಯಾಗಿ ನಡೆಸಿರುವ ಸಮೀಕ್ಷೆ ಹೊರಬಿದ್ದಿದ್ದು ತನ್ನ ಅಸ್ತಿತ್ವ ಮಹಾರಾಷ್ಟ್ರದಲ್ಲಿ ಉಳಿಸಿಕೊಳ್ಳಲು ಹೋರಾಡುತ್ತಿರುವ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳಿಗೆ ಭಾರೀ ಆಘಾತ ಎದುರಾಗಿದೆ.

ಹೌದು, ಇದೀಗ ಬಿಜೆಪಿ ಹಾಗೂ ಶಿವಸೇನಾ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣಾ ಅಖಾಡಕ್ಕೆ ಇಳಿದಿರುವ ಕಾರಣ, ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಿದ ಮಹಾ ಸಮೀಕ್ಷೆ ಹೊರಬಿದ್ದಿದ್ದು, ಬಿಜೆಪಿ ಹಾಗೂ ಶಿವಸೇನಾ ಪಕ್ಷವು ಒಟ್ಟಾಗಿ ಬರೋಬ್ಬರಿ 205 ಸೀಟುಗಳನ್ನು ಗೆದ್ದು ಸುಲಭವಾಗಿ ಬಹುಮತ ಸ್ಥಾಪಿಸಿ ಅಧಿಕಾರದ ಗದ್ದುಗೆ ಏರಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇನ್ನೂ ಶೇಕಡವಾರು ಮತಗಳಲ್ಲಿ ಬಿಜೆಪಿ ಪಕ್ಷ ಸಿಂಹಪಾಲು ಪಡೆದುಕೊಂಡಿದ್ದು, ಮೂವತ್ತಕ್ಕೂ ಹೆಚ್ಚು ಶೇಕಡವಾರು ಮತಗಳನ್ನು ಪಡೆದುಕೊಳ್ಳಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇನ್ನುಳಿದಂತೆ ಶಿವಸೇನಾ ಪಕ್ಷವು ಶೇಕಡ 16, ಹಾಗೂ congress-ncp ಮೈತ್ರಿಕೂಟವು ಮೂವತ್ತರಷ್ಟು ಶೇಕಡವಾರು ಮತಗಳನ್ನು ಪಡೆದುಕೊಳ್ಳಲಿದೆ, ಉಳಿದ ಮತಗಳನ್ನು ಪಕ್ಷೇತರ ಅಭ್ಯರ್ಥಿಗಳು ಪಡೆದುಕೊಳ್ಳಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

Facebook Comments

Post Author: RAVI