ಅಖಾಡಕ್ಕೆ ಇಳಿದ ಇಸ್ರೇಲ್ ! ಭಾರತಕ್ಕೆ ಬರುತ್ತಿವೆ ವಿಶೇಷ ಬ್ರಹ್ಮಾಸ್ತ್ರ ! ಕುತಂತ್ರಿ ಪಾಕಿಸ್ತಾನಕ್ಕೆ ಮರ್ಮಾಘಾತ

ಕಾಶ್ಮೀರದ ವಿಷಯದಲ್ಲಿ ಅಕ್ಷರಸಹ ಮಾನಸಿಕ ಸ್ಥಿಮಿತವನ್ನು ಕಳೆದು ಕೊಂಡಂತೆ ವರ್ತನೆ ಮಾಡುತ್ತಿರುವ ಪಾಕಿಸ್ತಾನವು ಭಾರತದ ವಿರುದ್ಧ ನೇರವಾಗಿ ಯುದ್ಧರಂಗದಲ್ಲಿ ಹೋರಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತ ಮೇಲೆ ಎಂದಿನಂತೆ ಮತ್ತೊಂದು ನೆರೆಯ ಶತ್ರು ರಾಷ್ಟ್ರವಾದ ಚೀನಾ ದೇಶದ ಸಹಾಯ ಪಡೆದುಕೊಂಡು ಭಾರತದ ವಿರುದ್ಧ ಉಗ್ರರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಅದರಲ್ಲಿಯೂ ಇತ್ತೀಚಿಗೆ ಭಾರತದ ವಾಯು ಸೇನಾ ರೇಡಾರ್ ಗಳ ಕಣ್ಣು ತಪ್ಪಿಸಿ ಅತ್ಯಂತ ಕೆಳ ಮಟ್ಟದಲ್ಲಿ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಲು ಚೀನಾ ದೇಶದಿಂದ ಆಮದು ಮಾಡಿಕೊಂಡ ಡ್ರೋನ್ ಗಳನ್ನು ಬಳಸುತ್ತಿದ್ದ ಪಾಕಿಸ್ತಾನಕ್ಕೆ ಇದೀಗ ದೊಡ್ಡ ಶಾಕ್ ಎದುರಾಗಿದೆ, ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಪಾಕಿಸ್ತಾನದಿಂದ ಎದುರಾಗುತ್ತಿರುವ ಡ್ರೋನ್ ಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಭಾರತ ಹಾಗೂ ಪಾಕಿಸ್ತಾನದ ಗಡಿಗಳ ನಡುವೆ ಡ್ರೋನ್ ವಿರೋಧಿ ಶಸ್ತ್ರಾಸ್ತ್ರಗಳನ್ನು ನಿಯೋಜನೆ ಮಾಡಲು ಆದೇಶ ನೀಡಿತ್ತು.

ಆದರೆ ಭಾರತದ ಬಳಿ ಅತ್ಯಾಧುನಿಕ ಡ್ರೋನ್ ಗಳನ್ನು ತಡೆಗಟ್ಟುವ ಯಾವುದೇ ಟೆಕ್ನಾಲಜಿ ಇರಲಿಲ್ಲ. ಸಾಮಾನ್ಯವಾಗಿ ಇದರಿಂದ ಭಾರತವು ಮತ್ತೊಂದು ರಾಷ್ಟ್ರದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿತ್ತು. ಆದರೆ ಯಾವುದೇ ರಾಷ್ಟ್ರವು ಕೂಡಲೇ ತನ್ನ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವುದಾಗಲಿ ಅಥವಾ ಬೇರೊಂದು ದೇಶದ ಜೊತೆ ಡೆವಲಪ್ಮೆಂಟ್ ಟೆಕ್ನಾಲಜಿ ಹಂಚಿಕೊಳ್ಳುವುದಾಗಲಿ ಮಾಡುವುದಿಲ್ಲ. ಆದರೆ ಅಷ್ಟರಲ್ಲಾಗಲೇ ಭಾರತದ ಆಪ್ತ ಮಿತ್ರ ಎನಿಸಿಕೊಂಡಿರುವ ಇಸ್ರೇಲ್ ದೇಶ ಭಾರತದ ಸಮಸ್ಯೆಯನ್ನು ಕೇಳಿಸಿಕೊಂಡು ಪರಿಹಾರದೊಂದಿಗೆ ಮುಂದೆ ಬಂದಿದೆ. ಇಡೀ ವಿಶ್ವವನ್ನು ತನ್ನ ಅತ್ಯಾಧುನಿಕ ಡ್ರೋನ್ ಟೆಕ್ನಾಲಜಿ ಸೇರಿದಂತೆ ವಾಯು ಪಡೆಯ ಶಸ್ತ್ರಾಸ್ತ್ರಗಳ ಮೂಲಕ ಸೆಳೆದಿರುವ ಇಸ್ರೇಲ್ ದೇಶವು ಇದೀಗ ಭಾರತಕ್ಕೆ ಎಲ್ಲಾ ರೀತಿಯ ಡ್ರೋನ್ ಗಳನ್ನು ತಡೆಯುವಂತಹ ಡ್ರೋನ್ ವಿರೋಧಿ ಶಸ್ತ್ರಾಸ್ತ್ರಗಳ ಪೂರೈಕೆಗೆ ತಾನು ಸಿದ್ಧವಿರುವುದಾಗಿ ಘೋಷಿಸಿದೆ. ಗಡಿಯಲ್ಲಿ ಬಹಳ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿರುವ ಕಾರಣ ಈ ಕೂಡಲೇ ಅತ್ಯಾಧುನಿಕ ಡ್ರೋನ್ ಗಳನ್ನು ಹಾಗೂ ಡ್ರೋನ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಕಳುಹಿಸಿಕೊಡುವುದಾಗಿ ಮುಂದೆ ಬಂದಿದೆ.

Facebook Comments

Post Author: RAVI