ಚಕ್ರವರ್ತಿ ಸೂಲಿಬೆಲೆ vs ಸದಾನಂದಗೌಡ ಕಾಳಗದ ಕುರಿತು ಸುರೇಶ್ ಕುಮಾರ್ ರವರು ನೀಡಿದ ಸಲಹೆ ಏನು ಗೊತ್ತಾ??

ಚಕ್ರವರ್ತಿ ಸೂಲಿಬೆಲೆ vs ಸದಾನಂದಗೌಡ ಕಾಳಗದ ಕುರಿತು ಸುರೇಶ್ ಕುಮಾರ್ ರವರು ನೀಡಿದ ಸಲಹೆ ಏನು ಗೊತ್ತಾ??

ಇದೀಗ ಉತ್ತರ ಕರ್ನಾಟಕಕ್ಕೆ ನರೇಂದ್ರ ಮೋದಿ ರವರು ಪರಿಹಾರ ಘೋಷಣೆ ಮಾಡಿಲ್ಲ ಎಂದು ಇಡೀ ಕರ್ನಾಟಕ ದಲ್ಲಿ ಆಕ್ರೋಶದ ಮಾತುಗಳು ಕೇಳಿ ಬಂದಿವೆ. ಮತ್ತೊಂದೆಡೆ ಕೆಲವು ಸಂಸದರನ್ನು ಪ್ರಶ್ನೆ ಮಾಡಿದರೇ, ಬಹುತೇಕ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಇರುವ ಕಾರಣ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದಿಂದ ಬರುವ ಹಣವನ್ನು ದುರುಪಯೋಗ ಪಡಿಸಿಕೊಳ್ಳಬಹುದು ಅಷ್ಟೇ ಅಲ್ಲದೆ ಬಿಡುಗಡೆಯಾದ ಹಣ ಸಂಪೂರ್ಣವಾಗಿ ಸಂತ್ರಸ್ತರ ಕೈಗೆ ತಲುಪದೆ ಹೋಗುವ ಸಂದರ್ಭ ಉಂಟಾಗಾಬಾರದು ಎಂಬ ಮುಂದಾಲೋಚನೆ ಯಿಂದ ನೆರೆ ಪರಿಹಾರದ ಹಣವನ್ನು ನೇರವಾಗಿ ಎಲ್ಲಾ ಸಂತ್ರಸ್ತರಿಗೆ ವರ್ಗಾವಣೆ ಮಾಡುವ ಯೋಜನೆ ರೂಪಿಸುತ್ತಿದೆ ಎಂದು ಹೇಳುತ್ತಿದ್ದಾರೆ, ಮತ್ತಷ್ಟು ಸಂಸದರು ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವಂತಹ ಪರಿಸ್ಥಿತಿ ಎದುರಾಗಿದೆ ಆದಕಾರಣ ಪರಿಹಾರ ಘೋಷಣೆ ವಿಳಂಬವಾಗುತ್ತಿದೆ ಎನ್ನುತ್ತಿದ್ದಾರೆ.

ಇದೇ ವಿಷಯದ ಕುರಿತು ಚಕ್ರವರ್ತಿ ಸೂಲಿಬೆಲೆ ಹಾಗೂ ಸದಾನಂದ ಗೌಡರ ನಡುವೆ ಕಾಳಗ ತಾರಕಕ್ಕೇರಿದೆ. ಇದರ ಬಗ್ಗೆ ಈಗಾಗಲೇ ನಿಮಗೆಲ್ಲರಿಗೂ ತಿಳಿದೇ ಇದೆ, ಚಕ್ರವರ್ತಿ ಸೂಲಿಬೆಲೆ ರವರು ವೈಯಕ್ತಿಕ ನಿಂದನೆ ಮಾಡಿದ ಕಾರಣ ಇದಕ್ಕೆ ನನ್ನ ಬಳಿ ಉತ್ತರವಿಲ್ಲ ಎಂದ ಸದಾನಂದ ಗೌಡರಿಗೆ ಚಕ್ರವರ್ತಿ ಸೂಲಿಬೆಲೆ ರವರು ಕಠಿಣ ಮಾತುಗಳ ಮೂಲಕ ಉತ್ತರ ನೀಡಿದ ನಂತರ ಸದಾನಂದ ಗೌಡರು ಸಹ ತಿರುಗೇಟು ನೀಡಿ ಟ್ವಿಟ್ಟರ್ನಲ್ಲಿ ಚಕ್ರವರ್ತಿ ಸೂಲಿಬೆಲೆ ರವರನ್ನು ಬ್ಲಾಕ್ ಮಾಡಿದ್ದಾರೆ. ಈ ಎಲ್ಲಾ ವಿದ್ಯಮಾನಗಳಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಸಚಿವ ಸುರೇಶ್ ಕುಮಾರ್ ರವರು, ಒಳ್ಳೆಯ ಉದ್ದೇಶಕ್ಕೆ ವಿವಿಧ ರೀತಿಯಲ್ಲಿ ಕಾರ್ಯ ಮಾಡುತ್ತಿರುವವರ ನಡುವೆ ವಿರಸ ಒಳಿತಲ್ಲ. ಅಂದರೇ ಎಲ್ಲರೂ ಒಳ್ಳೆಯ ಉದ್ದೇಶದ ಕಾರಣಕ್ಕೆ ಕಾರ್ಯನಿರ್ವಹಣೆ ಮಾಡುತ್ತಿದ್ದೀರಾ, ಎಲ್ಲರ ಮೂಲ ಗುರಿ ಒಂದೇ, ಇದರಲ್ಲಿ ವಿರಸ ಒಳಿತಲ್ಲ ಎಂದು ಸಲಹೆ ನೀಡಿದ್ದಾರೆ.