ಧೋನಿ ಬದಲಿ ಆಟಗಾರನ ಹೆಸರು ನೇಮಿಸಿದ ಸೌರವ್ ಗಂಗೂಲಿ- ಮೂರು ಮಾದರಿಗೂ ಇವನೇ ಪರಿಹಾರವಂತೆ !!

ಇದೀಗ ಎಲ್ಲಿ ನೋಡಿದರೂ ಧೋನಿ ರವರ ನಿವೃತ್ತಿಯ ಮಾತು ಕೇಳಿಬರುತ್ತಿದೆ. ಭಾರತೀಯ ಕ್ರಿಕೆಟ್ ತಂಡ ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿರುವ ಮಹೇಂದ್ರ ಸಿಂಗ್ ದೋನಿ ರವರು ನಿವೃತ್ತಿಯ ಅಂಚಿನಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಲವಾರು ವರ್ಷಗಳಿಂದ ಈ ಮಾತು ಕೇಳಿ ಬರುತ್ತಿದೆಯಾದರೂ ಮಹೇಂದ್ರ ಸಿಂಗ್ ಧೋನಿ ರವರು ನಿವೃತ್ತಿಯ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಹೀಗಿರುವಾಗ ಭಾರತದ ಮುಂದಿನ ಭವಿಷ್ಯದ ವಿಕೆಟ್ ಕೀಪರ್ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಅದರಲ್ಲಿಯೂ ಏಕದಿನ ಟಿ-ಟ್ವೆಂಟಿ ಹಾಗೂ ಟೆಸ್ಟ್ ಕ್ರಿಕೆಟ್ ನ ಮಾದರಿಗಳಿಗೆ ಯಾವ ವಿಕೆಟ್ ಕೀಪರ್ ಬೆಸ್ಟ್ ಎಂದು ಈಗಾಗಲೇ ಎಲ್ಲೆಡೆ ಚರ್ಚೆ ಆರಂಭವಾಗಿದೆ. ಇದರ ಕುರಿತು ಇದೀಗ, ಬಂಗಾಳದ ಹುಲಿ ಎಂದೇ ಖ್ಯಾತಿ ಪಡೆದು ಕೊಂಡಿರುವ ಭಾರತ ಕ್ರಿಕೆಟ್ ತಂಡದ ಅಪ್ರತಿಮ ಮಾಜಿ ನಾಯಕ ಸೌರವ್ ಗಂಗೂಲಿ ರವರು ವಿಶ್ಲೇಷಣೆ ನೀಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬಗ್ಗೆ ಮಾತನಾಡಿರುವ ಸೌರವ್ ಗಂಗೂಲಿ ರವರು, ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿರುವ ಯುವ ಆಟಗಾರ ರಿಷಬ್ ಪಂತ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಹೌದು ಇದೀಗ ಇದರ ಬಗ್ಗೆ ಮಾತನಾಡಿರುವ ಸೌರವ್ ಗಂಗೂಲಿ, ಪಂತ್ ಅವರು ತಮ್ಮ ತಪ್ಪುಗಳಿಂದ ಕಲಿಯಬೇಕು. ಖಂಡಿತವಾಗಲೂ ಕಲಿಯುತ್ತಾರೆ, ಅದನ್ನು ನಾವು ಅರ್ಥಮಾಡಿಕೊಳ್ಳಬೇಕು, ತಂಡದ ಎಲ್ಲಾ ಆಟಗಾರರು ರಿಷಬ್ ಪಂತ್ ರವರ ಬೆಂಬಲಕ್ಕೆ ನಿಲ್ಲಬೇಕು. ಅಷ್ಟೇ ಅಲ್ಲದೆ ಪ್ರಮುಖವಾಗಿ ನಾಯಕ ವಿರಾಟ್ ಕೊಹ್ಲಿ ರವರು ಪಂತ್ ಬೆಂಬಲಕ್ಕೆ ನಿಲ್ಲಬೇಕು, ಒಂದು ವೇಳೆ ಅದೇ ನಡೆದಲ್ಲಿ ಪಂತ್ ರವರು ಮುಂದೊಂದು ದಿನ ಅಗ್ರಸ್ಥಾನಕ್ಕೆ ಏರುತ್ತಾರೆ, ರಿಷಬ್ ಪಂತ್ ರವರು ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪ್ರವೇಶಿಸಿದ ರೀತಿ ನನಗೆ ಬಹಳ ಇಷ್ಟವಾಗಿತ್ತು, ನನ್ನ ಪ್ರಕಾರ ಭಾರತ ಕ್ರಿಕೆಟ್ ನ ವಿಕೆಟ್ ಕೀಪರ್ ಸಮಸ್ಯೆಗೆ ಎಲ್ಲಾ ಮೂರು ಮಾದರಿಗಳಲ್ಲಿಯೂ ಪರಿಹಾರವಾಗುತ್ತಾನೆ, ಪಂದ್ಯ ಗೆಲ್ಲಿಸಿಕೊಡುವ ಆಟಗಾರನಾಗಿ ಬಹುಕಾಲ ಟೀಮ್ ಇಂಡಿಯಾದಲ್ಲಿ ಉಳಿಯುತ್ತಾನೆ ಎಂದಿದ್ದಾರೆ.

Facebook Comments

Post Author: RAVI