ಬಿಗ್ ಬ್ರೇಕಿಂಗ್: ಛಲಬಿಡದ ಇಸ್ರೋ ! ಸಂಚಲನ ಸೃಷ್ಟಿಸಿದ ಕೆ ಶಿವನ್ ಹೇಳಿಕೆ

ಬಿಗ್ ಬ್ರೇಕಿಂಗ್: ಛಲಬಿಡದ ಇಸ್ರೋ ! ಸಂಚಲನ ಸೃಷ್ಟಿಸಿದ ಕೆ ಶಿವನ್ ಹೇಳಿಕೆ

ಕಳೆದ ಕೆಲವು ದಿನಗಳ ಹಿಂದೆ ಇಡೀ ವಿಶ್ವವು ಭಾರತದತ್ತ ತಿರುಗಿ ನೋಡಿತ್ತು. ವಿಶ್ವದ ಹಲವಾರು ಪ್ರತಿಷ್ಠಿತ ಸಂಸ್ಥೆಗಳು ಮಾಡಲಾಗದ ಸಾಧನೆಯನ್ನು ಭಾರತದ ನಮ್ಮೆಲ್ಲರ ಹೆಮ್ಮೆಯ ಇಸ್ರೋ ಸಂಸ್ಥೆಯು ಮೊದಲ ಪ್ರಯತ್ನದಲ್ಲಿಯೇ ಸಾಧಿಸಿ ತೋರಿಸಿತ್ತು. ಕೊನೆ ಕ್ಷಣದಲ್ಲಿ ವಿಕ್ರಂ ಲ್ಯಾಂಡರ್ ಜೊತೆ ಸಂಪರ್ಕ ಕಳೆದುಕೊಂಡರೂ ಸಹ ಚಂದ್ರಯಾನ ಶೇಕಡ 95 ಕ್ಕಿಂತಲೂ ಹೆಚ್ಚು ಸಫಲಗೊಂಡು ಇಡೀ ವಿಶ್ವವೇ ಇಸ್ರೋ ವಿಜ್ಞಾನಿಗಳ ಚಾಕಚಕ್ಯತೆಗೆ ಸಲಾಂ ಹೊಡೆದಿದ್ದರು. ಇಡೀ ಭಾರತೀಯರು ಇಸ್ರೋ ಸಂಸ್ಥೆಯ ಪರ ನಿಂತು ನೀವು ಸೋತಿಲ್ಲ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಸಾರಿ ಹೇಳಿದ್ದರು. ಆದರೆ ಕೆಲವರು ಕೀಳು ಮನಸ್ಸಿನ ಜನರು ಅದ್ಯಾವ ಕಾರಣಕ್ಕೂ ತಿಳಿದಿಲ್ಲ ಇಸ್ರೋ ಸಂಸ್ಥೆಯ ಸೋಲನ್ನು ಸಂಭ್ರಮಾಚರಣೆ ಮಾಡಿದ್ದರು.

ಇಡೀ ವಿಶ್ವವೇ ಇಸ್ರೋ ಸಂಸ್ಥೆಯ ಸಾಧನೆಗೆ ಭೇಷ್ ಎನ್ನುತ್ತಿರುವ ಸಂದರ್ಭದಲ್ಲಿ ಕೆಲವು ಕೀಳುಮಟ್ಟದ ಇಲ್ಲಿನ ಜನರು ಇಸ್ರೋ ಸಂಸ್ಥೆಯ ಸೋಲನ್ನು ಸಂಭ್ರಮಾಚರಣೆ ಮಾಡುವ ಮೂಲಕ ಹಲವಾರು ಜನರ ಕೆಂಗಣ್ಣಿಗೆ ಗುರಿಯಾಗಿದ್ದರು‌. ಆದರೆ ಇದೀಗ ಬಂದ ಸುದ್ದಿ ಕೇಳಿದರೇ ಕೀಳು ಮಟ್ಟದ ಜನರಿಗೆ ಖಂಡಿತವಾಗಲೂ ಬರ್ನಾಲ್ ಬೇಕಾಗುತ್ತದೆ. ಅಷ್ಟೇ ಅಲ್ಲದೆ ಇಸ್ರೋ ಸಾಧನೆಯನ್ನು ಹಾಡಿ ಹೊಗಳಿದ ನಿಜವಾದ ಭಾರತೀಯರಿಗೆ ಭರ್ಜರಿ ಗುಡ್ ನ್ಯೂಸ್ ಇದೀಗ ಸಿಕ್ಕಿದೆ. ಇಸ್ರೋ ಸಂಸ್ಥೆಯ ಅಧ್ಯಕ್ಷರಾಗಿರುವ ನಮ್ಮೆಲ್ಲರ ನೆಚ್ಚಿನ ಕೆ ಶಿವನ್ ರವರು ಇದೀಗ ಮಾಧ್ಯಮದೊಂದಿಗೆ ಮಾತನಾಡಿ ಖಚಿತ ಮಾಹಿತಿಯನ್ನು ನೀಡಿದ್ದಾರೆ, ಈ ಮೂಲಕ ಮತ್ತೊಮ್ಮೆ ಭಾರತೀಯರಲ್ಲಿ ಆಸೆ ಗರಿಗೆದರಿದೆ.

ಅಂದು ನಮಗೆ ವಿಕ್ರಮ್ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸಲು ಹದಿನಾಲ್ಕು ದಿನಗಳ ಕಾಲಾವಕಾಶ ಮಾತ್ರ ಇದೆ ಎಂದಿದ್ದ ಕೆ ಶಿವನ್ ರವರು ಇದೀಗ ಮತ್ತೊಮ್ಮೆ ಮಹತ್ವದ ಮಾಹಿತಿಯನ್ನು ಹೊರಹಾಕಿದ್ದಾರೆ. ಇದೀಗ ನಾವು ವಿಕ್ರಂ ಲ್ಯಾಂಡರ್ ಲ್ಯಾಂಡ್ ಮಾಡಿದ ಸ್ಥಳದಲ್ಲಿ ಕತ್ತಲು ಕವಿದಿದೆ ಹಾಗೂ ಬಹಳ ತಣ್ಣನೆಯ ವಾತಾವರಣವಿದೆ. ಕತ್ತಲು ಕವಿದಿರುವ ಕಾರಣ ಬೆಳಕು ಇಲ್ಲದೆ ನಾವು ವಿಕ್ರಮ್ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. ನಾವು ವಿಕ್ರಂ ಲ್ಯಾಂಡರ್ ಅನ್ನು ಎಂತಹ ಸಂದಿಗ್ಧ ತಣ್ಣನೆಯ ವಾತಾವರಣದಲ್ಲಿಯೂ ಸಹ ಕಾರ್ಯ ನಿರ್ವಹಿಸುವಂತೆ ಡಿಸೈನ್ ಮಾಡಿದ್ದೇವೆ. ಖಂಡಿತ ಅದು ತಣ್ಣನೆಯ ವಾತಾವರಣದಲ್ಲಿ ಏನೂ ತೊಂದರೆಯಾಗದೆ ಉಳಿದಿರುತ್ತದೆ.

ಆದ ಕಾರಣದಿಂದ ವಿಕ್ರಮ್ ಲ್ಯಾಂಡರ್ ನ ಬಳಿ ಬೆಳಕು ಬಂದ ತಕ್ಷಣ ನಾವು ವಿಕ್ರಮ್ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ಮೊದಲು ಕೇವಲ 14 ದಿನಗಳ ಕಾಲಾವಕಾಶ ಇದೆ ಎಂದು ಮಾತ್ರ ಅಂದುಕೊಂಡಿದ್ದೆವು. ಆದರೆ ಇದೀಗ ಸಹ ಅವಕಾಶ ಇದೆ. ಆದ ಕಾರಣದಿಂದ ಬೆಳಕು ಬಂದ ಕೂಡಲೇ ನಾವು ಮತ್ತೊಮ್ಮೆ ಪ್ರಯತ್ನಪಡುತ್ತೇವೆ, ಸಾಧ್ಯವಾಗದೇ ಇದ್ದರೆ ನಾವು ಕಳೆದುಕೊಳ್ಳುವುದು ಏನೂ ಇಲ್ಲ ಆದರೆ ಒಂದು ವೇಳೆ ಯಶಸ್ವಿಯಾದರೆ ಹೇಗಿರುತ್ತದೆ ಎಂದು ಮರುಪ್ರಶ್ನೆ ಮಾಡಿದ್ದಾರೆ. ಇಸ್ರೋ ಸಂಸ್ಥೆಯ ಈ ಪ್ರಯತ್ನ ಯಶಸ್ವಿಯಾಗಲಿ ಎಂದು ಕನ್ನಡಿಗರ ಪರವಾಗಿ ನಮ್ಮ ಕರುನಾಡ ವಾಣಿ ತಂಡದಿಂದ ಶುಭ ಹಾರೈಸುತ್ತೇವೆ. ಒಂದು ವೇಳೆ ಈ ಲೇಖನ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಮತ್ತಷ್ಟು ಮಾಹಿತಿಗಳಿಗಾಗಿ ಕರುನಾಡ ವಾಣಿ ಅನ್ನು ಫಾಲೋ ಮಾಡಿ.