4 ನೇ ಕ್ರಮಾಂಕಕ್ಕೆ ಸೂಕ್ತ ಇಬ್ಬರನ್ನು ಹೆಸರಿಸಿದ ದಾದಾ ! ಕನ್ನಡಿಗನಿಗೂ ಸ್ಥಾನ ನೀಡಿದ ಬಂಗಾಳದ ಹುಲಿ

4 ನೇ ಕ್ರಮಾಂಕಕ್ಕೆ ಸೂಕ್ತ ಇಬ್ಬರನ್ನು ಹೆಸರಿಸಿದ ದಾದಾ ! ಕನ್ನಡಿಗನಿಗೂ ಸ್ಥಾನ ನೀಡಿದ ಬಂಗಾಳದ ಹುಲಿ

ಕಳೆದ ಕೆಲವು ವರ್ಷಗಳಿಂದ ಭಾರತ ಕ್ರಿಕೆಟ್ ತಂಡವು ಎಷ್ಟೇ ಯಶಸ್ಸನ್ನು ಗಳಿಸಿದರೂ ಸಹ ಯುವರಾಜ್ ಸಿಂಗ್ ರವರ ಸ್ಥಾನವನ್ನು ತುಂಬಲು ಮಾತ್ರ ಯಾರೊಬ್ಬರಿಂದಲೂ ಸಾಧ್ಯವಾಗಿಲ್ಲ. ಭಾರತೀಯ ತಂಡಕ್ಕೆ 4ನೇ ಕ್ರಮಾಂಕ ಇನ್ನೂ ತಲೆನೋವಾಗಿ ಕಾಡುತ್ತಿದೆ. ಈಗಾಗಲೇ ನಾಲ್ಕನೇ ಕ್ರಮಾಂಕದಲ್ಲಿ ಆಡಿರುವ ಕೆ ಎಲ್ ರಾಹುಲ್, ಆಲ್ರೌಂಡರ್ ವಿಜಯಶಂಕರ್ ಹಾಗೂ ವಿಕೆಟ್ ಕೀಪರ್ ರಿಷಬ್ ಪಂತ್ ಅವರು ಸಹ ಅದೃಷ್ಟ ಪರೀಕ್ಷೆ ಮಾಡಿ ವಿಫಲರಾಗಿದ್ದಾರೆ. ಯಾರೊಬ್ಬರೂ ಸಹ ಯುವರಾಜ್ ಸಿಂಗ್ ಅವರ ಸ್ಥಾನವನ್ನು ತುಂಬಲು ಮಾತ್ರ ಸಾಧ್ಯವಾಗಿಲ್ಲ. ಹೀಗಿರುವಾಗ ಭಾರತೀಯ ಕ್ರಿಕೆಟ್ ಕಂಡ ಲೆಜೆಂಡ್ ಗಳಲ್ಲಿ ಒಬ್ಬರಾಗಿರುವ ಮಾಜಿ ನಾಯಕ ಸೌರವ್ ಗಂಗೂಲಿ ರವರು ಇದೀಗ ನಾಲ್ಕನೇ ಕ್ರಮಾಂಕಕ್ಕೆ ಇಬ್ಬರು ಆಟಗಾರರ ಹೆಸರನ್ನು ಸೂಚಿಸಿದ್ದಾರೆ.

ಹೌದು, ಇದರ ಬಗ್ಗೆ ಮಾತನಾಡಿರುವ ಸೌರವ್ ಗಂಗೂಲಿ ರವರು ಯುವ ಬ್ಯಾಟ್ಸ್ಮನ್ ಗಳಾಗಿರುವ ದೆಹಲಿಯ ಶ್ರೇಯಸ್ ಅಯ್ಯರ್ ಹಾಗೂ ಕನ್ನಡಿಗ ಮನೀಶ್ ಪಾಂಡೆ ರವರನ್ನು ಆಯ್ಕೆ ಮಾಡಿ ಖಂಡಿತವಾಗಿಯೂ ಇಬ್ಬರು ಆಟಗಾರರು ಭಾರತದ ನಾಲ್ಕನೇ ಕ್ರಮಾಂಕಕ್ಕೆ ಸರಿಹೊಂದುತ್ತಾರೆ ಎಂದು ಸಲಹೆ ನೀಡಿದ್ದಾರೆ. ಇತ್ತೀಚೆಗೆ ನಡೆದ ಕೆಲವು ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ಅವರು 4ನೇ ಕ್ರಮಾಂಕ ಹಾಗೂ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಉತ್ತಮ ರನ್ಗಳನ್ನು ಕಲೆಹಾಕಿದ್ದರು. ಇನ್ನು ಮೊದಲಿನಿಂದಲೂ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮನೀಶ್ ಪಾಂಡೆ ರವರು ಸಹ ಈ ಸ್ಥಾನಕ್ಕೆ ಅರ್ಹರು ಮಾಜಿ ನಾಯಕ ಸೌರವ್ ಗಂಗೂಲಿ ಅವರು ಅಭಿಪ್ರಾಯಪಟ್ಟಿದ್ದಾರೆ.