ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿದ ಬಿಜೆಪಿ ಶಾಸಕ ! ಯಾಕೆ ಗೊತ್ತೇ??

ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿದ ಬಿಜೆಪಿ ಶಾಸಕ ! ಯಾಕೆ ಗೊತ್ತೇ??

ಇದೀಗ ಕಳೆದ ಕೆಲವು ದಿನಗಳ ಹಿಂದೆ ತೇಜಸ್ವಿಸೂರ್ಯ ರವರು ನೀಡಿದ ಹೇಳಿಕೆಯೊಂದು ಭಾರೀ ಸದ್ದು ಮಾಡುತ್ತಿದೆ. ಕರ್ನಾಟಕ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವ ಕಾರಣ, ಉತ್ತರ ಕರ್ನಾಟಕದ ಪ್ರವಾಹ ಸಮಸ್ಯೆಗೆ ಪರಿಹಾರ ನೀಡಲು ಕೇಂದ್ರ ಸರ್ಕಾರದ ನೆರವಿನ ಅಗತ್ಯವಿಲ್ಲ ಎಂದು ಇತ್ತೀಚೆಗೆ ಯುವ ಸಂಸದ ತೇಜಸ್ವಿ ಸೂರ್ಯ ರವರು ಹೇಳಿಕೆ ನೀಡಿದ್ದರು. ಅದಾದ ಮೇಲೆ ತೇಜಸ್ವಿ ಸೂರ್ಯ ರವರ ಮೇಲೆ ವಿರೋಧ ಪಕ್ಷದ ನಾಯಕರು ಬಾರಿ ಆಕ್ರೋಶದ ಮಾತುಗಳನ್ನು ಹೊರಹಾಕಿದ್ದರು. ಕಾಂಗ್ರೆಸ್ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿಗಳಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಸಹ ಈ ಹೇಳಿಕೆಯ ವಿರುದ್ಧ ಮಾತನಾಡಿದ್ದರು. ಇದೀಗ ಬಿಜೆಪಿ ಶಾಸಕರೊಬ್ಬರು ಸಹ ತೇಜಸ್ವಿ ಸೂರ್ಯ ರವರ ಈ ಹೇಳಿಕೆಯ ವಿರುದ್ಧ ಕಿಡಿಕಾರಿದ್ದಾರೆ.

ಹೌದು ಇದೀಗ ಇದರ ಕುರಿತು ಮಾತನಾಡಿರುವ ಬಿಜೆಪಿ ಪಕ್ಷದ ವಿಜಯಪುರ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಅವರು ತೇಜಸ್ವಿ ಸೂರ್ಯ ರವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೇಜಸ್ವಿ ಸೂರ್ಯ ರವರ ಹೇಳಿಕೆ ಬೇಜವಾಬ್ದಾರಿ ಹೇಳಿಕೆ ಎಂದು ಕಿಡಿಕಾರಿದ್ದಾರೆ. ಈ ಕೂಡಲೇ ಯುವ ಸಂಸದ ತೇಜಸ್ವಿಸೂರ್ಯ ರವರು ಈ ಹೇಳಿಕೆಯನ್ನು ವಾಪಸ್ಸು ಪಡೆಯಬೇಕು ಎಂದು ಒತ್ತಾಯ ಮಾಡಿದ್ದಾರೆ. ಭೀಕರ ಪ್ರವಾಹದಿಂದ ಉತ್ತರ ಕರ್ನಾಟಕದ ಜನತೆ ಕಣ್ಣೀರು ಹಾಕುತ್ತಿದ್ದಾರೆ, ಪ್ರವಾಹ ಮುಗಿದು ಎರಡು ತಿಂಗಳು ಕಳೆದಿದೆ ಆದರೂ ಸಹ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಉತ್ತರ ಕರ್ನಾಟಕದ ಜನತೆಯ ಸಹಾಯಕ್ಕೆ ಆಗಮಿಸಬೇಕು, ಇದು ಕೇಂದ್ರ ಸರ್ಕಾರದ ಕರ್ತವ್ಯ ಕೂಡ ಹೌದು. ಈ ರೀತಿಯ ಹೇಳಿಕೆಗಳು ನೀಡಿದರೇ ಉತ್ತರ ಕರ್ನಾಟಕದ ಜನತೆ ಕಣ್ಣು ಮುಚ್ಚಿ ಕೂರುವುದಿಲ್ಲ, ಕೇಂದ್ರ ಸರ್ಕಾರದ ಬಳಿ ಭಿಕ್ಷೆ ಬೇಡುತ್ತಿಲ್ಲ, ಎಲ್ಲಿಯೋ ಕೂತು ಈ ರೀತಿ ಹೇಳಿಕೆ ನೀಡುವ ಬದಲು ಇಲ್ಲಿಗೆ ಬಂದು ನೋಡಲಿ ಎಂದಿದ್ದಾರೆ.