ತೇಜಸ್ವಿ ಸೂರ್ಯ ರವರ ಮೇಲೆ ಹೊಸ ಆರೋಪ ಮಾಡಿದ ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ್ !

ತೇಜಸ್ವಿ ಸೂರ್ಯ ರವರ ಮೇಲೆ ಹೊಸ ಆರೋಪ ಮಾಡಿದ ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ್ !

ಇದೀಗ ಬೆಂಗಳೂರು ದಕ್ಷಿಣ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ ರವರು ನೀಡಿದ್ದ ಹೇಳಿಕೆ ಬಾರಿ ಸದ್ದು ಮಾಡುತ್ತಿದೆ. ನರೇಂದ್ರ ಮೋದಿ ರವರು, ಕೇಂದ್ರ ಸರ್ಕಾರದಿಂದ ಯಾವುದೇ ಪರಿಹಾರ ಹಣವನ್ನು ನೆರೆ ಸಂತ್ರಸ್ತ್ರರಿಗೆ ನೀಡಿಲ್ಲ ಎಂದು ಪ್ರತಿ ಪಕ್ಷಗಳು ವಾಗ್ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ರವರು ಬಹಳ ಅಳೆದು ತೂಗುವಂತಹ ಮಾತನಾಡಿದ್ದರು. ಅದುವೇ, ಕರ್ನಾಟಕ ರಾಜ್ಯಕ್ಕೆ ನೆರೆ ಪರಿಹಾರ ನೀಡಲು ಕೇಂದ್ರ ಸರ್ಕಾರದ ನೆರವು ಅಗತ್ಯವಿಲ್ಲ ಎಂಬುದು. ಈ ಮಾತನ್ನು ದೇವೇಗೌಡರವರು ಸಹ ಒಪ್ಪಿಕೊಂಡಿದ್ದರು. ಕೆಲವರು ಈ ಮಾತನ್ನು ವಿವಾದವನ್ನಾಗಿ ಬಿಂಬಿಸಿದ್ದರು. ಈಗಾಗಲೇ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಅನುದಾನವನ್ನು ನೀಡಿದೆ, ಇನ್ನು GST ತೆರಿಗೆ ಪದ್ಧತಿ ಜಾರಿಯಾದ ಮೇಲೆ ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ಹಣ ಹರಿದುಬರುತ್ತಿದೆ.ಬಹುಶಃ ಇದೇ ಕಾರಣಕ್ಕೆ ತೇಜಸ್ವಿ ಸೂರ್ಯ ರವರು ಈ ರೀತಿ ಹೇಳಿರಬಹುದು.

ಇದೀಗ ಇದೇ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಚ್.ಕೆ.ಪಾಟೀಲ್ ರವರು, ಈ ಕೂಡಲೇ ತೇಜಸ್ವಿ ಸೂರ್ಯ ನೆರೆ ಸಂತ್ರಸ್ತರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು, ಜನರು ನೆರೆ ಸಂಕಷ್ಟಕ್ಕೆ ಸಿಲಿಕಿರುವ ಇಂತಹ ಕಠಿಣ ಸಂದರ್ಭದಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಕನ್ನಡಿಗರಿಗೆ ಅಗೌರವ ತೋರಿದ್ದಾರೆ. ಈ ಹೇಳಿಕೆಯಿಂದ ತೇಜಸ್ವಿ ಸೂರ್ಯ ರವರಿಗೆ ಕನ್ನಡಿಗರ ಮೇಲೆ ಎಷ್ಟು ಕಾಳಜಿ ಇದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಬೆಳಗಾವಿಯಲ್ಲಿ ಕೂತು ಈ ರೀತಿಯ ಹೇಳಿಕೆ ನೀಡುತ್ತಾರೆ, ಇನ್ನು ಡೆಲ್ಲಿ ಯಲ್ಲಿ ಕುಳಿತು ಯಾವ ರೀತಿ ಮಾತನಾಡಬಹುದು, ನರೇಂದ್ರ ಮೋದಿ ಕರ್ನಾಟಕ ರಾಜ್ಯಕ್ಕೆ ನೆರೆ ಪರಿಸ್ಥಿತಿ ವೀಕ್ಷಣೆ ಮಾಡಲು ಬರದೇ ಇರಲು ತೇಜಸ್ವಿ ಸೂರ್ಯ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.