ಕುರ್ಚಿ ಕಳೆದುಕೊಂಡಾಗ, ನಿವೃತ್ತಿ ಆಲೋಚನೆ ನಂತರ ರಾಜಕೀಯದಲ್ಲಿ ಉಳಿಯಲು ಕಾರಣ ತಿಳಿಸಿದ HDK . ಯಾಕೆ ಗೊತ್ತಾ??

ಕುರ್ಚಿ ಕಳೆದುಕೊಂಡಾಗ, ನಿವೃತ್ತಿ ಆಲೋಚನೆ ನಂತರ ರಾಜಕೀಯದಲ್ಲಿ ಉಳಿಯಲು ಕಾರಣ ತಿಳಿಸಿದ HDK . ಯಾಕೆ ಗೊತ್ತಾ??

ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ರವರು, ಈ ಹಿಂದೆಯೂ ಹಲವಾರು ಬಾರಿ ರಾಜಕೀಯ ನಿವೃತ್ತಿಯ ಮಾತುಗಳನ್ನು ಆಡಿದ್ದಾರೆ. ಎಲ್ಲಿಯೂ ಅಧಿಕೃತವಾಗಿ ತಮ್ಮ ನಿವೃತ್ತಿಯ ಬಗ್ಗೆ ಘೋಷಣೆ ಮಾಡದೆ ಇದ್ದರೂ, ಹಲವಾರು ಬಾರಿ ಸಂದರ್ಶದ ನೀಡುವಾಗ ಅಥವಾ ತಮ್ಮ ಪಕ್ಷದ ಸಭೆಗಳಲ್ಲಿ ನಾನು ರಾಜಕೀಯ ನಿರ್ವೃತ್ತಿ ತೆಗೆದುಕೊಳ್ಳಬೇಕು ಎಂದು ಕೊಂಡಿದ್ದೇ ಆದರೆ ಪ್ರತಿ ಬಾರಿಯೂ ಕೆಲವೊಂದು ಕಾರಣಗಳು ನನ್ನನ್ನು ತಡೆಯಿತು ಎಂದು ಸಮರ್ಥನೆ ಮಾಡಿಕೊಳ್ಳುತ್ತಾರೆ. ಕಳೆದ ವಿಧಾಸಭಾ ಚುನಾವಣೆಯ ಫಲಿತಾಂಶದ ಸಮಯದಲ್ಲಿ ಇನ್ನೇನು ರಾಜೀನಾಮೆ ಘೋಷಣೆ ಮಾಡ್ಬೇಕು ಎಂದುಕೊಂಡಿದ್ದೆ ಆದರೆ ಕಾಂಗ್ರೆಸ್ ನಾಯಕರು ನೀನು ಮುಖ್ಯಮಂತ್ರಿಯಾಗು ಎಂದ ಕಾರಣ ತನ್ನ ನಿರ್ಧಾರವನ್ನು ವಾಪಸ್ಸು ತೆಗೆದುಕೊಂಡಿದ್ದೆ ಎಂದಿದ್ದರು.

ಇದೀಗ ಅದೇ ರೀತಿ, ಮುಖ್ಯಮಂತ್ರಿ ಸ್ಥಾನ ಕಳೆದುಕೊಡಾಗ ಯೋಚನೆ ಮಾಡಿದ್ದರಂತೆ ಕುಮಾರಸ್ವಾಮಿ. ಹೌದು ಮೈತ್ರಿ ಸರ್ಕಾರ ಉರುಳಿದಾಗ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಮುಂದಾಗಿದ್ದರಂತೆ ಆದರೆ ಈ ಬಾರಿಯೂ ಕೇವಲ ಒಂದು ಕಾರಣದಿಂದ ತೆಗೆದುಕೊಳ್ಳಲಿಲ್ಲವಂತೆ. ಅದೇನು ಗೊತ್ತಾ? ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕುಮಾರ ಸ್ವಾಮಿ ರವರು, ನನ್ನ ಬಳಿ ಪಾಪದ ದುಡ್ಡಿಲ್ಲ, ಒಂದೊಮ್ಮೆ ಪಾಪದ ಹಣ ನನ್ನ ಬಳಿ ಇದ್ದಿದ್ದರೆ, ನಾನು ಶಾಸಕರನ್ನು ಹಿಡಿದು ಇಟ್ಟಿಕೊಳ್ಳುತ್ತಿದೆ. ನಾನು ಮುಖ್ಯ ಮಂತ್ರಿ ಆಗಿದ್ದು ಹಲವಾರು ಜನರ ಹೊಟ್ಟೆ ಹುರಿಗೆ ಕಾರಣವಾಗಿದೆ. ರಾಜಕೀಯ ದುರುದ್ದೇಶದಿಂದ ನನ್ನ ಹೆಸರನ್ನು ಹಲವಾರು ವಿಚಾರಗಳಲ್ಲಿ ತಳುಕು ಹಾಕುತ್ತಿದ್ದಾರೆ. ನನಗೆ ಕುರ್ಚಿ ಎಂದಿಗೂ ಸುಪ್ಪತ್ತಿಗೆಯಾಗಿರಲಿಲ್ಲ, ಮುಳ್ಳಿನ ಹಾಸಿಗೆ ಯಾಗಿತ್ತು. ಇದನೆಲ್ಲ ನೋಡಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳೋಣ ಎಂದು ಕೊಂಡಿದ್ದೆ ಆದರೆ ಬಡವರಿಗಾಗಿ ಹಾಗೂ ಜನರಿಗಾಗಿ ರಾಜಕೀಯದಲ್ಲಿ ಸಕ್ರಿಯವಾಗಿದ್ದೇನೆ ಎಂದು ಹೇಳಿದ್ದಾರೆ.