ರೇವಣ್ಣ ರವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಮಾಧು ಸ್ವಾಮಿ ! ಹೇಳಿದ್ದೇನು ಗೊತ್ತಾ??

ರೇವಣ್ಣ ರವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಮಾಧು ಸ್ವಾಮಿ ! ಹೇಳಿದ್ದೇನು ಗೊತ್ತಾ??

ಮೈತ್ರಿ ಸರ್ಕಾರದ ಅವಧಿಯಲ್ಲಿ ಸೂಪರ್ ಮುಖ್ಯಮಂತ್ರಿ ಎಂದು ಹೆಸರು ಪಡೆದುಕೊಂಡಿದ್ದ ರೇವಣ್ಣರವರು, ಪರೋಕ್ಷವಾಗಿ ಮೈತ್ರಿ ಸರ್ಕಾರ ಉರುಳಲು ಕಾರಣವಾಗಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು, ಯಾಕೆಂದರೆ ಬೆಂಗಳೂರಿನ ಶಾಸಕರು, ರೇವಣ್ಣ ರವರು ಬೆಂಗಳೂರಿನ ಪ್ರತಿ ವಿಚಾರದಲ್ಲೂ ಮೂಗು ತೂರಿಸಿ, ಇಲ್ಲಿನ ಶಾಸಕರನ್ನು ಕಡೆಗಣಿಸುತ್ತಿದ್ದಾರೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಮ್ಮ ಅಭಿಪ್ರಾಯ ಕೇಳುವುದೇ ಇಲ್ಲ, ಬದಲಾಗಿ ರೇವಣ್ಣ ರವರು ಹಾಗೂ ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ರವರು ಮಾತನಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಆರೋಪ ಮಾಡಿದ್ದರು. ಇಷ್ಟೇ ಅಲ್ಲದೆ, ರಾಜ್ಯದ ಪ್ರತಿಯೊಂದು ಇಲಾಖೆಯ ವಿಷಯದಲ್ಲಿಯೂ ರೇವಣ್ಣ ರವರು ಮೂಗು ತೂರಿಸುತ್ತಿದ್ದಾರೆ ಎಂಬ ಆರೋಪಗಳು ಹಲವಾರು ಬಾರಿ ಕೇಳಿಬಂದಿವೆ.

ಸರಿ, ಆಗ ಸರ್ಕಾರ ಅವರದ್ದಾಗಿತ್ತು ಆದ ಕಾರಣ ಏನೇ ಮಾಡಿದರೂ ಯಾರು ಕೇಳುವವರು ಇರಲಿಲ್ಲ. ಆದರೆ ಇಂದಿಗೂ ಸಹ ಹಾಸನ ಜಿಲ್ಲೆಯ ಪ್ರತಿಯೊಂದು ವಿಚಾರದಲ್ಲಿ ರೇವಣ್ಣ ರವರು ಮೂಗು ತೂರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಇದೇ ಪ್ರಶ್ನೆಗೆ ಉತ್ತರ ನೀಡಿರುವ ಮಾಧು ಸ್ವಾಮಿ ರವರು, ಹಾಸನ ಜಿಲ್ಲೆ ರೇವಣ್ಣ ರವರ ಸಾಮ್ರಾಜ್ಯವಲ್ಲ, ಹಾಸನ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿಯೇ ಇದೆ, ಹಾಸನ ಜಿಲ್ಲೆಯನ್ನು ಹೇಗೆ ರೈಲ್ವೆ ಹಳಿಗೆ ತರಬೇಕು ಎಂದು ನನಗೆ ತಿಳಿದಿದೆ ಹಾಗೂ ತರುವ ಸಾಮರ್ಥ್ಯ ತಮಗಿದೆ, ಆದ ಕಾರಣದಿಂದಲೇ ಹಾಸನ ಜಿಲ್ಲೆಯ ಉಸ್ತುವಾರಿಯನ್ನು ತಮಗೆ ಹೈ ಕಮಾಂಡ್ ನೀಡಿದೆ. ಎಲ್ಲಾ ಅಧಿಕಾರಿಗಳು ನನ್ನ ಮಾತನ್ನು ಕೇಳಲೇಬೇಕು ಎಂದು ಒತ್ತಡ ಹಾಕುವ ರಾಜಕಾರಣಿ ನಾನಲ್ಲ’ ಎಂದು ಎಚ್ಚರಿಸಿದರು.ಸಚಿವ ಸ್ಥಾನದ ಜೊತೆಗೆ ಎರಡು ಜಿಲ್ಲೆಯ ಉಸ್ತುವಾರಿ ಯನ್ನು ನಿರ್ವಹಣೆ ಮಾಡುವುದು ಕಷ್ಟದ ಕೆಲಸ ಅಲ್ಲ ಎಂದಿದ್ದಾರೆ.