ನುಸ್ರತ್ ಜಹಾನ್‌ರವರಿಗೆ ಮಹತ್ವದ ಹುದ್ದೆ ನೀಡಿದ ಮೋದಿ ಸರ್ಕಾರ !

ಪಕ್ಷಿಮ ಬಂಗಾಳದಿಂದ ಸಂಸದೆಯಾಗಿ ಗೆದ್ದು ಬಂದು, ತಮ್ಮ ಕೆಲವು ನಡೆಗಳ ಮೂಲಕ ಇಡೀ ದೇಶದಲ್ಲಿ ಸದ್ದು ಮಾಡಿದ್ದ ಯುವ ಸಂಸದೆ ನುಸ್ರತ್ ಜಹಾನ್‌ರವರಿಗೆ ಇದೀಗ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮಹತ್ವದ ಹುದ್ದೆ ನೀಡಿದೆ. ಹೌದು, ಕಳೆದ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರು ನೇತೃತ್ವ ವಹಿಸಿದ್ದ ಸಂಸದೀಯ ಸ್ಥಾಯಿ ಸಮಿತಿಗಳನ್ನು ಇದೀಗ ಬಿಜೆಪಿ ಪಕ್ಷ ಕಸಿದುಕೊಂಡಿದೆ. ಈ ಬಾರಿಯೂ ಬಾರಿ ಬಹುಮತ ಪಡೆದು ಕೊಂಡಿರುವ ಕಾರಣ ಸಂಸದೀಯ ಸ್ಥಾಯಿ ಸಮಿತಿಗಳನ್ನು ಕಾಂಗ್ರೆಸ್ ಪಕ್ಷ ಬಿಜೆಪಿ ಪಕ್ಷಕ್ಕೆ ಬಿಟ್ಟು ಕೊಡಬೇಕಾಯಿತು. ಇಡೀ ನಿಟ್ಟಿನಲ್ಲಿ ಇದೀಗ 17 ನೇ ಲೋಕಸಭೆಗೆ ಸಂಸದೀಯ ಸ್ಥಾಯಿ ಸಮಿತಿಗಳನ್ನು ಬಿಜೆಪಿ ಪಕ್ಷ ರಚನೆ ಮಾಡಿದೆ.

ಇದೇ ಸಂಸದೀಯ ಸಮಿತಿಯಲ್ಲಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಅವರಿಗೆ ಪ್ರಮುಖ ಜವಾಬ್ದಾರಿ ನೀಡಲಾಗಿದೆ. ನುಸ್ರತ್ ಜಹಾನ್ ವರನ್ನು ಜಲಸಂಪನ್ಮೂಲ ವ್ಯವಹಾರಗಳ ಸಂಸದೀಯ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದೆ. ಇದೇ ಮೊಟ್ಟ ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡಿದ್ದರೂ ಸಹ ಹಲವಾರು ವಿವಾದಗಳನ್ನು ದಿಟ್ಟವಾಗಿ ಎದುರಿಸಿ, ಧರ್ಮದ ವಿಚಾರದಲ್ಲಿ ಹಲವಾರು ಜನ ಟೀಕೆ ಮಾಡಿದರೂ ಸಹ ದಿಟ್ಟ ಉತ್ತರಗಳನ್ನು ನೀಡಿ, ದೇಶದ ಗಮನ ಸೆಳೆದಿದ್ದ ನುಸ್ರತ್ ಜಹಾನ್ ರವರಿಗೆ ಈ ಹುದ್ದೆ ನೀಡುವ ಮೂಲಕ ಬಿಜೆಪಿ ಎಲ್ಲರ ಹುಬ್ಬೇರಿಸಿದೆ.

Facebook Comments

Post Author: Ravi Yadav