ದೇವಾಲಯದಲ್ಲಿ ಕೇಸರಿ ತೊಟ್ಟವರ ವಿರುದ್ಧ ನಾಲಿಗೆ ಹರಿಬಿಟ್ಟು ಬಾರಿ ವಿವಾದ ಸೃಷ್ಟಿಸಿದ ದಿಗ್ವಿಜಯ್

ದೇವಾಲಯದಲ್ಲಿ ಕೇಸರಿ ತೊಟ್ಟವರ ವಿರುದ್ಧ ನಾಲಿಗೆ ಹರಿಬಿಟ್ಟು ಬಾರಿ ವಿವಾದ ಸೃಷ್ಟಿಸಿದ ದಿಗ್ವಿಜಯ್

ಕಳೆದ ಚುನಾವಣೆಯಲ್ಲಿ ತಮ್ಮ ವಿವಾದದ ಮೂಲಕ ಸೋಲನ್ನು ಕಂಡಿದ್ದರೂ ಇನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ರವರು ಬುದ್ದಿ ಕಲಿತಂತೆ ಕಾಣುತಿಲ್ಲ. ಇದೀಗ ಬಿಜೆಪಿ ಪಕ್ಷವನ್ನು ದೂಷಿಸುವ ಉದ್ದೇಶದಿಂದ ಮತ್ತೊಮ್ಮೆ ಬಾರಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅದ್ಯಾವ ಕಾರಣಕ್ಕೆ ದಿಗ್ವಿಜಯ್ ಸಿಂಗ್ ರವರು ಈ ರೀತಿ ಮಾತನಾಡುತ್ತಿದ್ದಾರೆ ಎಂಬುದು ಮಾತ್ರ ಯಾರಿಗೂ ಅರ್ಥವಾಗುತ್ತಿಲ್ಲ. ಕೇವಲ ಕೆಲವು ಜನರನ್ನು ಓಲೈಸಲು ಇಡೀ ಹಿಂದು ಧರ್ಮವನ್ನು ಬಹಳ ಕೀಳಾಗಿ ನಿಂದಿಸುವುದು ಎಷ್ಟು ಸರಿ ಎಂಬುದು ನಮ್ಮ ವಾದ. ಈ ಬಾರಿ ಈ ಹಿಂದಿನ ಎಲ್ಲಾ ವಿವಾದ ಗಳಿಗಿಂತಲೂ ಹೆಚ್ಚಿನ ವಿವಾದವನ್ನು ಸೃಷ್ಟಿಸುವಂತಹ ಹೇಳಿಕೆ ನೀಡಿರುವ ದಿಗ್ವಿಜಯ್ ಸಿಂಗ್ ರವರು ಮನಬಂದಂತೆ ನಾಲಿಗೆ ಹರಿಬಿಟ್ಟಿದ್ದಾರೆ. ಅವರು ಏನು ಹೇಳಿದ್ದಾರೆ ಎಂಬುದನ್ನು ತಿಳಿಯಲು ಸಂಪೂರ್ಣ ಓದಿ.

ಇಂದು ಸ್ವಯಂ ಘೋಷಿತ ದೇವಮಾನವ ಕಂಪ್ಯೂಟರ್ ಬಾಬಾ ಸಮ್ಮುಖದಲ್ಲಿ ನಡೆದ ಹಿಂದೂ ದಾರ್ಶನಿಕರ ಸಮಾವೇಶ ಸಂತ ಸಮಾಗಮ್ ವೇದಿಕೆಯಲ್ಲಿ ಮಾತನಾಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ರವರು ಜನರು ಕೇಸರಿ ಬಟ್ಟೆಗಳನ್ನು ಧರಿಸಿ ಅತ್ಯಾಚಾರ ಮಾಡುತ್ತಿದ್ದಾರೆ, ದೇವಾಲಯಗಳ ಒಳಗೆ ಅತ್ಯಾಚಾರಗಳು ನಡೆಯುತ್ತಿವೆ, ಇದು ನಮ್ಮ ಧರ್ಮವೇ? ಎಂದು ಮೊದಲ ಪ್ರಶ್ನೆ ಹೊರಹಾಕಿದ್ದಾರೆ. ಇನ್ನು ಕೇಸರಿ ಬಟ್ಟೆ ಧರಿಸಿದ ಜನರು ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ಜನರು ಕೇಸರಿ ಬಟ್ಟೆಗಳನ್ನು ಧರಿಸಿ ದೇವಾಲಯದ ಒಳಗಡೆ ಅತ್ಯಾಚಾರಗಳನ್ನು ಮಾಡುತ್ತಿದ್ದಾರೆ, ದೇವರು ಕೂಡ ಇದನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ದಿಗ್ವಿಜಯ್ ರವರು,

ಇತ್ತೀಚಿಗೆ ಭಾರತ ದೇಶದಲ್ಲಿ ಮಠಗಳು ಮತ್ತು ದೇವಾಲಯ ಗಳನ್ನು ಸಂಪೂರ್ಣವಾಗಿ ರಾಜಕೀಯ ಕೇಂದ್ರಗಳಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವೆ, ನಾವೆಲ್ಲರೂ ಅದರ ವಿರುದ್ಧ ಹೋರಾಟ ಮಾಡ ಬೇಕಾಗಿದೆ. ಸನಾತನ ಧರ್ಮವನ್ನು ಪಾಲಿಸುವ ಜನರು ಧರ್ಮವನ್ನು ರಾಜಕೀಯವಾಗಿ ಬಳಸದಂತೆ ನಾನು ಮನವಿ ಮಾಡುತ್ತೇನೆ ‘ ಎಂದು ಹೇಳುವ ಮೂಲಕ ಮತ್ತಷ್ಟು ವಿವಾದದ ಅಲೆ ಎಬ್ಬಿಸಿದರು. ಬಿಜೆಪಿಗೆ ಟಾಂಗ್ ನೀಡಲು ಮಾತನ್ನು ಮುಂದುವರೆಸಿದ ದಿಗ್ವಿಜಯ್ ಸಿಂಗ್ ರವರು ‘ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಪಕ್ಷವು ಹಿಂದೂ ಧರ್ಮವನ್ನು ಬಳಸುತ್ತಿದೆ. ಜೈ ಶ್ರೀ ರಾಮ್ ಎಂಬ ಘೋಷಣೆಯು ಇದೀಗ ರಾಜಕೀಯ ಘೋಷಣೆಯಾಗಿ ಮಾರ್ಪಟ್ಟಿದೆ. ಆದ ಕಾರಣದಿಂದ ಇದೀಗ ಜೈ ಸಿಯಾ ರಾಮ್ ಎಂದು ಘೋಷಣೆ ಮಾಡಬೇಕಾದ ಅಗತ್ಯ ಎದುರಾಗಿದೆ. ಇನ್ನು ಮಧ್ಯಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಇಡೀ ರಾಜ್ಯದಲ್ಲಿನ ಸಂಸ್ಕೃತ ಶಾಲೆಗಳ ರಕ್ಷಣೆಗೆ ಬದ್ದವಾಗಿದೆ ಎಂದು ತಿಳಿಸಿದ್ದಾರೆ. ಧಾರ್ಮಿಕ ವಿಚಾರವನ್ನು ಪ್ರಾಥಮಿಕ ತರಗತಿಗಳ ಪಠ್ಯಕ್ರಮದಲ್ಲಿ ಸೇರಿಸಲು ನಾನು ಮುಖ್ಯಮಂತ್ರಿ ಗಳನ್ನೂ ಹಾಗೂ ಸರ್ಕಾರವನ್ನು ಮನವಿ ಮಾಡುತ್ತೇನೆ ಎಂದಿದ್ದಾರೆ.