ಇ.ಡಿ ಅಧಿಕಾರಿಗಳಿಂದ ಮಹತ್ವದ ಹೆಜ್ಜೆ, ನ್ಯಾಯಾಲಯ ಅಸ್ತು ಎಂದರೇ ಡಿಕೆಶಿ ರವರ ಕಥೆ ಏನಾಗಲಿದೆ ಗೊತ್ತಾ?

ಇ.ಡಿ ಅಧಿಕಾರಿಗಳಿಂದ ಮಹತ್ವದ ಹೆಜ್ಜೆ, ನ್ಯಾಯಾಲಯ ಅಸ್ತು ಎಂದರೇ ಡಿಕೆಶಿ ರವರ ಕಥೆ ಏನಾಗಲಿದೆ ಗೊತ್ತಾ?

ಅಕ್ರಮ ಹಣ ವರ್ಗಾವಣೆ ಪ್ರಕಾರದಲ್ಲಿ ಇಡೀ ದೇಶದಲ್ಲಿ ಬಾರಿ ಸದ್ದು ಮಾಡುತ್ತಿರುವ ಪ್ರಕರಣಕ್ಕೆ ಇದೀಗ ಇ.ಡಿ ಅಧಿಕಾರಿಗಳು ಮತ್ತೊಂದು ಟ್ವಿಸ್ಟ್ ನೀಡಲು ಮುಂದಾಗಿದ್ದಾರೆ. ಈಗಾಗಲೇ ಡಿ ಕೆ ಶಿವಕುಮಾರ್ ರವರ ಬಂಧನವನ್ನು ಖಂಡಿಸಿ ಕರ್ನಾಟಕ ರಾಜ್ಯದಲ್ಲಿ ಕೆಲವು ಒಕ್ಕಲಿಗ ನಾಯಕರ ನೇತೃತ್ವದಲ್ಲಿ ಹಲವಾರು ಇದೇ ಸಮುದಾಯದ ಜನರು  ಹೋರಾಟ ನಡೆಸಿದ್ದಾರೆ.. ಆದರೆ ಇದ್ಯಾವುದಕ್ಕೂ ಇ.ಡಿ ಅಧಿಕಾರಿಗಳು ತಲೆಕೆಡಿಕೊಂಡಂತೆ ಕಾಣುತಿಲ್ಲ. ಈಗಾಗಲೇ ಡಿ ಕೆ ಶಿವಕುಮಾರ್ ರವರ ವಿರುದ್ಧ ಹಲವಾರು ಸಾಕ್ಷಿಗಳನ್ನು ಕಲೆಹಾಕಿರುವುದಾಗಿ ತಿಳಿಸಿರುವ ಇ.ಡಿ ಅಧಿಕಾರಿಗಳು, ಇದೀಗ ಡಿ ಕೆ ಶಿವಕುಮಾರ್ ರವರು ತಪ್ಪಿಸಿಕೊಳ್ಳಲು ಇದ್ದ ಕೊನೆ ಆಸೆಗೆ ತಣ್ಣೀರೆರಚಲು ಮುಂದಾಗಿದ್ದಾರೆ. ಹೌದು, ಇಂದು ವಿಶೇಷ ನ್ಯಾಯಾಲಕ್ಕೆ ಹೊಸದೊಂದು ಆಕ್ಷೇಪಣೆ ಸಲ್ಲಿಸಿದ್ದಾರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು.

ಈ ಅರ್ಜಿಯಲ್ಲಿ  ಡಿ ಕೆ ಶಿವಕುಮಾರ್ ರವರು ತನಿಖೆಗೆ ಕಿಂಚಿತ್ತೂ ಸ್ಪಂದನೆ ನೀಡುತ್ತಿಲ್ಲ,  ಡಿ ಕೆ ಶಿವಕುಮಾರ್ ಅವರ ಕಡೆಯಿಂದ ಯಾವುದೇ ಸಹಕಾರ ನಮಗೆ ಸಿಗುತ್ತಿಲ್ಲ . ಅದರ ಮಧ್ಯೆ ಡಿ ಕೆ ಶಿವಕುಮಾರ್ ರವರ ಪರ ವಕೀಲರು ಜಾಮೀನು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಇವರು ಹೊರಗಡೆ ಬಂದರೇ, ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿರುವ ಕಾರಣ ಸಾಕ್ಷಿ ನಾಶಕ್ಕೆ ಪ್ರಯತ್ನ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಆದ ಕಾರಣದಿಂದ ಯಾವುದೇ ಕಾರಣಕ್ಕೂ ಡಿ ಕೆ ಶಿವಕುಮಾರ್ ರವರಿಗೆ ಜಾಮೀನು ನೀಡಬಾರದು ಎಂದು ಇಡಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ. ಇದುವರೆಗೂ ಡಿ ಕೆ ಶಿವಕುಮಾರ್ ರವರು ತನಿಖೆಗೆ ಯಾವುದೇ ಸಹಕಾರ ನೀಡಿಲ್ಲ, ನಮಗೆ ಸಿಕ್ಕಿರುವ ಎಲ್ಲ ದಾಖಲೆಗಳನ್ನು ಕೆಣಕಿ ನೋಡಿದರೆ ಡಿ ಕೆ ಶಿವಕುಮಾರ್ ರವರ ಕೈವಾಡ ಇರುವುದು ಸ್ಪಷ್ಟವಾಗಿದೆ ಎಂದು ತಿಳಿಸಲಾಗಿದೆ. ಒಂದು ವೇಳೆ ಈ ಅರ್ಜಿಯನ್ನು ನ್ಯಾಯಾಲಯ ಸ್ವೀಕಾರ ಮಾಡಿದ್ದಲ್ಲಿ ಡಿ ಕೆ ಶಿವಕುಮಾರ್ ರವರು ಅನಿರ್ದಿಷ್ಟಾವಧಿ ಗಳ ಕಾಲ ಬಂಧನದಲ್ಲಿ ಸಿಕ್ಕಿಬೀಳಲಿದ್ದಾರೆ ಹಾಗೂ ಇ.ಡಿ ಅಧಿಕಾರಿಗಳಿಗೆ ತನಿಖೆ ಮುಗಿಯುವವರೆಗೂ ಯಾವುದೇ ಅಡ್ಡಿ ಇರುವುದಿಲ್ಲ.