ಅಕ್ರಮ ಆಸ್ತಿಯ ಬಗ್ಗೆ ಸುರೇಶ್ ಕುಮಾರ್ ಹೇಳಿದ್ದೇನು ಗೊತ್ತಾ

ಅಕ್ರಮ ಆಸ್ತಿಯ ಬಗ್ಗೆ ಸುರೇಶ್ ಕುಮಾರ್ ಹೇಳಿದ್ದೇನು ಗೊತ್ತಾ

ಇದೀಗ ಡಿ ಕೆ ಶಿವಕುಮಾರ್ ರವರನ್ನು ಇ.ಡಿ ಅಧಿಕಾರಿಗಳು ಬಾರಿ ವಿಚಾರಣೆಗೆ ಒಳಪಡಿಸಿದ್ದಾರೆ. ಡಿ ಕೆ ಶಿವಕುಮಾರ್ ರವರು ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಇದೀಗ ಮತ್ತೊಮ್ಮೆ ಬಂಧನ ಅವಧಿ ವಿಸ್ತರಣೆಯಾಗಿದೆ. ನನಗೆ ಆರೋಗ್ಯ ಸರಿ ಇಲ್ಲ, ನಿದ್ದೆ ಬರುತ್ತಿದೆ, ಹೊಟ್ಟೆ ಹಸಿಯುತ್ತಿದೆ ಎಂದೆಲ್ಲಾ ಕಾರಣಗಳನ್ನು ನೀಡಿ, ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ, ಬಂಧನ ಅವಧಿಯನ್ನು ಇನ್ನು ೪ ದಿನಗಳ ಕಾಲ ವಿಸ್ತರಣೆ ನೀಡಿದ ಬೆನ್ನಲ್ಲೇ ಡಿ ಕೆ ಶಿ ರವರ ಸಹೋದರ ಸುರೇಶ ಕುಮಾರ್ ರವರು ಈ ಪ್ರಕರಣ ಕುರಿತು ಮಾತನಾಡಿ, ಅಕ್ರಮ ಆಸ್ತಿಗಳ ಆರೋಪಗಳಿಗೆ ಉತ್ತರ ನೀಡಿದ್ದಾರೆ. ವ್ಯಂಗ್ಯ ಮಾತುಗಳ ಮೂಲಕ ಉತ್ತರ ನೀಡಿರುವ ಕಾರಣ, ಸುರೇಶ ಕುಮಾರ್ ರವರನ್ನು ಮತ್ತೊಮ್ಮೆ ಜನ ಟ್ರಾಲ್ ಮಾಡುತ್ತಿದ್ದಾರೆ.

ಇ.ಡಿ ಅಧಿಕಾರಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಸುರೇಶ ಕುಮಾರ್ ರವರು, ಇಲ್ಲಿಯವರೆಗೂ ನಾವು ಯಾವುದೇ ಅಕ್ರಮ ಆಸ್ತಿಗಳಿಕೆ ಮಾಡಿಲ್ಲ. ನಮ್ಮ ಆಸ್ತಿ ಒಟ್ಟು ೮೦೦ ಕೋಟಿ, ಇದನ್ನೇ ಅಕ್ರಮ ಹಣ ಎಂದು ಬಿಂಬಲಾಗುತ್ತಿದೆ. ಇದನ್ನು ನಾವೇ ಘೋಷಣೆ ಮಾಡಿಕೊಂಡಿದ್ದೇವೆ. ಇನ್ನು ವಿದೇಶದಲ್ಲಿ ೩೭೦ ಅಕೌಂಟ್ ಗಳು ಇದ್ದವೇ ಎನ್ನುತ್ತಿದ್ದಾರೆ. ಎಲ್ಲಾ 317 ಅಕೌಂಟ್ ಗಳು ಎಲ್ಲಿವೆ ಎಂಬುದಕ್ಕೆ ಅಧಿಕಾರಿಗಳು ಸಾಕ್ಷಿ ಕೊಡಲಿ, ಅಷ್ಟೇ ಅಲ್ಲದೆ ಆ ಬ್ಯಾಂಕ್ ಗಳಲ್ಲಿರುವ ಹಣವನ್ನು ನಮಗೆ ಕೊಡಲಿ ಆಗ ಅದು ನಮ್ಮ ಹಣ ಎಂದು ಒಪ್ಪಿಕೊಳ್ಳಬಹುದು ಎಂದಿದ್ದಾರೆ. ಇದೇ ವೇಳೆ ಮಾತನಾಡುವಾಗ ಡಿ ಕೆ ಶಿವಕುಮಾರ್ ರವರ ವಿರುದ್ಧ ಯಾವುದೇ ಕ್ರಿಮಿನಲ್​ ಮೊಕದ್ದಮೆ ದಾಖಲು ಮಾಡಲಾಗಿಲ್ಲ. ಆದರೇ ಅಧಿಕಾರಿಗಳು ನ್ಯಾಯಾಲಯದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಮಗೆ ದೇಶದ ಕಾನೂನಿನ ಮೇಲೆ ನಂಬಿಕೆ ಇದೆ. ಜಯ ಸಿಕ್ಕೇ ಸಿಗುತ್ತದೆ. ಇದು ಬರೀ ರಾಜಕೀಯವಾಗಿ ಡಿ ಕೆ ಶಿವಕುಮಾರ್​ ರವರನ್ನು ಹತ್ತಿಕ್ಕುವ ಪ್ರಯತ್ನ ಎಂದು ಆರೋಪ ಮಾಡಿದ್ದಾರೆ.