ಅಂಬಾನಿ ಕುಟುಂಬಕ್ಕೆ ಶಾಕ್ ನೀಡಿದ ಐಟಿ- ಎಲ್ಲಿದೀರಪ್ಪಾ ಐಟಿ ಇಲಾಖೆ ದುರುಪಯೋಗ ಎಂದವರು?

ಅಂಬಾನಿ ಕುಟುಂಬಕ್ಕೆ ಶಾಕ್ ನೀಡಿದ ಐಟಿ- ಎಲ್ಲಿದೀರಪ್ಪಾ ಐಟಿ ಇಲಾಖೆ ದುರುಪಯೋಗ ಎಂದವರು?

ಕಳೆದ ಕೆಲವು ದಿನಗಳಿಂದ ಅದರಲ್ಲಿಯೂ ನರೇಂದ್ರ ಮೋದಿ ಸರ್ಕಾರ, ಐಟಿ ಇಲಾಖೆಯ ಮೇಲೆ ಯಾವುದೇ ಒತ್ತಡವೇರದೇ, ಸ್ವತಂತ್ರವಾಗಿ ಕೆಲಸ ಮಾಡಲು ಬಿಟ್ಟಿರುವ ಕಾರಣ, ಐಟಿ ಇಲಾಖೆಯು ಯಾರ ಮೇಲೆ ದಾಳಿ ಮಾಡಿದರೂ, ಅಷ್ಟೇ ಯಾಕೆ ಕೇವಲ ನೋಟೀಸ್ ನೀಡಿದರೇ ಸಾಕು, ನರೇಂದ್ರ ಮೋದಿ ಸರ್ಕಾರ ಎಲ್ಲರನ್ನು ತುಳಿಯುವ ಕೆಲಸ ಮಾಡುತ್ತಿದೆ ಎಂದು ಸಾಕಷ್ಟು ಜನ ಬೊಬ್ಬೆ ಹೊಡೆಯುತ್ತಿರುತ್ತಾರೆ. ವಿಪರ್ಯಾಸವೆಂದರೆ, ಇತ್ತೀಚಿಗೆ ಸಿದ್ದಾರ್ಥ್ ರವರ ಆತ್ಮಹತ್ಯೆಯ ವಿಚಾರದಲ್ಲಿಯೂ ಸಹ ರಾಜಕೀಯ ಎಳೆದು ತಂದು, ನರೇಂದ್ರ ಮೋದಿ ರವರನ್ನು ಟೀಕೆ ಮಾಡಿದ್ದರು. ಇಷ್ಟೆಲ್ಲ ಮಾತನಾಡಿದ ಇವರಿಗೆ ೨೫೦೦೦ ಕೋಟಿ ಆಸ್ತಿಯ ಸಾಮ್ರಾಜ್ಯವನ್ನು ಒಬ್ಬರೇ ಕಟ್ಟು ಬೆಳೆಸಿದ ಸಿದ್ದಾರ್ಥ್ ರವರಿಗೆ ತೆರಿಗೆ ಕಟ್ಟಿವುದು ಕಷ್ಟ ವಾಗಿರಲಿಲ್ಲ ಎಂಬುದು ಅರ್ಥವಾಗಿಲ್ಲ.

ಇನ್ನು ಇಷ್ಟಕ್ಕೆ ಸುಮ್ಮನಾಗದ ಇವರು ನರೇಂದ್ರ ಮೋದಿ ರವರು ಅಂಬಾನಿ ಕುಟುಂಬಕ್ಕೆ ಇನ್ನಿಲ್ಲದ ಸಹಾಯ ಮಾಡುತ್ತಾರೆ. ಅವರ ಮೇಲೆ ಐಟಿ ಇಲಾಖೆ ಯಾಕೆ ದಾಳಿ ಮಾಡುವುದಿಲ್ಲ ಎಂದೆಲ್ಲಾ ಮನಬಂದಂತೆ ಟೀಕೆ ಮಾಡುತ್ತಿದ್ದರು, ಆದರೆ ಸತ್ಯ ಹೇಳುತ್ತೇವೆ ನರೇಂದ್ರ ಮೋದಿ ದಾಳಿ ಮಾಡಿ ಎಂದರೂ ಐಟಿ ಇಲಾಖೆ ದಾಳಿ ಮಾಡುವುದಿಲ್ಲ. ಯಾಕೆಂದರೆ ದಾಳಿ ಮಾಡಿ ನೋಟೀಸ್ ನೀಡಲು, ಸಾಕ್ಷಿಗಳು ಇರಬೇಕು. ಇದೀಗ ಇದೇ ರೀತಿಯ ಘಟನೆ ನಡೆದಿದ್ದು, ಅಂಬಾನಿ ಕುಟುಂಬದ ಸದಸ್ಯರಿಗೆ ಕಪ್ಪು ಹಣ ಕಾಯ್ದೆಯಡಿ ನೋಟಿಸ್ ಜಾರಿ ಮಾಡಲಾಗಿದೆ. ಯಾಕೆಂದರೆ ಕೆಲವು ಸಾಕ್ಷಿಗಳು ಇವರ ವಿರುದ್ಧವಾಗಿ ಕೆಲವು ಸಾಕ್ಷಿಗಳು ದೊರೆತಿವೆ, ಆದಕಾರಣದಿಂದ ನೀತಾ ಅಂಬಾನಿ ಹಾಗೂ ಇಬ್ಬರು ಮಕ್ಕಳಿಗೆ ನೊಟೀಸ್ ಕಳುಹಿಸಲಾಗಿದೆ. ವಿದೇಶದಲ್ಲಿ ಕಪ್ಪು ಹಣ ಹೊಂದಿದ ಸಾಕ್ಷಿಗಳು ಐಟಿ ಇಲಾಖೆಯ ಕೈ ಸೇರಿವೆ.