ಕೇಂದ್ರದಿಂದ ಬಂತು ಭರ್ಜರಿ ಸಿಹಿ ಸುದ್ದಿ, ಕೊಟ್ಟ ಮಾತು ಉಳಿಸಿಕೊಂಡ ಬಿಜೆಪಿ

ಕೇಂದ್ರದಿಂದ ಬಂತು ಭರ್ಜರಿ ಸಿಹಿ ಸುದ್ದಿ, ಕೊಟ್ಟ ಮಾತು ಉಳಿಸಿಕೊಂಡ ಬಿಜೆಪಿ

ಕಳೆದ ಕೆಲವು ದಿನಗಳ ಹಿಂದೆ, ಕನ್ನಡಿಗರಿಗೆ ಅಥವಾ ಬೇರೆ ಯಾವುದೇ ರಾಜ್ಯದ ಜನರಿಗೆ ತಮ್ಮ ತಮ್ಮ ರಾಜ್ಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಪರ ರಾಜ್ಯದವರು ಕಿತ್ತುಕೊಳ್ಳುತ್ತಿದ್ದಾರೆ ಅದರಲ್ಲಿಯೂ, ಯಾವುದೇ ಬ್ಯಾಂಕ್ ಗಳಿಗೆ ನೀವು ತೆರಳಿದರೂ ಹಿಂದಿ ಭಾಷೆಯ ಜನರು ಸಿಗುತ್ತಾರೆ. ಇದರಿಂದ ಪ್ರಾದೇಶಿಕ ಭಾಷೆಗಳು ನಶಿಸಿಹೋಗುವುದಷ್ಟೇ ಅಲ್ಲದೆ, ಪ್ರಾದೇಶಿಕ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಇದರ ಪರವಾಗಿ ಕನ್ನಡಿಗರು ಸಹ ಕೇಂದ್ರ ಬಳಿ ಮನವಿ ಮಾಡಿದ್ದರು. ತೇಜಸ್ವಿ ಸೂರ್ಯ ರವರು ಸಂಸತ್ತಿನಲ್ಲಿ ಈ ಕುರಿತು ಮಾತನಾಡಿ, ಸಂಸತ್ತಿನ ಗಮನ ಸೆಳೆದಿದ್ದರು. ಇಷ್ಟಕ್ಕೆ ಸುಮ್ಮನಾಗದ ಸಂಸದರು, ನಿರ್ಮಲ ಸೀತಾರಾಮನ್ ರವರ ಬಳಿ ರಾಷ್ತ್ರೀಕೃತ ಬ್ಯಾಂಕ್ ಗಳ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ನಡೆಸಬೇಕು ಎಂದು ಮನವಿ ಮಾಡಿದ್ದರು. ಇದೇ ರೀತಿ ಹಲವಾರು ರಾಜ್ಯಗಳು ತಮ್ಮ ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸುವಂತೆ ಕೇಂದ್ರದ ಮೇಲೆ ಒತ್ತಡ ಏರಿದ್ದರು.

ಎಲ್ಲರ ಮನವಿಗೆ ಸ್ಪಂದಿಸಿದ್ದ ನಿರ್ಮಲ ಸೀತಾರಾಮನ್ ರವರು, ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ನಡೆಸುವಂತೆ ಆದೇಶ ನೀಡಿದ್ದರು. ಆದರೆ, ಇದ್ದಕ್ಕಿದ್ದ ಹಾಗೇ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಅವಕಾಶವಿರಲ್ಲ. ಇದರಿಂದ ಸಾಮಾನ್ಯವಾಗಿಯೇ ಕನ್ನಡಿಗರು ಕೇಂದ್ರದ ಮೇಲೆ ಬೇಸರ ಮಾಡಿಕೊಂಡಿದ್ದರು. ವಿರೋಧ ಪಕ್ಷಗಳು ಆಕ್ರೋಶದ ಮಾತುಗಳನ್ನು ಹೊರಹಾಕಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರಹ್ಲಾದ್ ಜೋಶಿ ರವರು, ಇದರ ಕುರಿತು ನಿರ್ಮಲ ಸೀತಾರಾಮನ್ ರವರ ಬಳಿ ಮತ್ತೊಮ್ಮೆ ಮಾತನಾಡುವುದಾಗಿ ತಿಳಿಸಿದ್ದರು. ಇದೀಗ ಕೇಂದ್ರ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದ್ದು, ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿದೆ. ಖುದ್ದು ನಿರ್ಮಲಾ ಸೀತಾರಾಮನ್ ರವರು ಈ ಸುದ್ದಿಯನ್ನು ಖಚಿತ ಪಡಿಸಿದ್ದು, ಈ ಕುರಿತು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂಗ್ಲಿಷ್ ಸೇರಿದಂತೆ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಲು ಕೇಂದ್ರ ಸಮ್ಮತಿ ಸೂಚಿಸಿದೆ.