ಶಾ ಹಿಂದಿ ಕುರಿತಾದ ಹೇಳಿಕೆ- ಇಲ್ಲಿದೆ ನೋಡಿ ಅಸಲಿಯತ್ತು- ಟೀಕೆ ಮಾಡುವ ಮುನ್ನ ಪ್ರತಿಯೊಬ್ಬರೂ ತಿಳಿಯಬೇಕಾದ ವಿಷಯ

ಶಾ ಹಿಂದಿ ಕುರಿತಾದ ಹೇಳಿಕೆ- ಇಲ್ಲಿದೆ ನೋಡಿ ಅಸಲಿಯತ್ತು- ಟೀಕೆ ಮಾಡುವ ಮುನ್ನ ಪ್ರತಿಯೊಬ್ಬರೂ ತಿಳಿಯಬೇಕಾದ ವಿಷಯ

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾದೇಶಿಕ ಪಕ್ಷಗಳ ಬೆಂಬಲಿಗರು ಹಾಗೂ ಬಿಜೆಪಿಯೇತರ ಪಕ್ಷದ ಬೆಂಬಲಿಗರು ಅಮಿತ್ ಶಾ ರವರ ಮೇಲೆ ಟೀಕೆಗಳ ಬಾಣಗಳನ್ನು ಸುರಿಸುತ್ತಿದ್ದಾರೆ. ಆದರೆ ಇದರ ಅಸಲೀಯತ್ತನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ. ನಾವು ಇಲ್ಲಿ ಯಾರ ಪರವಾಗಿಯೂ ಮಾತನಾಡುತ್ತಿಲ್ಲ. ಬದಲಾಗಿ, ನೀವು ಯಾರನ್ನು ಬೇಕಾದರೂ ಟೀಕೆ ಮಾಡಿ, ಆದರೆ ಟೀಕೆ ಮಾಡುವ ಮುನ್ನ ಸತ್ಯ ತಿಳಿದುಕೊಂಡು ಟೀಕೆ ಮಾಡಿ, ನಾವು ಕನ್ನಡಿಗರೇ, ಕನ್ನಡದ ಮೇಲೆ ನಮಗೂ ಪ್ರೀತಿ ಇದೆ, ಅಪಾರ ಕಾಳಜಿಯೂ ಇದೆ. ಕಳೆದ ಕೆಲವು ಗಂಟೆಗಳ ಹಿಂದೆ ಅಮಿತ್ ಶಾ ರವರು, ಹಿಂದಿ ಭಾಷೆಯು ಭಾರತವನ್ನು ವಿಶ್ವದಲ್ಲಿ ಪ್ರತಿನಿಧಿಸುವಂತಾಗಬೇಕು ಎಂದು ಹೇಳಿಕೆ ನೀಡಿದ್ದಾರೆ. ಇದನ್ನೇ ಬಳಸಿಕೊಂಡು, ಪ್ರಾದೇಶಿಕ ಪಕ್ಷಗಳು ಸೇರಿದಂತೆ ಹಲವಾರು ಜನ ಟೀಕೆಗಳ ಬಾಣಗಳನ್ನು ಬಿಡುತ್ತಿದ್ದಾರೆ. ದಯವಿಟ್ಟು ಸಂಪೂರ್ಣ ಓದದೇ, ಯಾವುದೇ ನಿರ್ಧಾರಕ್ಕೆ ಬರಬೇಡಿ ಹಾಗೂ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ

ನಿಮಗೆಲ್ಲರಿಗೂ ತಿಳಿದಿರುವ ಹಾಗೇ, ಇದೀಗ ಭಾರತವನ್ನು ಜಾಗತಿಕ ಮಟ್ಟದಲ್ಲಿ ಇಂಗ್ಲಿಷ್ ಭಾಷೆಯಿಂದ ಗುರುತಿಸಲಾಗುತ್ತದೆ. ಅಂದರೆ, ಉದಾಹರಣೆಗೆ, ಭಾರತ ದೇಶದ ಜೊತೆ, ವಿದೇಶಿ ಕಂಪನಿ ಅಥವಾ ಸಾಮಾನ್ಯ ಜನರೇ ಆಗಲಿ ಮಾತನಾಡಲು ಅಥವಾ ಯಾವುದೇ ವ್ಯವಹಾರ ನಡೆಸಲು ಆಲೋಚನೆ ಮಾಡಿದ ತಕ್ಷಣ ನೆನಪಿಗೆ ಬರುವುದು, ದೇಶದ ಬಹುತೇಕ ಜನರಿಗೆ ಇಂಗ್ಲಿಷ್ ಬರುತ್ತದೆ. ಆದ ಕಾರಣದಿಂದ ಸಂವಹನ ನಡೆಸಲು ಸುಲಭವಾಗುತ್ತದೆ ಎಂದು ಹೇಳುತ್ತಾರೆ. ನಮ್ಮ ದೇಶದಲ್ಲಿ ನೆಲೆಸಿರುವ ಬಹುತೇಕ ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಲು ಇಂಗ್ಲಿಷ್ ಬಹಳ ಮುಖ್ಯ.  ಇದೀಗ ಇದೇ ವಿಚಾರವನ್ನು ಅರಿತು ಕೊಂಡಿರುವ ಕರ್ನಾಟಕ ಸರ್ಕಾರ ಕೂಡ ಸರ್ಕಾರಿ ಇಂಗ್ಲಿಷ್ ಶಾಲೆಗಳನ್ನು ಆರಂಭ ಮಾಡಿದೆ. ಇದೇ ರೀತಿಯ ಆಂಗ್ಲ ಭಾಷೆಯ ಶಾಲೆಗಳನ್ನು ಬಹುತೇಕ ರಾಜ್ಯಗಳಲ್ಲಿ ಆರಂಭಮಾಡಲಾಗಿದೆ, ಹಲವಾರು ಪಕ್ಷಗಳು ಇದೇ ವಿಷಯವನ್ನು ತಮ್ಮ ಪ್ರಣಾಳಿಕೆಯಲ್ಲಿ ಮುಖ್ಯವಾದ ಅಂಶವಾಗಿ ಬಳಸಿಕೊಂಡಿವೆ. ಪೋಷಕರು ಸಹ ತಮ್ಮ ಮಕ್ಕಳು ಇಂಗ್ಲಿಷ್ ಮಾತನಾಡಿದರೆ ಉದ್ಯೋಗ ಸಿಗುತ್ತದೆ ಎಂದು ಇಂಗ್ಲಿಷ್ ಶಾಲೆಗಳಿಗೆ ಸಾವಿರಾರು ರೂ ಹಣ ಸುರಿಯುತ್ತಿದ್ದಾರೆ.

ಹೀಗಿರುವಾಗ  ಅಮಿತ್ ಶಾ ರವರ ಈ ಮಾತಿಗೆ ಬಹುತೇಕ ಜನ ಪ್ರತಿಕ್ರಿಯೆ ನೀಡಿ, ಅಮಿತ್ ಶಾ ರವರ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೆ ಈ ಸುದ್ದಿಯನ್ನು ಮತ್ತಷ್ಟು ತಿರುಚಿ, ಅಮಿತ್ ಶಾ ರವರು ಇಡೀ ಭಾರತವನ್ನು ಹಿಂದಿ ಮಯವನ್ನಾಗಿ ಮಾಡಲು ಹಿಂದಿ ಹೇರಿಕೆ ಮಾಡುತ್ತಿದ್ದಾರೆ ಎಂದು ವಿವಾದಗಳನ್ನು ಎಬ್ಬಿಸುತ್ತಿದ್ದಾರೆ.  ಇಂದು ಹಿಂದಿ ದಿವಸ್ ಎಂದು ಬಹಳ ವರ್ಷಗಳಿಂದ ಆಚರಣೆ ಮಾಡಲಾಗುತ್ತದೆ. 1949 ರಿಂದ ಈ ಆಚರಣೆಯನ್ನು ಮಾಡಿಕೊಂಡು ಬರಲಾಗುತ್ತಿದ್ದು, ಈ ವರ್ಷ ಮಾತ್ರ ಈ ಆಚರಣೆ ಬಾರಿ ಸದ್ದು ಮಾಡುತ್ತಿದೆ, ಯಾಕೆಂದರೆ ಇದು ಇಷ್ಟು ದಿವಸ ಕೇವಲ ಕಾರ್ಯಕ್ರಮವಾಗಿತ್ತು. ಆದರೆ ಈ ಬಾರಿ ಇದು, ಸಾಮಾನ್ಯ ಜನರನ್ನು ಕೇಂದ್ರದ ವಿರುದ್ಧ ಎತ್ತಿಕಟ್ಟುವ ಉನ್ನಾರವಾಗಿದೆ. ಹೌದು ನಾವು ಹೀಗೆ ಯಾಕೆ ಹೇಳುತ್ತಿದ್ದೇವೆ ಎಂದರೆ, ಅಮಿತ್ ಶಾ ಹೇಳಿದ್ದು ಬೇರೆ, ಆದರೆ ತಮಗೆ ಬೇಕಾದಷ್ಟು ಮಾತ್ರ ಬಳಸಿಕೊಂಡು, ಅದರಲ್ಲಿಅದರಲ್ಲಿರುವ ಪ್ರಮುಖ ಸುದ್ದಿಯನ್ನು ತಿರುಚಿ ಈ ಉನ್ನಾರ ನಡೆಸಲಾಗುತ್ತಿದೆ.

ನಮಗೂ ಸಹ ಕೇವಲ ಹಿಂದಿ ದೇಶದ ಒಂದೇ ಭಾಷೆಯಾಗಬೇಕು ಎಂಬ ಮಾತು ಕೇಳಿದಾಗ ಸಾಕಷ್ಟು ಕೋಪ ಬಂದಿತ್ತು. ಆದರೆ, ಸತ್ಯವನ್ನು ಹುಡುಕಲು ಹೊರಟಾಗ, ನಮಗೆ ಸಿಕ್ಕಿದ ಮಾಹಿತಿ ಈ ಕೆಳಗಿನಂತಿದೆ. ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಹಿಂದಿ ದಿವಸ್ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ಹೊರಹಾಕಿರುವ ಅಮಿತ್ ಶಾ ರವರು, ಇಡೀ ಭಾರತವು ತನ್ನ ಗುರುತನ್ನು ಹೊಂದಿರುವ ಭಾಷೆಯನ್ನು ಹೊಂದುವ ಅವಶ್ಯಕತೆ ಇದೆ, ನಮ್ಮ ದೇಶವನ್ನು ಜಾಗತಿಕ ಮಟ್ಟದಲ್ಲಿ ಭಾರತದ ಗುರುತಾಗಿ, ಕಾರ್ಯನಿರ್ವಹಿಸಬಲ್ಲ ಭಾಷೆ ಇಡೀ ದೇಶಕ್ಕೆ ಇರುವುದು ಬಹಳ ಮುಖ್ಯ. ಭಾರತವು ವಿವಿಧ ಭಾಷೆಗಳ ದೇಶವಾಗಿದೆ, ಮತ್ತು ಪ್ರತಿಯೊಂದು ಭಾಷೆಗೂ ಅದರ ಮಹತ್ವವಿದೆ, ಆದರೆ ಜಾಗತಿಕವಾಗಿ ಭಾರತದ ಗುರುತಿನ ಗುರುತು ಆಗುವ ಸಾಮಾನ್ಯ ಭಾಷೆಯನ್ನು ಹೊಂದಿರುವುದು ಅವಶ್ಯಕವಾಗಿದೆ.”  ಹಾಗೂ ದೇಶದ ಬಹುತೇಕ ಜನರು ಹಿಂದಿ ಬಳಸುವ ಕಾರಣ ರಾಷ್ಟ್ರವನ್ನು ಒಟ್ಟಿಗೆ ಸೇರಿಸಬಲ್ಲ ಒಂದು ಭಾಷೆ ಎಂದರೇ ಅದು ಹಿಂದಿ ಭಾಷೆಯಾಗಿದ್ದು, ಇದು ಭಾರತದಲ್ಲಿ ಹೆಚ್ಚು ವ್ಯಾಪಕವಾಗಿ ಮಾತನಾಡುವ ಮತ್ತು ಅರ್ಥವಾಗುವ ಭಾಷೆಯಾಗಿದೆ ಎಂದಿದ್ದಾರೆ.

ಅಷ್ಟೇ ಅಲ್ಲದೆ ಇಡೀ ಸಮಯದಲ್ಲಿ ಎಲ್ಲಾ ನಾಗರಿಕರು ತಮ್ಮ ಮಾತೃಭಾಷೆಗಳ ಬಳಕೆಯನ್ನು ಉತ್ತೇಜಿಸಬೇಕು ಎಂದಿದ್ದಾರೆ. ಹಿಂದಿ ಭಾಷೆಯು ದೇಶವನ್ನು ಏಕೀಕರಿಸಬಹುದಾದರೂ, ಭಾರತವು ಅನೇಕ ಭಾಷೆಗಳ ದೇಶವಾಗಿದೆ ಮತ್ತು ಪ್ರತಿಯೊಂದು ಭಾಷೆಯೂ ಅದರ ಮೌಲ್ಯವನ್ನು ಹೊಂದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದಿಯ ಏಕೀಕರಣದ ಸಾಮರ್ಥ್ಯದ ಬಗ್ಗೆ ಮಾತ್ರ ಮಾತನಾಡಿದ್ದಾರೆ ಮತ್ತು ಭಾರತವು ತನ್ನ ಜಾಗತಿಕ ಗುರುತನ್ನು ಗುರುತಿಸುವ ಒಂದು ಭಾಷೆಯನ್ನು ಹೊಂದಿರುವುದು ಮುಖ್ಯವಾದರೂ, ಹಿಂದಿ ಭಾಷೆಯ ಪ್ರಚಾರವನ್ನು ಸಾಂಪ್ರದಾಯಿಕವಾಗಿ ವಿರೋಧಿಸಿದವರು ಶಾ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಹಿಂದಿಯನ್ನು ಅಧಿಕೃತ ಭಾಷೆಯಾಗಿ ಗುರುತಿಸಿ ಇಂಗ್ಲಿಷ್‌ಗೆ ಆದ್ಯತೆ ನೀಡುವ ಉದ್ದೇಶ ಕಡಿಮೆಯಾಗಬೇಕು ಎಂಬುದು ಇವರ ವಾದವಾಗಿದೆ. ಇದರಿಂದ ವಿದೇಶಿ ಭಾಷೆಗಳಿಗೆ ನಮ್ಮ ದೇಶದಲ್ಲಿ ಜಾಗ ಸಿಗುವುದಿಲ್ಲ ಎಂದಿದ್ದಾರೆ.