ಮಮತಾ ಗೆ ಬಿಗ್ ಶಾಕ್ ನೀಡಿದ ನ್ಯಾಯಾಲಯ ! ಸರ್ವಾಧಿಕಾರಿ ಆಟ ಬಂದ್ ಮಾಡಲು ಇಷ್ಟು ಸಾಕು !!

ಮಮತಾ ಗೆ ಬಿಗ್ ಶಾಕ್ ನೀಡಿದ ನ್ಯಾಯಾಲಯ ! ಸರ್ವಾಧಿಕಾರಿ ಆಟ ಬಂದ್ ಮಾಡಲು ಇಷ್ಟು ಸಾಕು !!

ತಾನೇ ಸರ್ವಾಧಿಕಾರಿ ಎಂದು ಮೆರೆಯುತ್ತಿದ್ದ ಮಮತಾ ರವರ ಅಂತ್ಯ ಬಹಳ ಹತ್ತಿರ ಬಂದಂತಿದೆ. ಪಕ್ಷಿಮ ಬಂಗಾಳದಲ್ಲಿ ಹಿಂಸಾಚಾರ ಗಳ ಮೂಲಕ ಬಾರಿ ಸದ್ದು ಮಾಡಿ ಕೇಂದ್ರ ಸರ್ಕಾವನ್ನು ಎದುರು ಹಾಕಿಕೊಂಡು, ಇಡೀ ಬಂಗಾಳವನ್ನು ಬಾಂಗ್ಲಾವಾಗಿ ಮಾರ್ಪಡಿಸಲು ಇನ್ನಿಲ್ಲದ ಪ್ರಯತ್ನ ನಡೆಸಿ, ಸಾವಿರಾರು ಕೋಟಿ ಆಸ್ತಿ ಮಾಡಿರುವ ಮಮತಾ ರವರ ಒಂದೊಂದೇ ಪ್ರಯತ್ನಗಳು ವಿಫಲವಾಗುತ್ತಿವೆ. ಕೆಲವು ದಿನಗಳ ಹಿಂದಷ್ಟೇ ತಾವು ಮಾಡಿದ ಅರ್ಥವಿಲ್ಲದ ಪೈಂಟೀಂಗ್ ಗಳನ್ನೂ ಬಂಗಾಳ ರಾಜ್ಯದ ಬಹುತೇಕ ಬಿಸಿನೆಸ್ ಮ್ಯಾನ್ ಗಳು ಕೊಂಡು ಕೊಂಡಿದ್ದಾರೆ ಎಂದು ನೂರಾರು ಕೋಟಿ ಹಣ ಪಡೆದಿದ್ದ ಆರೋಪದ ಮೇಲೆ ಎಲ್ಲ ಪೈಂಟೀಂಗ್ಗಳನ್ನೂ ಸಿಬಿಐ ವಶಪಡಿಸಿಕೊಂಡಿತ್ತು. ಇದರಿಂದ ಮತ್ತಷ್ಟು ಕೆರಳಿದ್ದ ಮಮತಾ ರವರು ಚುನಾವಣೆಯಲ್ಲಿ ದೌರ್ಜನ್ಯಗಳ ಮೂಲಕ ಗೆಲ್ಲಲು ಪ್ರಯತ್ನ ಪಟ್ಟಿದ್ದು ಸುಳ್ಳಲ್ಲ. ಬಿಜೆಪಿ, ಕಾಂಗ್ರೆಸ್ ಎರಡು ಪಕ್ಷಗಳಿಗೆ ಬಂಗಾಳದ ಒಳಗಡೆ ಪ್ರವೇಶ ಮಾಡುವುದಕ್ಕೂ ಹರ ಸಾಹಸ ಪಡುವಂತೆ ಮಾಡಿದ್ದ ಮಮತಾ ರವರಿಗೆ ಚುನಾವಣೆಯಲ್ಲಿ ಜನರು ಬುದ್ದಿ ಕಲಿಸಿದ್ದರು.

ಇಷ್ಟೆಲ್ಲ ಆಟ ಗಳನ್ನೂ ಆಡಿದ ಮಮತಾ ರವರಿಗೆ ಕೇವಲ ಚುನಾವಣಾ ಫಲಿತಾಂಶವೊಂದೇ ಸಾಕೇ??? ಖಂಡಿತಾ ಇಲ್ಲ.

ಹೌದು ಇದೀಗ ಮಮತಾ ರವರ ಬಾರಿ ಹಗರಣ ಹೊರ ಬೀಳುವುದು ಬಹುತೇಕ ಖಚಿತವಾಗಿದೆ. ದೇಶದ ಮಹಾ ಹಗರಣಗಳಲ್ಲಿ ಎರಡಾದ , ಶಾರದಾ ಚಿಟ್ ಫಂಡ್ ಹಾಗೂ ರೋಸ್ ವ್ಯಾಲಿ ಹಗರಣಗಳಲ್ಲಿ ಸಿಕ್ಕಿಬೀಳಲು ಖೆಡ್ಡಾ ರೆಡಿಯಾಗಿದೆ. ಈ ಎರಡು ಹಗರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ ಮಾಜಿ ಕೋಲ್ಕತಾ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ರವರ ರಕ್ಷಣೆಗೆ ಮಮತಾ ರವನ್ನು ನಿಂತಿದ್ದನ್ನು ಇಡೀ ದೇಶವೇ ನೋಡಿದೆ. ಅಷ್ಟೇ ಅಲ್ಲದೆ, ಈ ಎರಡು ಹಗರಣಗಳ ಮೂಲ ರೂವಾರಿ ಮಮತಾ ಎಂದು ಬಲವಾದ ಮಾತುಗಳು ಕೇಳಿಬಂದಿವೆ. ಈ ಎರಡು ಹಗರಣಗಳನ್ನು ಸಿಬಿಐ ತನಿಖೆ ನಡೆಸುತ್ತಿರುವ ಕಾರಣ ರಾಜೀವ್ ಕುಮಾರ್ ರವನ್ನು ಬಂಧಿಸಲು ನ್ಯಾಯಾಲಯದ ಬಳಿ ಅರೆಸ್ಟ್ ವಾರಂಟ್ ತೆಗೆದುಕೊಂಡು ಸಿಬಿಐ ಸಂಸ್ಥೆಯು ಬಂಗಾಲ ತಲುಪಿದ್ದ ವೇಳೆಯಲ್ಲಿ ಇಡೀ ರಾಜ್ಯದಲ್ಲಿ ಹಿಂಸಾಚಾರ ಭುಗಿಲೇಳುವಂತೆ ಮಾಡಿ, ಸಿಬಿಐ ಅಧಿಕಾರಿಗಳನ್ನು ಕೇಂದ್ರ CRPF ಯೋಧರ ಭದ್ರತೆಯೊಂದಿಗೆ ವಾಪಸ್ಸು ಕರೆಸಿಕೊಳ್ಳುವಂತಹ ಸ್ಥಿತಿ ನಿರ್ಮಾಣ ಮಾಡಿದ್ದ ಮಮತಾ ರವರಿಗೆ ಇದೀಗ ನ್ಯಾಯಾಲಯ ಮತ್ತೊಮ್ಮೆ ಶಾಕ್ ನೀಡಿದೆ.

ಈ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಬಿಐ ಸಂಸ್ಥೆಗೆ ಇದೀಗ ನ್ಯಾಯಾಲಯ ತಾನು ನೀಡಿದ್ದ ಮಧ್ಯಂತರ ತಡೆಯನ್ನು ವಾಪಸ್ಸು ತೆಗೆದುಕೊಂಡು ಮಾಜಿ ಕೋಲ್ಕತಾ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ರವನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡುವಂತೆ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೇ, ವಿಚಾರಣೆ ಹಾಜರಾಗುವಂತೆ ಸಿಬಿಐ ಸಂಸ್ಥೆ ನೀಡಿದ್ದ ನೋಟಿಸ್​ಗಳನ್ನೂ ರದ್ದು ಮಾಡುವಂತೆ ಮಾಜಿ ಕಮಿಷನರ್ ರಾಜೀವ್​ಕುಮಾರ್ ರವರು ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಸಹ ಹೈಕೋರ್ಟ್​ ವಜಾಮಾಡಿದ್ದು ಈ ತೀರ್ಪು ಹೊರಬೀಳುತ್ತಿದ್ದನಂತೆ ಬಂಗಾಳದಲ್ಲಿ ಅಲ್ಲೊಲ್ಲ ಕಲ್ಲೋಲ ಉಂಟಾಗಿದೆ. ತೀರ್ಪು ಹೊರಬಿದ್ದ ಕೆಲವೇ ಕೆಲವು ನಿಮಿಷಗಳಲ್ಲೂ ಸಿಬಿಐ ಅಧಿಕಾರಿಗಳು ರಾಜೀವ್ ಕುಮಾರ ರವರ ಮನೆ ಬಾಗಿಲು ತಟ್ಟಿದ್ದಾರೆ. ಆದರೆ ರಾಜೀವ್ ಕುಮಾರ್ ಮನೆಯಿಂದ ಹೊರಗೆ ಹೋಗಿದ್ದ ಕಾರಣ ಹಾಗೂ ಸಿಬಿಐ ಸಂಸ್ಥೆಯು ರಾಜೀವ್ ರವರನ್ನು ಸಂಪರ್ಕಿಸಲು ನಡೆದ ಪ್ರಯತ್ನಗಳು ವಿಫಲವಾದ ಕಾರಣ, ಮತ್ತೊಮ್ಮೆ ಸಿಬಿಐ ಸಂಸ್ಥೆಯು ಅಧಿಕೃತವಾಗಿ ಸಮನ್ಸ್ ಜಾರಿ ಮಾಡಿ ಬಂಧಿಸುವುದಾಗಿ ತಿಳಿಸಿದೆ.