ಸೂರ್ಯ ರವರಿಗೆ ಎರಡೆರಡು ಭರ್ಜರಿ ಗಿಫ್ಟ್ ನೀಡಲು ಮುಂದಾಯಿತೇ ಮೋದಿ-ಶಾ ಜೋಡಿ? ರಾಷ್ತ್ರೀಯ ಮಟ್ಟದಲ್ಲಿ ಮಹತ್ವದ ಹುದ್ದೆಗೆ ತೇಜಸ್ವಿ??

ತೇಜಸ್ವಿ ಸೂರ್ಯ ರವರ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಬಿಜೆಪಿ ಪಕ್ಷದ ಯುವ ನಾಯಕರಲ್ಲಿ ಇತ್ತೀಚಿಗೆ ಬಾರಿ ಸದ್ದು ಮಾಡುತ್ತಿರುವುದು ಇವರೇ. ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅಚ್ಚರಿಯಾಗಿ ಟಿಕೆಟ್ ಪಡೆದುಕೊಂಡು ತದ ನಂತರ ಬಹಳ ಸುಲಭವಾಗಿ ಗೆದ್ದು ಸಂಸತ್ ಪ್ರವೇಶ ಮಾಡಿದ್ದ ತೇಜಸ್ವಿ ಸೂರ್ಯ ರವರು ಸಂಸತ್ತಿನಲ್ಲಿಯೂ ತಮ್ಮ ನಿಖರ ಮಾತುಗಳನ್ನು ಮುಂದುವರೆಸಿ ದೇಶದ ಗಮನ ಸೆಳೆದಿದ್ದನ್ನು ನೀವೆಲ್ಲರೂ ನೋಡಿದ್ದೀರಾ. ಹೀಗಿರುವಾಗ ಇತ್ತೀಚಿಗೆ ಬಿಜೆಪಿ ಪಕ್ಷ ದೇಶದ ಬಹುತೇಕ ಜನರ ಬೇಡಿಕೆಯಾಗಿದ್ದ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿರುವ ಕಾರಣ, ಜನ ಜಾಗೃತಿ ಮೂಡಿಸಲು ಆಯ್ಕೆ ಮಾಡಿದ್ದ ಕೆಲವೇ ಕೆಲವು ಸಂಸದರಲ್ಲಿ ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ಸಂಸದರಾಗಿ ಸ್ಥಾನ ಪಡೆದಿದ್ದರು ಈ ಯುವ ನಾಯಕ.

ಇಷ್ಟೆಲ್ಲ ಸದ್ದು ಮಾಡುತ್ತಿರುವ ತೇಜಸ್ವಿ ಸೂರ್ಯರವರಿಗೆ ಇದೀಗ ರಾಷ್ತ್ರೀಯ ಮಟ್ಟದಲ್ಲಿ ಎರಡು ಮಹತ್ವದ ಹುದ್ದೆಗಳಲ್ಲಿ ಕನಿಷ್ಠ ಒಂದನ್ನು  ನೀಡಲು ಮೋದಿ ಶಾ ನೇತೃತ್ವದ ಕೇಂದ್ರ ಬಿಜೆಪಿ ಪಕ್ಷ ಉತ್ಸುಕವಾಗಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಹೌದು, ತೇಜಸ್ವಿ ಸೂರ್ಯ ರವರು ಎಬಿವಿಪಿಯಲ್ಲಿ ಮೊದಲಿಂದಲೂ ಬಹಳ ಅನುಭವನ್ನು ಹೊಂದಿದ್ದಾರೆ. ಬಿಜೆಪಿ ಪಕ್ಷವನ್ನು ಕಟ್ಟಲು ಹಾಗೂ ಮತ್ತಷ್ಟು ಭದ್ರವಾಗಿ ನೆಲೆಯೂರಿಸಲು ಯುವ ನಾಯನ ಅಗತ್ಯವಿದ್ದು, ಎಲ್ಲ ನಾಯಕತ್ವದ ಗುಣಗಳನ್ನು ತೇಜಸ್ವಿ ಸೂರ್ಯ ಹೊಂದಿದ್ದಾರೆ ಎಂದು ಬಿಜೆಪಿ ಪಕ್ಷದ ನಾಯಕರು ತಿಳಿಸಿದ್ದಾರೆ. ಆದ್ದರಿಂದ, ಬಿಜೆಪಿ ರಾಷ್ಟ್ರೀಯ ವಕ್ತಾರ ಅಥವಾ ರಾಷ್ಟ್ರೀಯ ಯುವ ಬಿಜೆಪಿ ಘಟಕದ ಅಧ್ಯಕ್ಷ ಮತ್ತು ಕರ್ನಾಟಕ ರಾಜ್ಯದ ಬಿಜೆಪಿ ಯುವ ಘಟಕದ ಅಧ್ಯಕ್ಷ ಪಟ್ಟಕ್ಕಾಗಿ ಇದೀಗ ಹುಡುಕಾಟ ನಡೆಸುತ್ತಿರುವ ಕಾರಣದಿಂದ ತೇಜಸ್ವಿ ಸೂರ್ಯರವರ ಹೆಸರನ್ನು ಪ್ರಸ್ತಾಪಿಸಲಾಗಿದೆ ಎಂಬುದು ಇದೀಗ ತಿಳಿದುಬಂದಿದೆ. ಒಂದು ವೇಳೆ ಅದೇ ನಡೆದಲ್ಲಿ ಸೂರ್ಯರವರು ಯುವ ನಾಯಕನಾಗಿ ಮತ್ತಷ್ಟು ಸದ್ದು ಮಾಡಲಿದ್ದಾರೆ.

Facebook Comments

Post Author: RAVI