ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಯಡಿಯೂರಪ್ಪ !!

ನಿಮಗೆಲ್ಲರಿಗೂ ತಿಳಿದಿರುವ ಹಾಗೇ, ಕೇಂದ್ರ ಸರ್ಕಾರವು ಇತ್ತೀಚೆಗೆ ರಸ್ತೆಯ ಅಪಘಾತಗಳು ಸೇರಿದಂತೆ, ಇನ್ನಿತರ ದುರ್ಘಟನೆಗಳನ್ನು ತಡೆಯುವ ಉದ್ದೇಶದಿಂದ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ಮಾಡಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡುವವರಿಗೆ ಭಾರಿ ಮೊತ್ತದ ದಂಡವನ್ನು ವಿಧಿಸಿತ್ತು. ಈ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ, ಬಾರಿ ದಂಡ ವಿಧಿಸುವ ನಿರ್ಧಾರಕ್ಕೆ ಬಂದಿತ್ತು. ಕೇಂದ್ರದ ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಕೇಂದ್ರ ಸರ್ಕಾರದ ನಿರ್ಧಾರ ಸರಿ ಇದೆ, ಆದರೆ ರಸ್ತೆಗಳನ್ನು ಸರಿ ಪಡಿಸಿ ತಡ ನಂತರ ದಂಡ ವಿಧಿಸಿ ಎಂದರೆ, ಇನ್ನು ಕೆಲವರು ದಂಡವೇ ಬೇಡ ಎಂದರು. ಇತ್ತ ರಾಜ್ಯ ಸರ್ಕಾರಗಳಿಗೆ ದಂಡ ವಿಧಿಸುವ ಹಕ್ಕು ನೀಡಿ, ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿ ಎಂದು ಕೇಂದ್ರ ಸಂಪೂರ್ಣ ಸ್ವಾತಂತ್ರ ನೀಡಿತ್ತು

ಇದರಿಂದ ಬೇರೆ ರಾಜ್ಯದ ಸರ್ಕಾರಗಳು ತಮ್ಮ ರಾಜ್ಯಕ್ಕೆ ತಕ್ಕಂತೆ ಮೋಟಾರು ಕಾಯ್ದೆಯನ್ನು ಬದಲಾಯಿಸಿ ಸದ್ದು ಮಾಡಿದ್ದರು. ಗುಜರಾತ್ ರಾಜ್ಯ ದಂಡ ಕಡಿಮೆ ಮಾಡಿ ಸುದ್ದಿ ಮಾಡಿದರೆ, ಗೋವಾ ಮುಖ್ಯಮಂತ್ರಿ ಎಲ್ಲ ರಸ್ತೆಗಳು ಸಂಪೂರ್ಣ ಗುಂಡಿಮುಕ್ತ ವಾಗುವ ವರೆಗೂ ದಂಡದ ನಿಯಮಗಳು ಜಾರಿಯಿಲ್ಲ ಎಂದು ಸುದ್ದಿ ಮಾಡಿದ್ದರು. ಇದೀಗ ಇದೇ ವಿಚಾರವಾಗಿ ನಿರ್ಧಾರ ಹೊರಡಿಸಿರುವ ಬಿ ಸ್ ವೈ ರವರು, ಜನ ಸಾಮಾನ್ಯರಿಗೆ ಹೆಚ್ಚುವರಿ ದಂಡದಿಂದ ತೊಂದರೆಯಾಗುತ್ತಿದೆ. ಆದ ಕಾರಣ ಕೂಡಲೇ ದಂಡಗಳ ಮೊತ್ತವನ್ನು ಕಡಿಮೆ ಮಾಡಲು ಆದೇಶ ಹೊರಡಿಸಿದ್ದಾರೆ. ಗುಜರಾತ್ ರಾಜ್ಯದ ದಂಡಗಳ ಮೊತ್ತವನ್ನು ಗಮನದಲ್ಲಿ ಇಟ್ಟುಕೊಂಡು, ದಂಡ ಇಳಿಕೆ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಇಂದು ವಿಧಾನಸೌಧದಲ್ಲಿ ನಡೆದ ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಈ ಆದೇಶ ಹೊರಡಿಸಿರುವ ಬಿ ಸ್ ವೈ ರವರ ನಿರ್ಧಾರಕ್ಕೆ ಒಳ್ಳೆಯ ಪ್ರಶಂಸೆಗಳು ವ್ಯಕ್ತವಾಗಿವೆ.

Facebook Comments

Post Author: RAVI