ದಂಡದಿಂದ ಶಾಕ್ ಗೆ ಒಳಗಾಗಿದ್ದ ಸವಾರರಿಗೆ ಮತ್ತೊಂದು ಬಿಗ್ ಶಾಕ್ !!

ಇತ್ತೀಚೆಗೆ ಟ್ರಾಫಿಕ್ ಪೈನ್ ಅನ್ನು ಹೆಚ್ಚು ಮಾಡಿದ ಬೆನ್ನಲ್ಲೇ ಇದೀಗ ಮತ್ತೆ ರಾಜ್ಯ ಸರ್ಕಾರ ಜನತೆಗೆ ಶಾಕ್ ಕೊಟ್ಟಿದೆ .ಇನ್ನು ಮೋಟಾರ್ ವಾಹನ ಕಾನೂನಿನ ಪರಿಷ್ಕರಣೆಯ ನಿಯಮವನ್ನು ಜಾರಿಗೊಳಿಸಿದಾಗಿನಿಂದ ವಾಹನ ಸವಾರರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಇನ್ನು ಟ್ರಾಫಿಕ್ ರೂಲ್ಸ್ ಗಳನ್ನು ಬ್ರೇಕ್ ಮಾಡಿದರೆ ತಿಂಗಳು ಪೂರ್ತಿ ದುಡಿದ ದುಡ್ಡನೆಲ್ಲ ಟ್ರಾಫಿಕ್ ಪೈನ್ ಗೆ ಕಟ್ಟಬೇಕಾಗುತ್ತದೆ. ಇನ್ನು ಇದರಿಂದ ವಾಹನ ಸವಾರರಿಗೆ ತುಸು ಹೆಚ್ಚೇ ತಲೆ ಬಿಸಿಯಾಗಿದೆ. ಇನ್ನು ಟ್ರಾಫಿಕ್ ರೂಲ್ಸ್ ಗಳನ್ನು ಬ್ರೇಕ್ ಮಾಡಿದವರ ಗಾಡಿಯ ಇನ್ಸುರೆನ್ಸ್ ಮೊತ್ತವನ್ನು ಜಾಸ್ತಿ ಮಾಡಲು ಚಿಂತನೆ ನಡೆದಿದೆಯಂತೆ.

ಇನ್ನು ಸದ್ಯ ಈ ರೂಲ್ಸ್ ಅನ್ನು ದೆಹಲಿಯಲ್ಲಿ ಜಾರಿ ಮಾಡುವ ಬಗ್ಗೆ ವಿಮಾ ಕಂಪನಿಗಳು ಚಿಂತನೆ ನಡೆಸಿವೆಯಂತೆ. ಇನ್ನು ಪೈನ್ ಅನ್ನು ಜಾಸ್ತಿ ಮಾಡುವುದರಿಂದ ಟ್ರಾಫಿಕ್ ರೂಲ್ಸ್ ಗಳನ್ನು ಬ್ರೇಕ್ ಮಾಡುವವರು ಕಮ್ಮಿ ಆಗಬಹುದು ಮತ್ತು ಆಕ್ಸಿಡೆಂಟ್ ಗಳು ಕಮ್ಮಿ ಯಾಗ ಬಹುದು ಎಂದು ತಿಳಿಸಲಾಗಿದೆ. ಸದ್ಯ ಕರ್ನಾಟಕದಲ್ಲಿ ಈಗಾಗಲೇ ಬಂದಿರುವ ಹೊಸ ರೂಲ್ಸ್ ಇಂದ ಬೆಚ್ಚಿಬಿದ್ದಿದ್ದಾರೆ ಸಾರ್ವಜನಿಕರು ಇನ್ನು ಈ ರೂಲ್ಸ್ ಕೂಡ ಬಂದರೆ ವಾಹನ ಸವಾರರಿಗೆ ಹೊರೆಯಾಗುವುದಂತೂ ಸತ್ಯ. ಹೌದು, ಒಂದು ವೇಳೆ ಇದೇ ನಡೆದಲ್ಲಿ ಸಾಮಾನ್ಯರ ಪರಿಸ್ಥಿತಿ ಏನು?? ಈ ಕೂಡಲೇ ಸರ್ಕಾರ ಇದರ ಕುರಿತು ಗಮನ ಹರಿಸಿ ವಿಮಾ ಸಂಸ್ಥೆಗಳಿಗೆ ಬಿಸಿ ಮುಟ್ಟಿಸಬೇಕು. ನಾವು ಸರ್ಕಾರದ ನಿಯಮಗಳನ್ನು ಬ್ರೇಕ್ ಮಾಡಿದರೆ ಸರ್ಕಾರಕ್ಕೆ ದಂಡ ಕಟ್ಟುತ್ತೇವೆ. ಅದಕ್ಕೂ ಈ ವಿಮಾ ಕಂಪನಿಗಳಿಗೂ ಏನು ಸಂಬಂಧ??

Facebook Comments

Post Author: Ravi Yadav