ಕೇವಲ 100 ರೂ ದಂಡ ಪಾವತಿಸಿ ಬಾರಿ ದಂಡದಿಂದ ಪಾರಾಗುವುದು ಹೇಗೆ ಗೊತ್ತಾ?

ಸೂಚನೆ: ನೀವು ಹೆಲ್ಮೆಟ್ ರಹಿತ ಪ್ರಯಾಣ, ಸೀಟ್ ಬೆಲ್ಟ್ ಇಲ್ಲದೇ ಕಾರು ಚಾಲನೆ, ತ್ರಿಬಲ್ ರೈಡಿಂಗ್, ರಾಂಗ್ ಸೈಡ್ ಪಾರ್ಕಿಂಗ್, ಡ್ರಂಕ್ ಅಂಡ್ ಡ್ರೈವ್, ಸಿಗ್ನಲ್ ಜಂಪ್, ಓವರ್ ಲೋ ಮುಂತಾದ ಪ್ರಕರಣಗಳಲ್ಲಿ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ಇದೀಗ, ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಿದರೇ ನಿಮ್ಮ ಜೋಬು ಕಾಲಿಯಾಗುವುದು ಖಚಿತ, ಒಮ್ಮೊಮ್ಮೆ ನಿಮ್ಮ ಒಂದು ತಿಂಗಳ ಸಂಪೂರ್ಣ ದುಡಿಮೆಯನ್ನು ದಂಡವಾಗಿ ನೀಡಬೇಕಾಗುತ್ತದೆ. ಇಷ್ಟೆಲ್ಲ ದಂಡ ತೆರುವ ಬದಲು ಸರ್ಕಾರೀ ನಿಯಮಗಳನ್ನು ಪಾಲಿಸಿದರೆ ದಂಡದಿಂದ ತಪ್ಪಿಸಿಕೊಳ್ಳುವುದು ಅಷ್ಟೇ ಅಲ್ಲದೆ, ಸುರಕ್ಷಿತವಾಗಿ ನೀವು ಮನೆ ಸಹ ಸೇರಬಹುದು. ಪ್ರಾಣಕ್ಕೆ ಕುತ್ತು ತರಬಹುದಾದಾದ ಮದ್ಯಪಾನದ ನಂತರ ವಾಹನ ಚಲಾವಣೆ, ಹೆಲ್ಮೆಟ್ ಅಥವಾ ಸೀಟಬೇಲ್ಟ್ ಇಲ್ಲದ ಡ್ರೈವಿಂಗ್, ಲೈಸೆನ್ಸ್ ಇಲ್ಲಾದೆ ವಾಹನ ಓಡಿಸುವುದು ಇವೆಲ್ಲಾ ಕೇವಲ ನಮ್ಮ ಪ್ರಾಣಕಷ್ಟೇ ಅಲ್ಲ, ನಮ್ಮ ಕುಟುಂಬದವರಿಗೂ ತೊಂದರೆ ತಂದು ಒಡ್ಡುತ್ತದೆ. ಆದರೆ ಇಷ್ಟೇ ಅಲ್ಲದೆ, ಏನು ಮಾಡುವುದು ಹೇಳಿ, ಮನುಷ್ಯನಿಗೆ ಮರೆವು ಎಂಬ ದೊಡ್ಡ ಕಾಯಿಲೆ ಇದೆ. ಅದಕ್ಕಾಗಿಯೇ ನೀವು ಒಂದು ವೇಳೆ ಮನೆಯಲ್ಲಿ ದಾಖಲೆಗಳನ್ನು ಮರೆತು ಬಂದಿದ್ದರೆ ಸಾವಿರಾರು ದಂಡ ಕಟ್ಟುವ ಅಗತ್ಯವಿಲ್ಲ.

ನೀವು ಒಂದು ವೇಳೆ ಅವಸರದಿಂದ, ಡ್ರೈವಿಂಗ್ ಲೆಸೆನ್ಸ್, ವಾಹನದ ಆರ್‌ಸಿ, ಮಾಲಿನ್ಯ ತಪಸಣಾ ಪತ್ರ ಅಥವಾ ವಿಮಾ ದಾಖಲೆಗಳನ್ನು ಬೇರೆ ಕಡೆ ಮರೆತು ಪೋಲೀಸರ ಕೈಗೆ ಸಿಕ್ಕಿ ಹಾಕಿಕೊಂಡರೆ, 100 ರೂ ದಂಡ ಪಾವತಿ ಮಾಡಿ ಪೊಲೀಸರಿಂದ ಚಲನ್ ಪಡೆದುಕೊಂಡು, ನ್ಯಾಯಾಲಯದಲ್ಲಿ ಎಲ್ಲ ದಾಖಲೆಗಳನ್ನು ಸಲ್ಲಿಕೆ ಮಾಡುತ್ತೇವೆ ಎನ್ನಬಹುದು. ಸುಳ್ಳು ಹೇಳಲು ಸಾಧ್ಯವಿಲ್ಲ ಯಾಕೆಂದರೆ ಒಂದು ವೇಳೆ ಸುಳ್ಳಾದರೆ ಮನೆಗೆ ನೋಟೀಸ್ ಬರಲಿದೆ. ಆದ ಕಾರಣದಿಂದ ನಿಜವಾಗಿಯೂ ನಿಮ್ಮ ಬಳಿ ದಾಖಲೆಗಳು ಇದ್ದರೆ, ಸಂಪೂರ್ಣ ದಂಡ ಪಾವತಿ ಮಾಡಬೇಡಿ. ಈ ನಿಯಮಗಳನ್ನು ಯಾವ ಪೊಲೀಸರು ನಿಮಗೆ ತಿಳಿಸುವುದಿಲ್ಲ. ದಯವಿಟ್ಟು ಈ ಉಪಯುಕ್ತ ಮಾಹಿತಿಯನ್ನು ಶೇರ್ ಮಾಡಿ ಎಲ್ಲರಿಗೂ ತಲುಪಿಸಿ.

Facebook Comments

Post Author: Ravi Yadav