ಬಿಗ್ ಬ್ರೇಕಿಂಗ್- ಮಹಾರಾಷ್ಟ್ರದಲ್ಲಿ ಮೀಸಲಾತಿಯ ಬಗ್ಗೆ ಹೊಸ ಬಾಂಬ್ ಸಿಡಿಸಿದ ಗಡ್ಕರಿ

ಭಾರತ ದೇಶದ ಅಭಿವೃದ್ಧಿಗೆ ತೊಡಕಾಗಿರುವ ದೊಡ್ಡ ಪಿಡುಗು ಎಂದರೆ ಅದುವೇ ಮೀಸಲಾತಿ, ಜಾತಿಯ ಆಧಾರದಲ್ಲಿ ಇಲ್ಲಿ ಮೀಸಲಾತಿ ದೊರೆಯುತ್ತದೆ, ಆದರೆ ಸತ್ಯ ಹೇಳುತ್ತೇವೆ ಅದೇ ಜಾತಿಯವರು ತಮ್ಮದೇ ಜಾತಿಯ ಹಾಗೂ ತಮಗಿಂತ ಬಡವರಾಗಿರುವ ಜನರಿಗೆ ಇದೇ ಸೌಲಭ್ಯ ನಿಮ್ಮ ಜಾತಿಯವರಿಗೆ ನೀಡುತ್ತೇವೆ, ನೀವು ಹೇಗಿದ್ದರೂ ಹಣಕಾಸಿನ ವಿಷಯದಲ್ಲಿ ಅವರಿಗಿಂತ ಮೇಲಿದ್ದೀರಿ ಎಂದರೆ, ಸುಮ್ಮನೆ ಸಿಗುವುದನ್ನು ಯಾಕೆ ಬಿಡಬೇಕು ಎಂದು , ಮೀಸಲಾತಿಯನ್ನು ದುರುಪಯೋಗ ಪಡೆಸಿಕೊಳ್ಳುತ್ತಾರೆ. ಹೀಗೆ ಇರುವಾಗ ಇನ್ನು ಬೇರೆ ಜಾತಿಯ ಬಡ ಜನರಿಗೆ ಏನಾದ್ರು ನೀಡುತ್ತೀರಾ ಅಂದರೆ ಸಾಕು, ಎಲ್ಲಿಲ್ಲದ ಪ್ರತಿಭಟನೆಗಳು, ಆಕ್ರೋಶಗಳು ಹೊರಬೀಳುತ್ತವೆ. ಅಷ್ಟೇ ಅಲ್ಲದೆ, ಈ ಮೀಸಲಾತಿಯನ್ನು ಯಾವ ರಾಜಕೀಯ ನಾಯಕರು ಸಹ ಮುಟ್ಟಲು ಹೋಗುವುದಿಲ್ಲ, ಯಾಕೆಂದರೆ ಮತ ವಿಭಜನೆ ಯಾಗುತ್ತದೆ ಎಂಬ ಭಯ.

ಜನರು ಅಷ್ಟೇ ಸ್ವಾಮಿ, ಬಾಯ್ ಮಾತಿಗೆ ಮೀಸಲಾತಿ ತೆಗೆಯಬೇಕು ಎನ್ನುತ್ತಾರೆ. ಆದರೆ, ಅದೇ ಅವರ ಜಾತಿ ಅಥವಾ ಧರ್ಮಕ್ಕೆ ನೀಡಿರುವ ಮೀಸಲಾತಿ ಮಾತ್ರ ತೆಗೆಯಬೇಡಿ, ಉಳಿದವರ ಮೀಸಲಾತಿ ಬೇಕಿದ್ದರೆ ತೆಗೆಯಿರಿ ಎನ್ನುತ್ತಾರೆ. ಆದರೆ ಈ ಎಲ್ಲ ವಿದ್ಯಮಾನಗಳ ನಡುವೆ ಕೇಂದ್ರ ಸಚಿವ ನಿತಿನ್ ಗಡ್ಕರಿ ರವರು ಹೊಸ ಬಾಂಬ್ ಸಿಡಿಸಿದ್ದಾರೆ. ಹಾಗೂ ಈ ಮೂಲಕ ತಾವು ಓಲೈಕೆ ರಾಜಕಾರಣ ಮಾಡುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾರಿ ಹೇಳಿದ್ದಾರೆ. ಹೌದು, ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಇನ್ನೇನು ಕೆಲವೇ ಕೆಲವು ದಿನಗಳನ್ನು ಬಿಜೆಪಿ ಪಕ್ಷದ ಭದ್ರ ಕೋಟೆ ಎನಿಸಿಕೊಂಡಿರುವ ಮಹಾರಾಷ್ಟ್ರ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ ಬಿಜೆಪಿ ಪಕ್ಷಕ್ಕೆ ಇಲ್ಲಿ ತಲೆನೋವಾಗಿ ಕಾಡುತ್ತಿರುವುದು ಏನೆಂದರೆ, ಮರಾಠ ಮೀಸಲಾತಿ.

ಅಧಿಕಾರದಲ್ಲಿ ಇರುವ ಬಿಜೆಪಿ ಪಕ್ಷವು, ಮರಾಠ ಮೀಸಲಾತಿಯನ್ನು ಹೆಚ್ಚಳ ಮಾಡಬೇಕು ಎಂದು ಹಲವಾರು ಜನ ಹೋರಾಟ ಮಾಡುತ್ತಿದ್ದಾರೆ, ಹಾಗೂ ಈ ನಿರ್ಧಾರದ ಮೇಲೆ ಮುಂದಿನ ಬಿಜೆಪಿ ಪಕ್ಷದ ಚುನಾವಣಾ ಭವಿಷ್ಯ ನಿಂತಿದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಾಯಕ ಗಡ್ಕರಿ ರವರು, ಬಡತನದ ಆಧಾರದ ಮೇಲೆ ಮೀಸಲಾತಿ ನೀಡಬೇಕೇ ಹೊರತು ಜಾತಿಯ ಆಧಾರದ ಮೇಲಲ್ಲ, ನಿರಾಶೆ ಮತ್ತು ಅನಾನುಕೂಲತೆಯಿಂದಾಗಿ ಮೀಸಲಾತಿ ಕೋರಲಾಗುತ್ತಿದೆ. ಮೀಸಲಾತಿಯನ್ನು ಆರ್ಥಿಕ ಸ್ಥಿತಿಯ ಆಧಾರದ ಮೇಲೆ ನೀಡಬೇಕು ಮತ್ತು ಜಾತಿ, ಭಾಷೆ ಅಥವಾ ಪ್ರದೇಶದ ಆಧಾರದ ಮೇಲೆ ನೀಡಬಾರದು ಎಂಬ ನಂಬಿಕೆ ಕೇಂದ್ರ ಸರ್ಕಾರದಲ್ಲಿದೆ. ಎಲ್ಲಾ ಬಡವರಿಗೂ ಮೀಸಲಾತಿ ಇರುತ್ತದೆ, ತಲಾ ಆದಾಯ ಹೆಚ್ಚಳವಾದರೆ ಅವರೇ ನಮಗೆ ಮೀಸಲಾತಿ ಬೇಡ ಎನ್ನುತ್ತಾರೆ. ಇದಕ್ಕೆ ಸದ್ಯದಲ್ಲಿಯೇ ಮುಖ್ಯಮಂತ್ರಿಗಳು ಪರಿಹಾರ ಕಂಡುಕೊಳ್ಳಲಿದ್ದಾರೆ ಎಂದರು. ಈ ರೀತಿಯ ನಿರ್ಧಾರ ಇಡೀ ದೇಶದಲ್ಲಿ ಜಾರಿಗೆ ಬಂದರೆ, ಕಂಡಿತಾ ಭಾರತ ಬಡತನ ಮುಕ್ತ ಹಾಗೂ ನಂಬರ್ 1 ದೇಶವಾಗಲಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.

Facebook Comments

Post Author: Ravi Yadav