ಚಂದ್ರಯಾನ-2- ಕೇಳದೇ ಸಹಾಯ ಹಸ್ತ ಚಾಚಿದ ಇಸ್ರೇಲ್ ! ಮಾಡುತ್ತೀರುವುದಾದರೂ ಏನು ಗೊತ್ತಾ?

ಭಾರತ ಹಾಗೂ ಇಸ್ರೇಲ್ ದೇಶದ ನಡುವಿನ ಸಂಬಂಧದ ಬಗ್ಗೆ ನಿಮಗೆ ಹೇಳ ಬೇಕಾದ ಅವಶ್ಯಕತೆ ಇಲ್ಲ ಎಂದು ಅನಿಸುತ್ತದೆ. ಪ್ರತಿಯೊಂದು ವಿಷಯದಲ್ಲಿಯೂ ಇಸ್ರೇಲ್ ದೇಶ ಭಾರತ ದೇಶದ ಜೊತೆ ನಿಂತುಕೊಳ್ಳುತ್ತದೆ. ಇದೀಗ ಮತ್ತೊಮ್ಮೆ 130 ಕೋಟಿ ಭಾರತೀಯರ ಕನಸಾಗಿರುವ ಚಂದ್ರಯಾನದ ಕುರಿತಾದ ವಿಷಯದಲ್ಲಿ ಭಾರತದ ಜೊತೆ ಕೈ ಜೋಡಿಸಲು ಮುಂದಾಗಿದೆ. ಈಗಾಗಲೇ ಭಾರತದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಲು ಇಸ್ರೇಲ್ ದೇಶ ಭಾರತದ ಜೊತೆ ಕೈ ಜೋಡಿಸಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ತನ್ನಅತ್ಯಾಧುನಿಕ ಟೆಕ್ನಾಲಜಿಯ ಮೂಲಕ ತಾನ್ನೊಬ್ಬ ಚಿಕ್ಕ ದೇಶವಾದರೂ ವಿಶ್ವ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿ, ಬಲಾಢ್ಯ ದೇಶಗಳಿಗೆ ಠಕ್ಕರ್ ನೀಡುವ ಸಾಮರ್ಥ್ಯ ಹೊಂದಿದೆ. ಅದರಲ್ಲಿಯೂ ವಾಯು ಟೆಕ್ನಾಲಿಜಿ (Air-Technology ) ವಿಷಯಕ್ಕೆ ಬಂದರೆ ವಿಶ್ವದ ಯಾವುದೇ ದೇಶಗಳು ಇಸ್ರೇಲ್ ನ ಮುಂದೆ ನಿಲ್ಲುವುದಿಲ್ಲ.

ವ್ಯವಸಾಯದಿಂದ ಹಿಡಿದು, ಯುದ್ಧಕ್ಕೆ ಬೇಕಾಗಿರುವ ಡ್ರೋನ್, ವಿಮಾನಗಳ ಅತ್ಯಾಧುನಿಕ ಟೆಕ್ನಾಲಜಿ ಯನ್ನು ಹೊಂದಿರುವ ಇಸ್ರೇಲ್ ದೇಶವು ಸ್ಯಾಟಲೈಟ್ ಕಮ್ಯುನಿಕೇಷನ್ ನಲ್ಲಿಯೂ ಸಹ ಹಿಂದೆ ಬಿದ್ದಿಲ್ಲ. ಇಡೀ ವಿಶ್ವವೇ ನಿಬ್ಬೆರಾಗುವಂತಹ ಸಾಧನೆಗಳನ್ನು ಈಗಾಗಲೇ ಮಾಡಿ ತೋರಿಸಿದೆ, ಹೀಗಿರುವಾಗ ಇದೀಗ 130 ಕೋಟಿ ಭಾರತೀಯರ ಕನಸಾಗಿರುವ ಚಂದ್ರಯಾನ-2 ರ ಅಖಾಡಕ್ಕೆ ಇಳಿಯಲಿದೆ ನಮ್ಮೆಲ್ಲರ ನೆಚ್ಚಿನ ಹಾಗೂ ಭಾರತ ದೇಶದ ಪರಮಾಪ್ತ ಇಸ್ರೇಲ್ ದೇಶ. ಹೌದು ಇದೀಗ ಭಾರತೀಯ ಬಾಹ್ಯಾಕಾಶ ಸಂಸ್ಥೆಯು ವಿಕ್ರಂ ಲ್ಯಾಂಡರ್ ಜೊತೆ ಮರು ಸಂಪರ್ಕ ನಡೆಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇದರ ಕುರಿತು ಟ್ವೀಟ್ ಮಾಡಿರುವ ಇಸ್ರೇಲ್ ದೇಶವು, ಭಾರತ ದೇಶದ ಪ್ರಯತ್ನ ನಿಜವಾಗಿಯೂ ಕಷ್ಟದ ಕೆಲಸ, ಆದರೆ ಇಸ್ರೋ ಹಾಗೂ ಭಾರತೀಯ ವಿಜ್ಞಾನಿಗಳು ಅತಿ ದೊಡ್ಡ ಸಾಧನೆ ಮಾಡಿದ್ದಾರೆ. ಕಂಡಿತಾ ಭಾರತ ದೇಶವು ಚಂದ್ರನನ್ನು ತಲುಪುತ್ತದೆ ಎಂದು ತಿಳಿಸಿದೆ.

ಅಷ್ಟೇ ಅಲ್ಲದೆ ಇಂತಹ ಸಮಯದಲ್ಲಿ ಇಸ್ರೇಲ್ ದೇಶವು ಸಹಾಯ ಹಸ್ತ ಚಾಚುಲು ಮುಂದೆ ಬಂದಿದ್ದು, ಕಳೆದ ವರ್ಷ ಏಪ್ರಿಲ್ ನಲ್ಲಿ ತನ್ನ ರೋಬೋಟಿಕ್ ಲುನರ್ ಲ್ಯಾಂಡರ್ ಪತನ ಹೊಂದಿದ ಕಾರಣಗಳನ್ನು ಈಗಾಗಲೇ ಅವಲೋಕನ ನಡೆಸಲಾಗಿದೆ, ಈ ವರದಿಗಳು ನಿಮಗೆ ವಿಕ್ರಂ ಲ್ಯಾಂಡರ್ ಜೊತೆ ಮರು ಸಂಪರ್ಕ ನಡೆಸಲು ಬಹಳ ಉಪಯೋಗಕ್ಕೆ ಬರಲಿವೆ. ಅಷ್ಟೇ ಅಲ್ಲದೆ ಈ ವಿಷಯದಲ್ಲಿ ಪ್ರತಿಯೊಂದು ಹಂತದಲ್ಲಿಯೂ ಇಸ್ರೇಲ್ ದೇಶ ಭಾರತದ ಜೊತೆ ಇರಲಿದೆ ಎಂದು ಹೇಳಿದೆ. ಇನ್ನು ವಿವರಗಳನ್ನು ಕೆದಕಿದಾಗ ಇಸ್ರೇಲ್ ಚಂದ್ರಯಾನಕ್ಕೂ ಹಾಗೂ ನಮ್ಮ ಚಂದ್ರಯಾನಕ್ಕೂ ಸಾಮ್ಯತೆ ಇರುವ ಕಾರಣ ಈ ವರದಿಗಳು ಸಾಕಷ್ಟು ಉಪಯೋಗಕ್ಕೆ ಬರಲಿವೆ ಎಂದು ತಿಳಿದುಬಂದಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯವೇನೆಂದರೆ, ಈ ವರದಿಯಿಂದ ದೇಶದ ಆಂತರಿಕ ಭದ್ರತೆಯ ಬಗ್ಗೆ ಹಾಗೂ ದೇಶದ ಯೋಜನೆಗಳು ಬೇರೆ ದೇಶದ ಕೈ ಸೇರುವ ಕಾರಣ, ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳು ಇರುತ್ತವೆ ಎಂಬ ಕಿಂಚಿತ್ತೂ ಆತಂಕವಿಲ್ಲದೆ ಇಸ್ರೆಲ್ ದೇಶ ಭಾರತದ ಜೊತೆ ಕೈ ಜೋಡಿಸಲು ಮುಂದಾಗಿದೆ. ಇದಕ್ಕಾಗಿಯೇ ಹೇಳುವುದು ಇಸ್ರೇಲ್ ದೇಶ ಭಾರತದ ಆಪ್ತ ಮಿತ್ರ ದೇಶವೆಂದು. ಏನಂತೀರಾ??

Facebook Comments

Post Author: RAVI