ಮತ್ತೊಂದು ಹಿಂದೂ ಧರ್ಮದ ಸಿದ್ಧಾಂತದ ಪರ ಮಹತ್ವದ ಹೆಜ್ಜೆ ಇಟ್ಟ ಯತ್ನಾಳ್ ! ಮತ್ತೊಂದು ಖಡಕ್ ಸಂದೇಶ ರವಾನೆ

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ವಿಜಯಪುರ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮೊದಲಿನಿಂದಲೂ ಹಿಂದೂ ಫೈಯರ್ ಬ್ರಾಂಡ್ ಎಂದು ಖ್ಯಾತಿ ಪಡೆದುಕೊಂಡಿದ್ದಾರೆ. ಸದಾ ಯಾವ ಟೀಕೆಗಳಿಗೂ ಅಥವಾ ವಿವಾದಗಳಿಗೂ ತಲೆಕೆಡಿಸಿಕೊಳ್ಳದ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಹಿಂದೂ ಧರ್ಮದ ಪರ ಹಾಗೂ ಹಿಂದೂ ಧರ್ಮದ ಸಿದ್ಧಾಂತದ ಪರ ಧ್ವನಿ ಎತ್ತುತ್ತಾರೆ. ಈಗಾಗಲೇ ಈ ರೀತಿಯ ಹೇಳಿಕೆಗಳಿಂದಾಗಿ ಬಸವನಗೌಡ ಪಾಟೀಲ್ ಯತ್ನಾಳ್ ರವರ ಮೇಲೆ ಹಲವಾರು ಕೇಸ್ಗಳು ಸಹ ದಾಖಲಾಗಿವೆ. ಆದರೆ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಇದ್ಯಾವುದಕ್ಕೂ ಇಲ್ಲಿಯವರೆಗೂ ತಲೆಕೆಡಿಸಿಕೊಂಡಿಲ್ಲ. ಈಗಲೂ ಸಹ ಮತ್ತೊಂದು ಹಿಂದೂ ಧರ್ಮದ ಸಿದ್ಧಾಂತದ ಪರವಾಗಿ ಧ್ವನಿ ಎತ್ತಿರುವ ಯತ್ನಾಳ್ ರವರು, ಮಹತ್ವದ ಹೆಜ್ಜೆ ಇಟ್ಟು ಮತ್ತೊಮ್ಮೆ ಕಡಕ್ ಸಂದೇಶ ರವಾನೆ ಮಾಡಿದ್ದಾರೆ.

ಹೌದು, ಇದೀಗ ಹಿಂದೂಗಳ ಹಲವಾರು ವರ್ಷಗಳ ಕನಸಾಗಿರುವ ಗೋ ಹತ್ಯೆ ನಿಷೇಧ ಕಾನೂನನ್ನು ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದು ಮಹತ್ವದ ಹೆಜ್ಜೆಯನ್ನು ಇಟ್ಟಿರುವ ವಿಜಯಪುರ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ಯಡಿಯೂರಪ್ಪನವರಿಗೆ ಪತ್ರ ಬರೆದು, ಗೋಹತ್ಯ ನಿಷೇಧ ಕಾನೂನನ್ನು ಜಾರಿಗೊಳಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಗೋವುಗಳನ್ನ ತಿನ್ನಲೇ ಬೇಕು ಅನಿಸಿದರೆ, ನೆರೆಯ ಶತೃ ರಾಷ್ಟ್ರ ಪಾಕಿಸ್ತಾನಕ್ಕೆ ಹೋಗಿ. ಇಲ್ಲಿ ಭಾರತದಲ್ಲಿ ಗೋಹತ್ಯೆ ಸಹಿಸಲ್ಲ, ಕೇವಲ 8% ಜನಸಂಖ್ಯೆ ಇರುವವರಿಗಾಗಿ ನಮ್ಮ ದೇಶ ಇಲ್ಲ. 80% ಇರುವ ಹಿಂದೂಗಳಿಗಾಗಿ ನಮ್ಮ ದೇಶ ಇದೆ ಎಂದು ಹೇಳಿದ ಬಸವನಗೌಡ ಪಾಟೀಲ್ ಯತ್ನಾಳ್ ಅವರು ನಮ್ಮ ಕರ್ನಾಟಕ ರಾಜ್ಯದಲ್ಲೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ. ಗೋಹತ್ಯೆ ಮಾಡಿದ ಕಾರಣ ಇಂದು ಪಾಕಿಸ್ತಾನದಲ್ಲಿ ಹಾಲು ಸಹ ಸಿಗುತ್ತಿಲ್ಲ. ಪಾಕಿಸ್ತಾನದಲ್ಲಿ ಹಾಲಿನ ಬೆಲೆ ಒಂದು ಲೀಟರ್ ಹಾಲಿಗೆ 150 ರೂಪಾಯಿಗಳು ಆಗಿದೆ. ಗೋವುಗಳು ಸಿಗದಿದ್ದಕ್ಕೆ ಪಾಕಿಸ್ತಾನದಲ್ಲಿ ಕತ್ತೆಗಳನ್ನು ಕಡಿದು ತಿನ್ನುತ್ತಿದ್ದಾರೆ ಎಂದು ಪಾಕ್ ವಿರುದ್ಧ ಹರಿಹಾಯ್ದರು.

Facebook Comments

Post Author: RAVI