ಟ್ರಾಫಿಕ್ ರೂಲ್ಸ್ ಬ್ರೇಕಿಂಗ್- ದಂಡದಿಂದ ತಪ್ಪಿಸಿಕೊಳ್ಳಲು ಹೊಸ ಐಡಿಯಾ ನೀಡಿದ ಪೊಲೀಸರು.

ಇದೀಗ ಎಲ್ಲೆಡೆ ಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ಹೆಚ್ಚಿನ ದಂಡ ವಿಧಿಲಾಗುತ್ತಿದೆ. ಇಷ್ಟು ದಿವಸ ದಂಡ ಕಡಿಮೆ ಇದ್ದ ಕಾರಣ, ಮನಬಂದಂತೆ ವಾಹನ ಚಲಾವಣೆ ಮಾಡುತ್ತಿದ್ದವರನ್ನು ಯಾರಾದರೂ ಪ್ರಶ್ನೆ ಮಾಡಿದರೆ, ಹೇ ಬಿಡಿ ಸಾರ್, ದಂಡ ತಾನೇ ಕಟ್ಟಿದರೆ ಆಯಿತು, ೧೦೦ ಅಥವಾ ೨೦೦ ಅಷ್ಟೇ ಅನ್ನುತ್ತಿದ್ದರು. ಆದರೆ ಇದೀಗ ದಂಡದ ಪ್ರಮಾಣ ಹೆಚ್ಚಾಗಿದೆ, ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಪೊಲೀಸರಿಗೆ ಬಾಡಿ ಕ್ಯಾಮೆರಾ ಕೂಡ ಸಿಗಲಿದೆ. ಇದರಿಂದ ಪೊಲೀಸರನ್ನು ಅಡ್ಜಸ್ಟ್ ಮಾಡಿಕೊಂಡು ತಪ್ಪಿಸಿಕೊಳ್ಳಬಹುದು ಎಂದು ಕೊಂಡಿದ್ದ ಎಲ್ಲರಿಗೂ ಬ್ರೇಕ್ ಬೀಳಲಿದೆ. ಭ್ರಷ್ಟ್ರಾಚಾರ ನಿಲ್ಲಲಿದೆ. ಎಲ್ಲ ಟ್ರಾಫಿಕ್ ಪೊಲೀಸರು ಇದನ್ನು ಧರಿಸಲೇಬೇಕಾದ ಕಡ್ಡಾಯ ಕಾನೂನು ಜಾರಿಯಾಗಲಿದೆ. ಈಗಾಗಲೇ ಹಲವಾರು ಜನರು ಹೆಚ್ಚಿನ ದಂಡವನ್ನು ಕಟ್ಟಿದ ಪ್ರಸಂಗವನ್ನು ನಾವು ಕೇಳುತ್ತಿದ್ದೇವೆ. ನೀವು ಅದರಲ್ಲಿ ಒಬ್ಬರಾಗಬಾರದು ಎಂದರೆ, ಪೊಲೀಸರಿಗೆ ನಿಮಗೆ ಹೊಸ ಐಡಿಯಾ ನೀಡುತ್ತಿದ್ದಾರೆ.

ಹೊಸ ಮೋಟಾರ್ ಕಾಯ್ದೆ ಜಾರಿಯಾಗಿರುವ ಕಾರಣ, ವಾಹನಗಳಿಗೆ ಸಂಬಂಧಿಸಿದ ಎಲ್ಲ ಮೂಲ ಪ್ರತಿಗಳನ್ನು ಚಾಲನೆ ಮಾಡುವ ವೇಳೆಯಲ್ಲಿ ಕಡ್ಡಾಯವಾಗಿ ತೋರಿಸಬೇಕೇ ಎಂದು ಕನ್ಫ್ಯೂಸ್ ಆಗಿದ್ದರು. ಅಷ್ಟೇ ಅಲ್ಲದೆ, ಸಾಮಾನ್ಯವಾಗಿ ಮರೆವು ಎಲ್ಲರಲ್ಲೂ ಇರುತ್ತದೆ. ಆದ ಕಾರಣದಿಂದ ಮೂಲ ಪ್ರತಿಗಳನ್ನು ಮನೆಯಲ್ಲಿ ಮರೆತು ಬಂದರೆ ಇಷ್ಟು ದಂಡ ಬೇಡ ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಉತ್ತರ ನೀಡಿರುವ, ಪೊಲೀಸ್ ಆಯುಕ್ತ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ರವರು, ಮೂಲ ದಾಖಲೆಗಳನ್ನು ಹಾರ್ಡ್ ಕಾಪಿ ತೋರಿಸಬೇಕು ಎಂದು ಏನು ಇಲ್ಲ, ಮೊಬೈಲ್ ನಲ್ಲಿ ಸ್ಕ್ಯಾನ್ ಮಾಡಿ ಅಥವಾ ಫೋಟೋ ತೆಗೆದ ಕಾಪಿ ಗಳನ್ನೂ ತೋರಿಸಿದರೆ ಸಾಕು ನಿಮಗೆ ಯಾವುದೇ ದಂಡ ವಿಧಿಸುವುದಿಲ್ಲ. ಈ ಹಿಂದೆ ಹಾರ್ಡ್ ಕಾಪಿ ಬೇಕೇ ಬೇಕು ಎಂಬ ನಿಯಮವಿತ್ತು, ಆದರೆ ಕೇಂದ್ರ ಸರ್ಜಾರ ಡಿಜಿಟಲ್ ಇಂಡಿಯಾ ಯೋಜನೆಯ ಅಡಿಯಲ್ಲಿ ಈ ನಿರ್ಬಂಧವನ್ನು ಸಡಿಲಿಸಿದೆ. ಆದ ಕಾರಣದಿಂದ ಸಾಫ್ಟ್ ಕಾಪಿ ತೋರಿಸಿದರೆ ಸಾಕು ಎಂದು ಉತ್ತರಿಸಿ, ಎಲ್ಲರೂ ಡಿಜಿ ಲಾಕರ್ ಅಪ್ಲಿಕೇಶನ್ ಅನ್ನು ಬಳಸುವಂತೆ ಐಡಿಯಾ ನೀಡಿದ್ದಾರೆ.

Facebook Comments

Post Author: RAVI