ಬಟ್ಲರ್ ರವರಿಗೆ ಸ್ಪೂರ್ತಿಯಾದ ಆ ಮೂವರು ಕ್ರಿಕೆಟ್ ಆಟಗಾರರು ಯಾರು ಗೊತ್ತಾ?? ಭಾರತೀಯರಿಗೂ ಸ್ಥಾನ ನೀಡಿದ ಬಟ್ಲರ್ !!

ಇಂದಿನ ಕ್ರಿಕೆಟ್ ಜಗತ್ತಿನಲ್ಲಿ, ಬಲಾಢ್ಯ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಹಾಗೂ ಬಲಿಷ್ಠ ಬ್ಯಾಟ್ಸಮನ್ ಆಗಿರುವ ಜೋಸ್ ಬಟ್ಲರ್ ರವರ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಕಳೆದ ಎರಡು ವರ್ಷಗಳಿಂದ ಅತ್ಯದ್ಭುತ ಫಾರ್ಮ್ನಲ್ಲಿ ಬ್ಯಾಟ್ ಬೀಸಿರುವ ಬಟ್ಲರ್ ರವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಭಾರತೀಯ ಕ್ರಿಕೆಟ್ ಲೀಗ್ ಐಪಿಎಲ್ ನಲ್ಲಿಯೂ ತಮ್ಮದೇ ಆಟದ ವೈಖರಿಯ ಮೂಲಕ ಬಾರಿ ಸದ್ದು ಮಾಡಿರುವ ಜೋಸ್ ಬಟ್ಲರ್ ರವರಿಗೆ ಕ್ರಿಕೆಟ್ ನಲ್ಲಿ ಸ್ಪೂರ್ತಿದಾಯಕರಾಗಿರುವ ಮೂವರು ಆಟಗಾರರ ಬಗ್ಗೆ ತಾವೇ ಮಾತನಾಡಿದ್ದಾರೆ. ಈ ಕುರಿತು ತಮ್ಮ ಸಂದೇಶವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿರಿರುವ ಜೋಸ್ ಬಟ್ಲರ್ ರವರು ಮಾತುಗಳು ಈ ಕೆಳಗಿನಂತಿವೆ.  ಆ ಮೂವರಲ್ಲಿ ಒಬ್ಬ ಭಾರತೀಯ ಕ್ರಿಕೆಟ್ ಆಟಗಾರ ಕೂಡ ಸ್ಥಾನ ಪಡೆದಿದ್ದಾರೆ. ಅಷ್ಟಕ್ಕೂ ಆ ಮೂವರು ಕ್ರಿಕೆಟ್ ಆಟಗಾರರು ಯಾರು ಗೊತ್ತಾ?

ಮಾಡ್ರನ್ ಡೇ ಕ್ರಿಕೆಟ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿ ನಿವೃತ್ತಿ ಪಡೆದುಕೊಂಡಿರುವ ವಿಶ್ವ ಶ್ರೇಷ್ಠ ಆಟಗಾರರಾದ ನ್ಯೂಜಿಲ್ಯಾಂಡ್ ತಂಡದ ಮಾಜಿ ನಾಯಕ ಹಾಗೂ ಆರಂಭಿಕ ಆಟಗಾರ ಮೆಕಲಮ್, ಬೌಲರ್ ಗಳಿಗೆ ಅಕ್ಷರಸಹ ಸಿಂಹ ಸ್ವಪ್ನವಾಗಿ ಕಾಡಿದ್ದ ಹಾಗೂ ನಮ್ಮೆಲ್ಲರ ನೆಚ್ಚಿನ ಆಟಗಾರ ಎ ಬಿ ಡಿವಿಲಿಯರ್ಸ್. ಮತ್ತು ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರವರು ಬಟ್ಲರ್ ರವರಿಗೆ ಸ್ಪೂರ್ತಿಯಾದ ಆಟಗಾರಾಗಿದ್ದಾರೆ. ಇನ್ನು ಇದರ ಬಗ್ಗೆ ಮಾತನಾಡುವಾಗ ಎ ಬಿ ಡಿವಿಲಿಯರ್ಸ್ ಹಾಗೂ ಮೆಕಲಮ್ ರವರು ಕ್ರಿಕೆಟ್ ಆಟದಲ್ಲಿ ಆಡಿ ಧರಿಸಿದ್ದ ಜರ್ಸಿ ಯನ್ನು ಅವರ ಬಳಿ ಆಟೋಗ್ರಾಫ್ ಪಡೆದುಕೊಂಡು ತಮ್ಮ ಡ್ರೆಸ್ಸಿಂಗ್ ರೂಮ್ ಕೊಠಡಿಯಲ್ಲಿ ಇಟ್ಟಿಕೊಂಡಿರುವುದಾಗಿ ತಿಳಿಸಿದ್ದಾರೆ.  ಈ ವಿಷಯ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರ ಜೊತೆ ಶೇರ್ ಮಾಡಿ ಹಂಚಿಕೊಳ್ಳಿ, ಮತ್ತಷ್ಟು ಸುದ್ದಿಗಳಿಗಾಗಿ ಕರುನಾಡ ವಾಣಿ ಲೈಕ್ ಮಾಡಿ ಫಾಲೋ ಮಾಡಿ.

Facebook Comments

Post Author: Ravi Yadav