ಜಮೀರ್ ಹೊಸ ವೇಷ ಕಂಡು ಸಿಡಿದೆದ್ದ ನೆಟ್ಟಿಗರು ! ಜಮೀರ್ ಅಹಮದ್ ರವರಿಗೆ ಎಚ್ಚರಿಕೆ ನೀಡಿದ್ದು ಹೇಗೆ ಗೊತ್ತಾ??

ಜಮೀರ್ ಹೊಸ ವೇಷ ಕಂಡು ಸಿಡಿದೆದ್ದ ನೆಟ್ಟಿಗರು ! ಜಮೀರ್ ಅಹಮದ್ ರವರಿಗೆ ಎಚ್ಚರಿಕೆ ನೀಡಿದ್ದು ಹೇಗೆ ಗೊತ್ತಾ??

ಕರ್ನಾಟಕ ರಾಜ್ಯದಲ್ಲಿ ಮೊದಲಿನಿಂದಲೂ ಟಿಪ್ಪು ಜಯಂತಿ ಹಾಗೂ ಟಿಪ್ಪುವಿನ ಹಲವಾರು ವಿಷಯಗಳು ಭಾರೀ ವಿವಾದವನ್ನು ಸೃಷ್ಟಿಸಿವೆ. ಕೆಲವು ಬೆಂಬಲಿಗರು ಟಿಪ್ಪು ಜಯಂತಿಯನ್ನು ಆಚರಿಸಬೇಕು ಎಂದು ಪಟ್ಟುಹಿಡಿದಿದ್ದರೇ ಬಹಳಷ್ಟು ಜನ ಟಿಪ್ಪು ಜಯಂತಿ ಆಚರಿಸುವುದು ಬೇಡ ಎಂದು ಒತ್ತಾಯ ಮಾಡಿದ್ದರು. ಇನ್ನು ಪಕ್ಷಗಳ ಸರದಿ ತೆಗೆದುಕೊಂಡರೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಟಿಪ್ಪು ಜಯಂತಿಯ ಪರ ನಿಂತಿದ್ದರೇ, ಬಿಜೆಪಿ ಪಕ್ಷವು ಟಿಪ್ಪು ಜಯಂತಿಗೆ ವಿರುದ್ಧವಾಗಿ ನಿಂತಿತ್ತು. ಈ ಎಲ್ಲಾ ವಾದ-ವಿವಾದಗಳ ವಿವಾದಗಳ ನಡುವೆ ಟಿಪ್ಪು ಜಯಂತಿ ಯನ್ನು ಬಿಜೆಪಿ ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ನಿಷೇಧ ಮಾಡಿದೆ. ಹೀಗಿರುವಾಗ ಇದೀಗ ಮತ್ತೊಮ್ಮೆ ಟಿಪ್ಪು ಸುಲ್ತಾನ್ ಸುದ್ದಿಯಲ್ಲಿದ್ದಾರೆ.

ಇದೀಗ ಟಿಪ್ಪು ಸುಲ್ತಾನ್ ಯಾಕೇ ಸುದ್ದಿಯಲ್ಲಿ ಇದ್ದಾರೆ ಎಂದು ಯೋಚನೆ ಮಾಡುತ್ತಿರುವಿರಾ ?? ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ನಿಮಗೆಲ್ಲರಿಗೂ ಹಾಗೇ ಚಾಮರಾಜಪೇಟೆಯ ಶಾಸಕ ಜಮೀರ್ ಅಹಮ್ಮದ್ ಅವರು ಮೊದಲಿನಿಂದಲೂ ಟಿಪ್ಪು ಸುಲ್ತಾನ್ ರವರ ಪರವಾಗಿ ಧ್ವನಿಯೆತ್ತಿದ್ದಾರೆ. ಕಳೆದ ಸಿದ್ದರಾಮಯ್ಯನವರ ಸರ್ಕಾರ ಇದ್ದಾಗಲೂ ಬಹಳ ಜೋರಾಗಿ ಟಿಪ್ಪು ಸುಲ್ತಾನ್ ಜಯಂತೋತ್ಸವ ಆಚರಣೆ ಮಾಡಿದ್ದರು, ಎಷ್ಟರಮಟ್ಟಿಗೆ ಅಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಿಪ್ಪು ಸುಲ್ತಾನ್ ವೇಷ ತೊಡಿಸಿದ್ದರು. ಇದೀಗ ಇದೇ ರೀತಿಯ ವಿಚಾರವಾಗಿ ಜಮೀರ್ ಅಹಮದ್ ರವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ತಮ್ಮ ಸ್ವಕ್ಷೇತ್ರ ಚಾಮರಾಜಪೇಟೆ ಕ್ಷೇತ್ರದಳ್ಳಿ ಟಿಪ್ಪು ನಗರದಲ್ಲಿ ನಿನ್ನೆ ರಾತ್ರಿ ನಡೆದ ಮುಸಲ್ಮಾನರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಶಾಸಕ ಜಮೀರ್ ಅಹ್ಮದ್ ರವರು ಟಿಪ್ಪು ಸುಲ್ತಾನ್ ರವರ ವೇಷ ಭೂಷಣದಲ್ಲಿ ಬಂದಿದ್ದರು. ಥೇಟ್ ಟಿಪ್ಪು ಸುಲ್ತಾನನಂತೆ ಪೇಟ ಮಾತ್ರವಲ್ಲದೆ ಟಿಪ್ಪು ಸುಲ್ತಾನ ಮಾದರಿಯ ಉಡುಗೆಯನ್ನೂ ಧರಿಸಿ, ಎರಡೂ ಕೈಯಲ್ಲಿ ಕತ್ತಿ ಹಿಡಿದು ಕುದುರೆ ಏರಿ ಬರುವ ಮೂಲಕ ಎಲ್ಲರನ್ನು ಅಚ್ಚರಿಗೆ ತಳ್ಳಿದರು. ಸಾವಿರಾರು ಜನ ಸೇರಿದ್ದ ಕಾರ್ಯಕ್ರಮಕ್ಕೆ ಶಾಸಕ ಜಮೀರ್ ಅಹ್ಮದ್ ರವರು ಭಿನ್ನ ಉಡುಗೆಯಲ್ಲಿ ಬಂದಿದ್ದು ಭಾರಿ ಗಮನ ಸೆಳೆದಿದೆ. ಜಮೀರ್ ಅಹ್ಮದ್ ರವರು ತೊಟ್ಟಿದ್ದ ಜುಬ್ಬಾದಂತಹಾ ಅಂಗಿಯನ್ನು ಪೂರ್ಣವಾಗಿ ಮಲ್ಲಿಗೆಯ ಹೂವುಗಳಿಂದ ಅಲಂಕೃತಗೊಳಿಸಲಾಗಿತ್ತು. ಇದೀಗ ಇದೇ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡಿದೆ.

ಇವರ ವೇಷಭೂಷಣ ಇದೀಗ ಇಂಟರ್ನೆಟ್ ನಲ್ಲಿ ಭಾರಿ ಸದ್ದು ಮಾಡಿದ್ದು, ಒಂದೆಡೆ ಟಿಪ್ಪು ಸುಲ್ತಾನ್ ಬೆಂಬಲಿಗರು ಜಮೀರ್ ಅಹಮ್ಮದ್ ಅವರ ಈ ನಡೆಗೆ ಜೈ ಎನ್ನುತ್ತಿದ್ದರೇ, ಮತ್ತೊಂದೆಡೆ ಬಿಜೆಪಿ ಪಕ್ಷದ ಬೆಂಬಲಿಗರು ಟಿಪ್ಪು ಸುಲ್ತಾನ್ ಖಡ್ಗ ಖರೀದಿಸಿ ವಿಜಯ್ ಮಲ್ಯ ತನ್ನ ಸಾಮ್ರಾಜ್ಯವನ್ನು ತಾನೇ ಅಂತ್ಯ ಮಾಡಿಕೊಂಡರು, ಇನ್ನೂ ತನ್ನ ಅವಧಿಯಲ್ಲಿ ಇಡೀ ರಾಜ್ಯದ ವಿರೋಧದ ನಡುವೆ ಟಿಪ್ಪು ಸುಲ್ತಾನ್ ರವರ ಜಯಂತಿಯನ್ನು ಆಚರಿಸಿ, ಸರ್ಕಾರದಿಂದ ಕೋಟಿ ಕೋಟಿ ಹಣ ನೀಡಿದ್ದ ಸಿದ್ದರಾಮಯ್ಯ ರವರ ಕಥೆ ಮತ್ತೊಮ್ಮೆ ಹೇಳುವ ಅವಶ್ಯಕತೆ ಇಲ್ಲ. ನೆಕ್ಸ್ಟ್ ನೀವೇ, ನೀವು ಮಾಡಿರುವ ಹಗರಣಗಳು ಹೊರಬಂದಾಗ ನಿಮಗೆ ತಿಳಿಯಲಿದೆ. ಕೇವಲ ಕೆಲವೇ ದಿನ ಕಾಯಿರಿ ಎಂದು ಎಚ್ಚರಿಕೆ ನೀಡಿದ್ದಾರೆ.