15 ವರ್ಷಗಳ ದಾಖಲೆ ಮುರಿಯಲಿದ್ದಾರೆ ರಶೀದ್ ಖಾನ್ . !! ಏನು ಗೊತ್ತಾ?? ತಿಳಿಯಲು ಒಮ್ಮೆ ಓದಿ

ಅತಿ ಕಡಿಮೆ ವಯಸ್ಸಿನಲ್ಲಿಯೇ ಕ್ರಿಕೆಟ್ ಜಗತ್ತಿನಲ್ಲಿ ಉತ್ತಮ ಹೆಸರು ಮಾಡಿರುವ ರಶೀದ್ ಖಾನ್ ಅವರು ಇದೀಗ ಮತ್ತೊಂದು ಹದಿನೈದು ವರ್ಷಗಳ ಹಿಂದಿನ ದಾಖಲೆಯನ್ನು ಮುರಿಯಲು ಇದ್ದಾರೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಆಫ್ಘಾನಿಸ್ತಾನ ತಂಡವು ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಪಂದ್ಯವನ್ನಾಡಲು ಬಾಂಗ್ಲಾದೇಶಕ್ಕೆ ತೆರಳಲಿದೆ. ಈ ಸಮಯದಲ್ಲಿ ಆಫ್ಘಾನಿಸ್ತಾನ ತಂಡವನ್ನು ಬಾಂಗ್ಲಾದೇಶದ ವಿರುದ್ಧ ನಡೆಯುವ ಏಕೈಕ ಟೆಸ್ಟ್ ಪಂದ್ಯದಲ್ಲಿ ನಾಯಕನಾಗಿ ಮುನ್ನೆಡಸಲಿರುವ ರಶೀದ್ ಖಾನ್ ರವರು, ಬಹಳ ಅಪರೂಪದ ದಾಖಲೆಯನ್ನು  ತಮ್ಮ ಹೆಸರಿಗೆ ಬರೆಸಿ ಕೊಳ್ಳಲಿದ್ದಾರೆ. ಕಳೆದ 15 ವರ್ಷಗಳಿಂದ ಕಳೆದ ಜಿಂಬಾಬ್ವೆಯ ಮಾಜಿ ನಾಯಕ ಟಟೆಂಡಾ ತೈಬು ಹೆಸರಿನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಟೆಸ್ಟ್ ತಂಡವನ್ನು ಮುನ್ನೆಡಸಿದ ನಾಯಕ ಎಂಬ ದಾಖಲೆ ಇದೆ.

ಇದೇ ವಿಶ್ವ ದಾಖಲೆಯನ್ನು ಮುರಿಯಲಿರುವ ಆಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ರವರು, ಮುಂದಿನ ಬಾಂಗ್ಲಾ ದೇಶದ ವಿರುದ್ದದ ಪಂದ್ಯದಲ್ಲಿ ಆಫ್ಗಾನಿಸ್ತಾನ ತಂಡವನ್ನು ಮುನ್ನೆಡಿಸಲೂ ಕಣಕ್ಕೆ ಇಳಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ ಅತೀ ಕಿರಿಯ ನಾಯಕನಾಗಿ ರಶೀದ್ ಖಾನ್ ಇಲ್ಲಿ ದಾಖಲೆ ನಿರ್ಮಿಸಲಿದ್ದಾರೆ. ಇನ್ನು ಉಳಿದಂತೆ ಎರಡನೇ ಸ್ಥಾನದಲ್ಲಿ ಕಿರಿಯ ನಾಯಕನಾಗಿ ಭಾರತದ ಮಾಜಿ ಕ್ರಿಕೆಟ್ ಆಟಗಾರ ಮನ್ಸೂರ್ ಅಲಿ ಖಾನ್ ಪಟೌಡಿ ಇದ್ದಾರೆ. ಮೂರನೇ ಸ್ಥಾನದಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ವಾಕರ್ ಯೂನಿಸ್ ಇದ್ದಾರೆ. ಈ ಸುದ್ದಿ ನಿಮಗೆ ಇಷ್ಟವಾಗಿದ್ದಲ್ಲಿ ಸ್ನೇಹಿತರ ಜೊತೆ ಶೇರ್ ಮಾಡಿ ಹಂಚಿಕೊಳ್ಳಿ, ಮತ್ತಷ್ಟು ಸುದ್ದಿಗಳಿಗಾಗಿ ಬಲಕ್ಕೆ Swipe ಮಾಡಿ  ಹಾಗೂ ಕರುನಾಡ ವಾಣಿ ಪೇಜ್ ಅನ್ನು ಲೈಕ್ ಮಾಡಿ.

Facebook Comments

Post Author: Ravi Yadav