ಮೋದಿ ಪ್ಲಾನ್ ನೋಡಿ ದಂಗಾದ ರಷ್ಯಾ.. ಸರಿ ಎಂದು ಭಾರತೀಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಪುಟಿನ್

ಮೋದಿ ಪ್ಲಾನ್ ನೋಡಿ ದಂಗಾದ ರಷ್ಯಾ.. ಸರಿ ಎಂದು ಭಾರತೀಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಪುಟಿನ್

ನರೇಂದ್ರ ಮೋದಿ ರವರ ರಾಜ ತಾಂತ್ರಿಕತೆಯ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ಇವರ ರಾಜ ತಾಂತ್ರಿಕತೆಗೆ ವಿಶ್ವದ ಎಲ್ಲಾ ರಾಷ್ಟ್ರಗಳು (ನೆರೆ ಹೊರೆಯ ಎರಡು ಕುತಂತ್ರ ರಾಷ್ಟ್ರಗಳನ್ನು ಹೊರತು ಪಡಿಸಿ) ಈಗಾಗಲೇ ತಲೆ ಬಾಗಿವೆ. ಭಾರತ ದೇಶವನ್ನು ತನ್ನ ಆಪ್ತಮಿತ್ರನಂತೆ ಉಳಿದ ರಾಷ್ರಗಳು ನೋಡಿ ಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ಅದರಲ್ಲಿಯೂ ಇಸ್ರೇಲ್ ದೇಶ ಹಾಗೂ ರಷ್ಯಾ ದೇಶಗಳು ಭಾರತ ಹಾಗೂ ನರೇಂದ್ರ ಮೋದಿ ರವರ ಮೇಲೆ ಅಪಾರವಾದ ಗೌರವವನ್ನು ಹೊಂದಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಈ ಎರಡು ದೇಶಗಳ ಜೊತೆ ಭಾರತ ದೇಶ ಸಂಬಂಧವನ್ನು ಗಟ್ಟಿ ಮಾಡಿಕೊಂಡಿದೆ. ಎಷ್ಟರ ಮಟ್ಟಿಗೆ ಎಂದರೆ ನರೇಂದ್ರ ಮೋದಿ ರವರನ್ನು ಬಿಡಿ ಸಾಮಾನ್ಯ ಭಾರತೀಯರು ಈ ದೇಶಗಳಿಗೆ ಭೇಟಿ ನೀಡಿದಾಗ ಸಿಗುವ ಆಥಿತ್ಯವೇ ಬದಲಾಗಿ ಹೋಗಿದೆ.

ಹೀಗಿರುವಾಗ ನರೇಂದ್ರ ಮೋದಿ ರವರು ಈದೀಗ ಮತ್ತೊಮ್ಮೆ, ರಷ್ಯಾ ದೇಶಕ್ಕೆ ಪ್ರವಾಸ ಮಾಡಿದ್ದಾರೆ. ನರೇಂದ್ರ ಮೋದಿ ರವರು ಭೇಟಿ ನೀಡಿದಾಗ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಬೇಕು ಎಂದು ಬಲಾಢ್ಯ ದೇಶವಾದ ರಷ್ಯಾ ಕಾದು ಕುಳಿತಿದ್ದ ವಿಷಯ ನಿಮಗೆಲ್ಲರಿಗೂ ಈಗಾಗಲೇ ತಿಳಿದೇ ಇದೆ, ಈ ವಿಷಯದ ಕುರಿತು ನಾವು ಸಹ ಸುದ್ದಿಯನ್ನು ಪ್ರಸಾರ ಮಾಡಿದ್ದೆವು. ಆದರೆ ರಷ್ಯಾ ದೇಶದ ಯೋಜನೆಯೆ ಜೊತೆಗೆ ನರೇಂದ್ರ ಮೋದಿ ರವರ ಯೋಜನೆ ಕಂಡ ರಷ್ಯಾ ದೇಶ ಒಂದು ಕ್ಷಣ ದಂಗಾಗಿದೆ. ದಂಗಾದರೂ ನರೇಂದ್ರ ಮೋದಿ ರವರ ಬೇಡಿಕೆಯನ್ನು ರಷ್ಯಾ ದೇಶ ತಿರಸ್ಕಾರ ಮಾಡಿಲ್ಲ. ಕೊನೆಗೂ ನರೇಂದ್ರ ಮೋದಿ ರವರ ಯೋಜನೆಗೆ ಜೈ ಎಂದು ವಿಶ್ವವನ್ನೇ ಬೆರಗುಗೊಳಿಸಿದೆ. ಸತ್ಯ ಹೇಳಬೇಕು ಎಂದರೇ ಈ ದಿನ ಅಂತಾರಾಷ್ತ್ರೀಯ ಮಟ್ಟದಲ್ಲಿ ತನ್ನ ತಾಕತ್ತು ಏನು ಎಂಬುದನ್ನು ಭಾರತ ಸಾರಿ ಹೇಳಿದೆ ಹಾಗೂ ಇಡೀ ಭಾರತೀಯರಿಗೆ ಇದೊಂದು ಐತಿಹಾಸಿಕ ದಿನವಾಗಲಿದೆ.

ಅಷ್ಟಕ್ಕೂ ನಡೆದ್ದದ್ದೇನು ಗೊತ್ತಾ? ಸಂಪೂರ್ಣ ವಿವರಿಗಳಿಗಾಗಿ ಒಮ್ಮೆ ಓದಿ.

ರಷ್ಯಾ ದೇಶಕ್ಕೆ ನರೇಂದ್ರ ಮೋದಿ ಭೇಟಿ ನೀಡಿದ ತಕ್ಷಣ ಹಲವಾರು ಮಹತ್ವದ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿಸಲು ರಷ್ಯಾ ದೇಶ ಕಾದು ಕುಳಿತಿತ್ತು. ಇದರ ಜೊತೆ ನರೇಂದ್ರ ಮೋದಿ ರವರು ಹೇಗಿದ್ದರೂ ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಕೆಲವು ಶಸ್ತ್ರಾಸ್ತ್ರ ಗಳನ್ನು ಭಾರತದಲ್ಲಿ ತಯಾರು ಮಾಡಿ ಎನ್ನುತ್ತಾರೆ, ಅದಕ್ಕೆ ಸರಿ ಎಂದು ತಯಾರು ಮಾಡಿದರೇ ಆಯಿತು ಎಂದು ಎಂದಿನಂತೆ ರಷ್ಯಾ ದೇಶ ಊಹೆ ಮಾಡಿತ್ತು. ಆದರೆ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿರುವ ನರೇಂದ್ರ ಮೋದಿ ರವರು, ಕೇವಲ ಭಾರತ ದೇಶಕ್ಕೆ ರಫ್ತು ಮಾಡುವ ಶಸ್ತ್ರಾಸ್ತ್ರ ಗಳನ್ನು ಭಾರತದಲ್ಲಿ ಉತ್ಪಾದನೆ ಮಾಡಿದರೇ ಸಾಕಾಗುವುದಿಲ್ಲ ಬದಲಾಗಿ, ಭಾರತ ದೇಶ ಮುಂದೆ ಉಳಿದ ಹಲವಾರು ದೇಶಗಳಿಗೆ ಶಸ್ತ್ರಾಸ್ತ್ರ ಗಳನ್ನು ರಫ್ತ್ತು ಮಾಡುವ ಉದ್ದೇಶ ಹೊಂದಿದೆ. ಆದ ಕಾರಣ ರಷ್ಯಾ ದೇಶ ನಮ್ಮೊಂದಿಗೆ ಜೊತೆಗೂಡಿ, ತನ್ನ ಟೆಕ್ನಾಲಾಜಿಯನ್ನು ಹಂಚಿಕೊಂಡು, ಭಾರತದಲ್ಲಿ ತಯಾರು ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ಇದಕ್ಕೆ ಮೊದಲು ಒಪ್ಪದ ರಷ್ಯಾ ದೇಶವನ್ನು ನರೇಂದ್ರ ಮೋದಿ ರವರು ಭಾರತದಲ್ಲಿ ಕಾರ್ಮಿಕರು ಏರಳವಾಗಿ ಸಿಗುತ್ತಾರೆ ಹಾಗೂ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಆದ ಕಾರಣದಿಂದ ಇಬ್ಬರು ಒಟ್ಟಾಗಿ ಶಸ್ತ್ರಾಸ್ತ್ರ ಗಳನ್ನು ತಯಾರು ಮಾಡಿ ರಫ್ತ್ತು ಮಾಡಬಹುದು ಎಂದು ಹೇಳಿ ರಷ್ಯಾ ದೇಶದ ಮನವೊಲಿಸಿದ್ದಾರೆ. ಈ ವಿಷಯವನ್ನು ಖಚಿತಪಡಿಸಿರುವ ರಷ್ಯಾ ದೇಶ ಇದರಿಂದ ದೇಶಗಳ ನಡುವಿನ ಸಂಬಂಧಗಳಿಗೆ ಹೊಸ ಶಕ್ತಿ ಮತ್ತು ಹೊಸ ಪ್ರಚೋದನೆ ಸಿಕ್ಕಿದೆ. ರಷ್ಯಾ-ಭಾರತೀಯ ಸಹಭಾಗಿತ್ವವು ಮಿಲಿಟರಿ ಮತ್ತು ತಾಂತ್ರಿಕ ಸಹಕಾರದ ಚೌಕಟ್ಟನ್ನು ಮೀರಿದೆ ಎಂದು ಹೇಳಿದೆ. ಇಂದು, ತಂತ್ರಜ್ಞಾನಗಳನ್ನು ವರ್ಗಾಯಿಸಿದರೆ, ಮಿಲಿಟರಿ ಉಪಕರಣಗಳ ಉತ್ಪಾದನೆಯು ಭಾರತದಲ್ಲಿ ಅಗ್ಗವಾಗಬಹುದು. ಮತ್ತು ನಾವು ಈ ಶಸ್ತ್ರಾಸ್ತ್ರಗಳನ್ನು ಮೂರನೇ ದೇಶಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಪೂರೈಸಲು ಸಾಧ್ಯವಾಗುತ್ತದೆ. ಭಾರತ ಮತ್ತು ರಷ್ಯಾ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಹೇಳಿದೆ.