ಮತ್ತೊಮ್ಮೆ ನರೇಂದ್ರ ಮೋದಿರವರ ಕೈಹಿಡಿದ ಕಚ್ಚಾತೈಲ- ಅಷ್ಟಕ್ಕೂ ನಡೆದಿದ್ದೇನು ಗೊತ್ತಾ? ತಿಳಿಯಲು ಒಮ್ಮೆ ಓದಿ

ಮತ್ತೊಮ್ಮೆ ನರೇಂದ್ರ ಮೋದಿರವರ ಕೈಹಿಡಿದ ಕಚ್ಚಾತೈಲ- ಅಷ್ಟಕ್ಕೂ ನಡೆದಿದ್ದೇನು ಗೊತ್ತಾ? ತಿಳಿಯಲು ಒಮ್ಮೆ ಓದಿ

ಇದೀಗ ಇಡೀ ವಿಶ್ವದಲ್ಲಿ ಕೆಲವು ರಾಷ್ಟ್ರಗಳು ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಂದ ಆರ್ಥಿಕ ಹಿಂಜರಿಕೆಯ ಭೀತಿ ಎದುರಾಗಿದೆ. ಅದರಲ್ಲಿಯೂ ಅಮೆರಿಕ ದೇಶದ ಅಧ್ಯಕ್ಷರಾದ ಟ್ರಂಪ್ ರವರು ತೆಗೆದುಕೊಳ್ಳುತ್ತಿರುವ ಕೆಲವು ದ್ವಂದ ನೀತಿಗಳಿಂದ ವಿಶ್ವದ ಬಲಾಢ್ಯ ರಾಷ್ಟ್ರಗಳು ಆರ್ಥಿಕ ಹಿಂಜರಿಕೆಯ ಭೀತಿಯನ್ನು ಎದುರಿಸುತ್ತಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ಹಾಗೂ ಚೀನಾ ದೇಶಗಳ ನಡುವೆ ನಡೆಯುತ್ತಿರುವ ವಾಣಿಜ್ಯ ಸಮರ ಭಾರತ ದೇಶದ ಆರ್ಥಿಕತೆಯ ಮೇಲೂ ಭಾರಿ ಪ್ರಭಾವವನ್ನು ಬೀರಿದೆ. ವಿಶ್ವದ ಇನ್ನಿತರ ಬಲಾಢ್ಯ ರಾಷ್ಟ್ರಗಳಾದ ಬ್ರಿಟನ್, ಜರ್ಮನಿ ಹಾಗೂ ಚೀನಾ ದೇಶಗಳು ಹಲವಾರು ವರ್ಷಗಳಿಂದ ಕಾಣದಂತಹ ಆರ್ಥಿಕ ಹಿಂಜರಿಕೆಯ ಭೀತಿಯನ್ನು ಎದುರಿಸುತ್ತಿವೆ.

ಭಾರತ ದೇಶವು ಆರ್ಥಿಕ ಹಿಂಜರಿಕೆಯನ್ನು ಎದುರಿಸುತ್ತಿದ್ದರೂ ಸಹ ಉಳಿದ ಬಲಾಢ್ಯ ರಾಷ್ಟ್ರಗಳಿಗೆ ಹೋಲಿಸಿಕೊಂಡರೆ, ಭಾರತ ದೇಶದ ಆರ್ಥಿಕತೆ ಪರವಾಗಿಲ್ಲ. ವಿಶ್ವದ ಬಲಾಢ್ಯ ರಾಷ್ಟ್ರಗಳಾದ, ಬ್ರಿಟನ್: -0.2 % (2010 ರಿಂದ ದಾಖಲಾದ ಕಡಿಮೆ ದರ), ಜರ್ಮನಿ: -0.1 % (2015 ರಿಂದ ದಾಖಲಾದ ಕಡಿಮೆ ದರ), ಹಾಗೂ ಚೀನಾ ದೇಶ 6.2 % (1992 ರಿಂದ ದಾಖಲಾದ ಕಡಿಮೆ ದರ) ಹೀಗೆ ಹಲವಾರು ರಾಷ್ಟ್ರಗಳು ಹಿಂದೆ ಬಿದ್ದಿವೆ. ಇದಕೆಲ್ಲ ಕಾರಣ ಟ್ರಂಪ್ ಹಾಗೂ ಚೀನಾ ದೇಶದ ನಡುವೆ ನಡೆಯುತ್ತಿರುವ ವಾಣಿಜ್ಯ ಸಮರ. ಅಷ್ಟೇ ಅಲ್ಲದೆ ಇರಾನ್ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ಸರ್ವಾಧಿಕಾರ ಮೆರೆಯಲು ಅಮೇರಿಕ ಅಧ್ಯಕ್ಷ ಟ್ರಂಪ್ ರವರ ದ್ವಂದ ನೀತಿಗಳು.

ಈ ದಿನವೂ ಕೂಡ ಇದು ಮುಂದುವರೆದಿದ್ದು ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಈ ಸಮರ ಭಾರಿ ಪ್ರಭಾವ ಬೀರಿದೆ, ಇಂದು ಸಹ 600 ಕ್ಕೂ ಹೆಚ್ಚು ಸೆನ್ಸೆಕ್ಸ್ ಅಂಕಗಳನ್ನು ಕಳೆದುಕೊಂಡಿದೆ. ಇಷ್ಟೆಲ್ಲ ವಿದ್ಯಮಾನಗಳ ನಡುವೆ ಪಾಕಿಸ್ತಾನ ಯುದ್ಧ ಬೆದರಿಕೆ ಹಾಕುತ್ತಿರುವ ಕಾರಣ ವಿದೇಶಿ ಬಂಡವಾಳ ಕಳೆದ ಕೆಲವು ದಿನಗಳಿಂದ ನಿಂತು ಹೋಗಿದೆ. ಇಷ್ಟೆಲ್ಲ ವಿದ್ಯಮಾನಗಳಿಂದ ಭಾರತದ ಆರ್ಥಿಕತೆ ಕುಸಿಯುತ್ತಿರುವ ಸಂದರ್ಭದಲ್ಲಿ ಸಾಮಾನ್ಯವೆಂಬಂತೆ ನರೇಂದ್ರ ಮೋದಿ ರವರ ಮೇಲೆ ಟೀಕಾ ಬಾಣಗಳು ಹೆಚ್ಚಾಗಿವೆ. ವಿರೋಧ ಪಕ್ಷದ ಪ್ರತಿಯೊಬ್ಬರು ಇಂದು ಆರ್ಥಿಕ ತಜ್ಞರಾಗಿದ್ದಾರೆ. ಕಾರ್ಯಕರ್ತರಂತೂ ಆರ್ಥಿಕತೆಯ ಬಗ್ಗೆ ಉದ್ದುದ್ದ ಭಾಷಣಗಳನ್ನು ಮಾಡುತ್ತಿದ್ದಾರೆ. ನಾವು ಇಲ್ಲಿ ನರೇಂದ್ರ ಮೋದಿ ರವರನ್ನು ಬೆಂಬಲಿಸುತ್ತಿಲ್ಲ ಬದಲಾಗಿ, ಇರುವ ಸತ್ಯವನ್ನು ಹೇಳುತ್ತಿದ್ದೇವೆ.ಈ ಆರ್ಥಿಕ ಹಿಂಜರಿಗೂ ನರೇಂದ್ರ ಮೋದಿ ರವರ ನೋಟ್ ಬ್ಯಾನ್ ಅಥವಾ ಜಿ ಸ್ ಟಿ ತೆರಿಗೆ ಪದ್ದತಿಗೂ ಯಾವುದೇ ಸಂಬಂಧವಿಲ್ಲ. ಇಷ್ಟೆಲ್ಲ ವಿದ್ಯಮಾನಗಳ ನಡುವೆ  ಇದೀಗ ಕೊನೆಗೂ ನರೇಂದ್ರ ಮೋದಿ ರವರಿಗೆ ಕೊಂಚ ರಿಲೀಫ್ ಸಿಕ್ಕಿದೆ.

ಚೀನಾ ದೇಶ ಹಾಗೂ ಅಮೆರಿಕದ ನಂತರ ವಿಶ್ವದಲ್ಲೇ ಅತಿ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ದೇಶ ಭಾರತ. ಹೀಗಾಗಿ, ದೇಶದ ಆರ್ಥಿಕತೆ ಮೇಲೆ ತೈಲ ದರ ಭಾರೀ ಪ್ರಭಾವ ಬೀರುತ್ತದೆ. ಇಂತಹ ಸಂದಿಗ್ನ ಸಮಯದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಭಾರತ ಆಮದು ಮಾಡಿಕೊಳ್ಳುತ್ತಿರುವ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.2 ರಷ್ಟು ಇಳಿಕೆಯಾಗಿದ್ದು ಪ್ರತಿ ಬ್ಯಾರೆಲ್ ತೈಲದ ಬೆಲೆ 58.75 ಡಾಲರ್( ಸುಮಾರು 4,200 ರೂ.) ಗೆ ಇಳಿಕೆಯಾಗಿದೆ. ಇದರಿಂದ ದೇಶದಿಂದ ವಿದೇಶಕ್ಕೆ ಹರಿದು ಹೋಗುವ ಹಣ ಕಡಿಮೆಯಾಗುತ್ತದೆ, ಅಷ್ಟೇ ಅಲ್ಲದೆ ನಿರ್ಮಲ ಸೀತಾರಾಮನ್ ರವರು ಮಂಡಿಸಿದ ಮಿನಿ ಬಜೆಟ್ ನಿಂದ ಮತ್ತಷ್ಟು ಆರ್ಥಿಕತೆ ಸುಧಾರಣೆಯಾಗುತ್ತಿದ್ದು ಟ್ರಂಪ್ ರವರು ನಿರ್ಮಲ ಸೀತಾರಾಮನ್ ರವರ ನಡೆಯನ್ನು ಹಾಡಿ ಹೊಗಳಿದ್ದಾರೆ. ನೀವು ಸಹ ವಿದೇಶಿ ಸರಕುಗಳೂ, ಚಿನ್ನ, ವಜ್ರ ಹಾಗೂ ಪ್ರಮುಖವಾಗಿ ಚೀನಾ ದೇಶದಿಂದ ಆಮದು ಮಾಡಿಕೊಳ್ಳುವ ಎಲೆಕ್ಟ್ರಾನಿಕ್ಸ್ ವಸ್ತುಗಳು, ಪಟಾಕಿಗಳನ್ನೂ ಸಾಧ್ಯವಾದಷ್ಟು ಕಡಿಮೆ ಖರೀದಿಸಿ. ಇದರಿಂದ ಭಾರತದ ಆರ್ಥಿಕತೆ ಮತ್ತಷ್ಟು ಮೇಲೆ ಏರುತ್ತದೆ.