ಕಿಚ್ಚನ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್- ಪೈಲ್ವಾನ್ ನಂತರ ಮತ್ತೊಂದು ಸಿಹಿ ಸುದ್ದಿ

ಇದೀಗ ಎಲ್ಲ ಚಿತ್ರರಂಗಗಳಲ್ಲೂ ಮಲ್ಟಿ ಸ್ಟಾರರ್ ಚಿತ್ರಗಳು ಹೆಚ್ಚಾಗಿವೆ. ಇತ್ತೀಚಿಗೆ ಕನ್ನಡ ಚಿತ್ರ ರಂಗದಲ್ಲೂ ಈ ರೀತಿಯ ಪ್ರಯತ್ನಗಳು ನಡೆದಿವೆ, ಬಹುತೇಕ ಸಿನಿಮಾಗಳು ಯಶಸ್ಸು ಕೂಡ ಕಂಡಿವೆ. ಇನ್ನು ಇಷ್ಟೇ ಇಲ್ಲದೆ ಇತ್ತೀಚಿಗೆ ಗ್ಯಾಂಗ್ ಸ್ಟಾರ್ ಕಥಾ ನಾಯಕನ ಸಿನಿಮಾಗಳು ಸಹ ಹೆಚ್ಚಾಗಿದ್ದು ಬಹುತೇಕ ಅಭಿಮಾನಿಗಳು ತಮ್ಮ ನಾಯಕ ಗ್ಯಾಂಗ್ ಸ್ಟಾರ್ ಕಥಾ ಜೀವನದ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದ ತಕ್ಷಣ ಇನ್ನಿಲ್ಲ ಉಮ್ಮಸ್ಸಿನಿಂದ ಚಿತ್ರಕ್ಕಾಗಿ ಕಾದು ಕುಳಿತಿರುತ್ತಾರೆ.ಇದೇ ಆಧಾರದಲ್ಲಿ ಬಿಡುಗಡೆಯಾದ ಉಗ್ರಂ, KGF ಚಿತ್ರಗಳು ಕನ್ನಡ ಇತಿಹಾಸದಲ್ಲಿ ಉಳಿದಿವೆ, ಆದರೆ ಇದೀಗ ಮತ್ತೊಂದು ಚಿತ್ರ ಇದೇ ಸಾಲಿಗೆ ಸೇರಲು ನಿಮ್ಮ ಮುಂದೆ ಬರುತ್ತಿದೆ. ಇದರಲ್ಲಿ ಮತ್ತಷ್ಟು ವಿಶೇಷವೇನೆಂದರೆ ಅಭಿನಯ ಚಕ್ರವರ್ತಿ ಸುದೀಪ್ ರವರು ಈ ಸಿನಿಮಾ ದಲ್ಲಿ ನಟಿಸುತ್ತಿದ್ದಾರೆ. ಹೌದು, ಇದೀಗ ಸುದೀಪ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಇಷ್ಟು ದಿವಸ ಎಲ್ಲ ರೀತಿಯ ಪಾತ್ರಗಳಲ್ಲಿ ನಟನೆ ಮಾಡಿದ್ದ ಸುದೀಪ್ ರವರು ಅಭಿಮಾನಿಗಳ ಆಸೆಯನ್ನು ಈಡೇರಿಸಲು ಮುಂದಾಗಿದ್ದಾರೆ.

ಇನ್ನು ಕೆಲವೇ ಕೆಲವು ದಿನಗಳಲ್ಲಿ ಸುದೀಪ್ ರವರಿಗಾಗಿಯೇ, ಜೋಗಿ ಖ್ಯಾತಿಯ ಪ್ರೇಮ್ ರವರು ಹೊಸ ಚಿತ್ರ ಕಥೆ ರೆಡಿ ಮಾಡಿಕೊಂಡಿದ್ದು, ಇದರಲ್ಲಿ ಸುದೀಪ್ ರವರು ಗ್ಯಾಂಗ್ ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಪೈಲ್ವಾನ್ ಚಿತ್ರದ ಬಿಡುಗಡೆಯ ನಂತರ ಈ ಸುದ್ದಿ ಅಫೀಷಿಯಲ್ ಆಗಿ ಅನೌನ್ಸ್ ಮಾಡಲಿದ್ದು, ಇದಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ಸಿನಿಮಾದಲ್ಲಿ ಸುದೀಪ್ ರವರ ಜೊತೆ ನಟಿಸುವ ಮತ್ತೊಬ್ಬ ನಟನ ಹೆಸರು ಇನ್ನು ಬಹಿರಂಗಗೊಂಡಿಲ್ಲ. ಇನ್ನು ಈ ಚಿತ್ರವನ್ನು ಪ್ರೇಮ್ ರವರು ನಿರ್ದೇಶನದ ಜೊತೆ ನಿರ್ಮಾಣ ಕೂಡ ಮಾಡಲಿದ್ದಾರೆ ಎಂಬ ಸುದ್ದಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಒಟ್ಟಿನಲ್ಲಿ ಪೈಲ್ವಾನ್ ಗುಂಗಿನಲ್ಲಿ ಮುಳುಗಿರುವ ಅಭಿಮಾನಿಗಳಿಗೆ ಚಿತ್ರ ನೋಡಿದ ಕೆಲವೇ ಕೆಲವು ದಿನಗಳಲ್ಲಿ ಮತ್ತೊಂದು ಸಿಹಿ ಸುದ್ದಿ ನೀಡಲು ಸಿದ್ದ ಮಾಡಿಕೊಂಡಿದ್ದಾರೆ ಸುದೀಪ್ ಹಾಗೂ ಪ್ರೇಮ್. ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಈ ವಿಷಯ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರ ಜೊತೆ ಶೇರ್ ಮಾಡಿ ಹಂಚಿಕೊಳ್ಳಿ, ಮತ್ತಷ್ಟು ಸುದ್ದಿಗಳಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡಿ ಫಾಲೋ ಮಾಡಿ.

Facebook Comments

Post Author: Ravi Yadav