ಹಳೆ ಮೈಸೂರು ಭಾಗವನ್ನು ಕೇಸರಿಮಯ ಮಾಡಲು ಚಾಣಕ್ಯ ಅಮಿತ್ ರಣತಂತ್ರ ! ನಡುಗಿದ ಜೆಡಿಎಸ್- ಕಾಂಗ್ರೆಸ್ ಪಕ್ಷಗಳು

ಹಳೆ ಮೈಸೂರು ಭಾಗವನ್ನು ಕೇಸರಿಮಯ ಮಾಡಲು ಚಾಣಕ್ಯ ಅಮಿತ್ ರಣತಂತ್ರ ! ನಡುಗಿದ ಜೆಡಿಎಸ್- ಕಾಂಗ್ರೆಸ್ ಪಕ್ಷಗಳು

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಈಗಾಗಲೇ ಬಹುತೇಕ ಕರ್ನಾಟಕ ರಾಜ್ಯ ಕೇಸರಿಮಯ ವಾಗಿದೆ. ಕರ್ನಾಟಕ ರಾಜ್ಯದಲ್ಲಿ ಇರುವ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ 25 ಸ್ಥಾನಗಳನ್ನು ಗೆದ್ದು ಬಿಜೆಪಿ ಪಕ್ಷವು ಬೀಗಿದೆ. ಅದರಲ್ಲಿಯೂ ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡಿನ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಪಕ್ಷವು ನರೇಂದ್ರ ಮೋದಿರವರ ಅಲೆಯಲ್ಲಿ ಬಹಳ ಸುಲಭವಾಗಿ ಗೆದ್ದು ಬೀಗಿದೆ. ಹೀಗಿರುವಾಗ ಬಿಜೆಪಿ ಪಕ್ಷಕ್ಕೆ ಕರ್ನಾಟಕದಲ್ಲಿ ಕಾಣ ಸಿಗುತ್ತಿರುವುದು ಕೇವಲ ಒಂದೇ ಒಂದು ಸವಾಲು, ಅದುವೇ ಹಳೆಯ ಮೈಸೂರು ಭಾಗ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಪ್ರಾಬಲ್ಯವಿರುವ ಈ ಭಾಗದಲ್ಲಿ ಬಿಜೆಪಿ ಪಕ್ಷವು ಕೊಂಚಮಟ್ಟಿಗೆ ಈ ಬಾರಿ ಮತಗಳನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದೆ.

ಅದರಲ್ಲಿಯೂ ಹಾಸನ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಅಲೆ ಅಷ್ಟಾಗಿ ಕಾಣುತ್ತಿಲ್ಲ. ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡಿದರೂ ಬಿಜೆಪಿ ಪಕ್ಷ ಗೆಲುವು ಕಾಣುವಲ್ಲಿ ವಿಫಲವಾಗಿದೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡಿದ ಮತದಾರ ಪ್ರಭುಗಳು ಪ್ರತಾಪ್ ಸಿಂಹ ರವರನ್ನು ಮೈಸೂರು ಕ್ಷೇತ್ರದಿಂದ ಗೆಲ್ಲಿಸಿದ್ದರೂ ಕೂಡ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಕಡೆ ಒಲವು ತೋರುತ್ತಿದ್ದಾರೆ.ಈ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಬಿಜೆಪಿ ಪಕ್ಷದ ಅಲೆ ಈ ಭಾಗದಲ್ಲಿ ಅಷ್ಟಾಗಿ ವರ್ಕೌಟ್ ಆಗುತ್ತಿಲ್ಲ. ಆದ ಕಾರಣ ಇದೀಗ ಹಳೆಯ ಮೈಸೂರು ಭಾಗವನ್ನು ಕೇಸರಿಮಯ ಮಾಡಲು ಬಿಜೆಪಿ ಪಕ್ಷದ ಚಾಣಕ್ಯ ಎಂದೇ ಖ್ಯಾತಿ ಪಡೆದುಕೊಂಡಿರುವ ಅಮಿತ್ ಶಾ ರವರು ಹೊಸ ಯೋಜನೆಯನ್ನು ರೂಪಿಸಿದ್ದಾರೆ.

ಕಳೆದ ಬಾರಿ ಮತಗಳನ್ನು ಪಡೆಯಲು ವಿಫಲವಾದ ಪ್ರದೇಶಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿ, ಹೊಸ ಇತಿಹಾಸ ನಿರ್ಮಾಣ ಮಾಡಲು ಆದೇಶ ನೀಡಿದ್ದಾರೆ ಅದುವೇ, ಯುವ ಶಕ್ತಿಯನ್ನು ಬಿಜೆಪಿ ಪಕ್ಷದ ಕಡೆ ಆಕರ್ಷಣೆ ಮಾಡಿ, ಬಿಜೆಪಿ ಪಕ್ಷಕ್ಕೆ ಸದಸ್ಯರನ್ನಾಗಿ ಮಾಡಲು ಸೂಚನೆ ನೀಡಿದ್ದಾರೆ. ಈ ಮೂಲಕ ಯುವಕರನ್ನು ಪಕ್ಷದ ಒಳಗೆ ಸೇರಿಸಿಕೊಂಡು ರಾಜಕೀಯ ನಾಯಕರನ್ನಾಗಿ ಮಾಡಿ, ಭಾರತ ಮಾತೆಯ ಸೇವೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ಬಿಜೆಪಿ ಪಕ್ಷದ ನಾಯಕರ ಗುರಿಯಾಗಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೆ ಇಡೀ ಕರ್ನಾಟಕದಲ್ಲಿ ಯಾರು ಅಧಿಕಾರದ ಹಿಂದೆ ಅಥವಾ ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳುತ್ತಾರೋ ಅಂತವರನ್ನು ಕಿತ್ತೊಗೆಯಲು ಆದೇಶ ನೀಡಿದ್ದಾರೆ. ಈಗಾಗಲೇ ರಾಜ್ಯದಲ್ಲಿ 27 ಲಕ್ಷ ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಈ ಸಂಖ್ಯೆಯನ್ನು 50 ಲಕ್ಷಕ್ಕೆ ಏರಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ.

ಈ ಮೂಲಕ ಬಿಜೆಪಿ ಅಲೆ ಕಡಿಮೆ ಇರುವ ಸ್ಥಳಗಳಲ್ಲಿ ಬಿಜೆಪಿ ಪಕ್ಷವನ್ನು ನಿರ್ಮಾಣ ಮಾಡಲು ಹೊಸ ಕಾರ್ಯ ಸೂಚಿಯನ್ನು ಸಿದ್ದಪಡಿಸಿದ್ದಾರೆ. ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಮತ್ತಷ್ಟು ವಿಧಾನಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಕರ್ನಾಟಕ ರಾಜ್ಯವನ್ನು ಮತ್ತಷ್ಟು ಕೇಸರಿಮಯ ಮಾಡಲು ಅಮಿತ್ ಶಾ ರವರು ಭಾರಿ ರಣತಂತ್ರ ದೊಂದಿಗೆ ಸಿದ್ಧರಾಗಿದ್ದಾರೆ ಎಂಬುದು ಇದೀಗ ಖಚಿತವಾಗಿದೆ. ಒಂದು ವೇಳೆ ಬೇರೆ ಪ್ರದೇಶಗಳಲ್ಲಿ ಸಫಲವಾಗಿರುವಂತೆ ಈ ಪ್ರದೇಶದಲ್ಲಿಯೂ ಈ ಯೋಜನೆ ಸಫಲವಾದರೆ, ಕರ್ನಾಟಕ ಮತ್ತಷ್ಟು ಕೇಸರಿ ಮಾಯವಾಗುತ್ತದೆ, ಅಷ್ಟೇ ಅಲ್ಲದೆ ಈಗಾಗಲೇ ಮುಳುಗುವ ಹಂತದಲ್ಲಿ ಇರುವ ಕಾಂಗ್ರೆಸ್ ಪಕ್ಷ ಮತ್ತಷ್ಟು ಹೀನಾಯ ಪರಿಸ್ಥಿತಿ ತಲುಪುವುದಷ್ಟೇ ಅಲ್ಲದೆ, ಇದೇ ಪ್ರದೇಶಗಳನ್ನು ನಂಬಿಕೊಂಡು ಇರುವ ಜೆಡಿಎಸ್ ಪಕ್ಷ ಬಹುತೇಕ ಅಂತ್ಯ ಕಾಣಲಿದೆ.