ಭರ್ಜರಿ ಸಿಹಿ ಸುದ್ದಿಯ ಮೂಲಕ ಅಭಿವೃದ್ಧಿಯ ಸಚಿವ ಕಾರ್ಯ ಆರಂಭಿಸಿದ ಶ್ರೀ ರಾಮುಲು

ಭರ್ಜರಿ ಸಿಹಿ ಸುದ್ದಿಯ ಮೂಲಕ ಅಭಿವೃದ್ಧಿಯ ಸಚಿವ ಕಾರ್ಯ ಆರಂಭಿಸಿದ ಶ್ರೀ ರಾಮುಲು

ಇದೀಗ ಬಿಜೆಪಿ ಪಕ್ಷದಲ್ಲಿ ಕಾಣಿಸಿಕೊಂಡಿದ್ದ ಬಂಡಾಯ ಸಂಪೂರ್ಣವಾಗಿ ಶಮನವಾಗಿದೆ. ಸಚಿವ ಸಂಪುಟದ ಬೆನ್ನಲ್ಲೇ ಶಿಸ್ತಿನ ಪಕ್ಷ ಎಂದು ಖ್ಯಾತಿ ಪಡೆದುಕೊಂಡಿದ್ದ ಬಿಜೆಪಿ ಪಕ್ಷದಲ್ಲಿ ಬಾರಿ ಭಿನ್ನಮತದ ಮಾತುಗಳು ಕೇಳಿ ಬಂದಿದ್ದವು. ಆದರೆ ಕೂಡಲೇ ಎಚ್ಚೆತ್ತುಕೊಂಡ ಬಿಜೆಪಿ ಪಕ್ಷದ ಹೈಕಮಾಂಡ್ ಭಿನ್ನಮತ ಶಮನ ಮಾಡಲು ತೆಗೆದುಕೊಂಡ ನಿರ್ಧಾರಗಳಿಂದ ಕೊನೆಗೂ ಎಲ್ಲಾ ನಾಯಕರು ಇದೀಗ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದಾರೆ. ಮೊದಲಿನಿಂದಲೂ ಉಪ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಶ್ರೀ ರಾಮುಲು ಅವರು ಹೈಕಮಾಂಡ್ ನಿರ್ಧಾರವನ್ನು ಪ್ರಶ್ನೆ ಮಾಡುವುದಿಲ್ಲ ಎಂದ ಬಳಿಕ ಇದೀಗ ತಮಗೆ ಈ ಹಿಂದೆ ನೀಡಿದ್ದ ಆರೋಗ್ಯ ಇಲಾಖೆಯಲ್ಲಿ ಕೆಲಸ ಆರಂಭಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಕೆಲವೇ ದಿನಗಳಲ್ಲಿ ಭರ್ಜರಿ ಸಿಹಿ ಸುದ್ದಿಯ‌ ಮೂಲಕ ಚಾಲನೆ ನೀಡಿದ್ದಾರೆ.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಆರೋಗ್ಯ ಇಲಾಖೆ ಸಚಿವರಾಗಿ ಕೆಲಸ ನಿರ್ವಹಣೆ ಮಾಡಿದ್ದ ಶ್ರೀ ರಾಮುಲು ಅವರು 108 ಆಂಬುಲೆನ್ಸ್ ಸೇವೆಯನ್ನು ಆರಂಭಿಸಿ ಜನರ ಮನಗೆದ್ದಿದ್ದರು. ಇದೀಗ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಬಾಣಂತಿಯರ ಆಯ್ಕೆದಾರರ ವಾಸ್ತವ್ಯಕ್ಕೆ ತೊಂದರೆಯಾಗುತ್ತದೆ ಎಂಬುದನ್ನು ಹಲವು ಆಸ್ಪತ್ರೆಗಳೀಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ ನಂತರ ಕೂಡಲೇ ಪರಿಹಾರ ಒದಗಿಸಲು ಮುಂದಾಗಿರುವ ಶ್ರೀರಾಮುಲು ರವರು ಇನ್ನು ಮುಂದೆ ಜಿಲ್ಲಾ ಆಸ್ಪತ್ರೆಗಳಲ್ಲಿ ಬಾಣಂತಿಯರ ಆರೈಕೆದಾರರಿಗೆ ಪ್ರತ್ಯೇಕವಾಗಿ ವಾಸ್ತವ್ಯಕ್ಕೆ ತಂಗುದಾಣ ನಿರ್ಮಾಣ ಹಾಗೂ ಬಾಣಂತಿಯರಿಗೆ ಆಸ್ಪತ್ರೆಯಲ್ಲಿ ವಿಶೇಷ ರೀತಿಯ ಬೆಡ್ ಒದಗಿಸಲು ಸೂಚನೆ ನೀಡಲಾಗಿದ್ದು, ಆರೈಕೆದಾರರು ಆಸ್ಪತ್ರೆಯ ಆವರಣದಲ್ಲಿ ನೆಲದ ಮೇಲೆ ಮಲಗಿಕೊಳ್ಳುವ ಪರಿಸ್ಥಿತಿ ಇರುವ ಕಾರಣ ಪ್ರತ್ಯೇಕ ತಂಗುದಾಣ ನಿರ್ಮಾಣ ಮಾಡಿ, ಶೌಚಾಲಯ, ಸ್ನಾನಗೃಹ ಹಾಗೂ ಕ್ಯಾಂಟೀನ್ ವ್ಯವಸ್ಥೆ ಮಾಡಲು ಆದೇಶ ಹೊರಡಿಸಿದ್ದಾರೆ.