ನಾಲಿಗೆ ಹರಿಬಿಟ್ಟ ತ್ರಿಷಾ, ಗೊತ್ತಿಲ್ಲದೇ ಬೇಜವಾಬ್ದಾರಿ ಹೇಳಿಕೆ ನೀಡಿ ದೇಶ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದು ಹೇಗೆ ಗೊತ್ತಾ?

ನಮ್ಮ ದೇಶದಲ್ಲಿ ಏನಾಗಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ, ಪಕ್ಕದಲ್ಲಿ ಎರಡು ಕುತಂತ್ರಿ ರಾಷ್ಟ್ರಗಳು ಸದಾ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದ್ದರೂ ಸಹ ಭಾರತೀಯ ಜನರು ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ನಮ್ಮ ಹೆಮ್ಮೆಯ ಭಾರತೀಯ ಸೇನೆ. ಆದರೆ ವಿಪರ್ಯಾಸವೆಂದರೆ ಅದ್ಯಕ್ಕೋ ತಿಳಿದಿಲ್ಲ ಇಲ್ಲಿನ ಕೆಲವು ಜನರು ಕಷ್ಟದ ಸಮಯದಲ್ಲಿ ಸೇನೆಯ ಪರವಾಗಿ ನಿಲ್ಲುವ ಬದಲು, ಸೇನೆಯ ವಿರುದ್ಧ ಧ್ವನಿ ಎತ್ತುತ್ತಾರೆ. ಸೇನೆಯ ಮೇಲೆ ಕಲ್ಲು ತೂರಿದರೆ ತಪ್ಪಿಲ್ಲ, ಅದೇ ಸೇನೆ ಕಲ್ಲು ತೂರಿದವನ್ನು ಬಂಧಿಸಿದರೆ ತಪ್ಪು, ಸೇನೆಯ ಮೇಲೆ ಅಲ್ಲಿನ ಜನರು ದಬ್ಬಾಳಿಕೆ ನಡೆಸಿದರೆ ತಪ್ಪಿಲ್ಲ, ಅದೇ ಒಂದು ವೇಳೆ ಸೇನೆಯು ತಕ್ಕ ತಿರುಗೇಟು ನೀಡಿದರೆ ಅದು ಮಾನವ ಹಕ್ಕುಗಳ ಉಲ್ಲಂಘನೆ .ಇದೀಗ ಈ ವಿಷಯ ಯಾಕೆ ಎನ್ನುತ್ತೀರಾ? ದಕ್ಷಿಣ ಭಾರತದ ನಟಿಯೊಬ್ಬರ ವರಸೆ ನೋಡಿ ನಮಗೆ ಈ ಮಾತುಗಳು ನೆನಪಿಗೆ ಬಂದವು. ಇದೀಗ ತ್ರಿಷಾ ರವರು ಏನು ತಿಳಿಯಲೇ ದೇಶದ ಮುಂದಿನ ಭವಿಷ್ಯದ ಕುರಿತು ಕಾಶ್ಮೀರದ ಕುರಿತು ಮೋದಿ ಸರ್ಕಾರ ತೆಗೆದುಕೊಂಡ ನಿರ್ಧಾರದ ವಿರುದ್ಧ ಮಾತನಾಡಲು ಹೋಗಿ ದೇಶ ಭಕ್ತರನ್ನು ಕೆಣಕಿದ್ದಾರೆ.

ಇದೀಗ ತಮಗೆ ಬೇಡದ ವಿಚಾರದಲ್ಲಿ ಮೂಗು ತೂರಿಸಿರುವ ನಟಿ ತ್ರಿಷಾ ರವರು, ಬಹುಶಃ ತಮ್ಮ ಪಾಪ್ಯುಲಾರಿಟಿ ಕಡಿಮೆಯಾದ ಕಾರಣ, ಮತ್ತೊಮ್ಮೆ ಸದ್ದು ಮಾಡಲು ಈ ರೀತಿಯ ಹೇಳಿಕೆ ನೀಡಿದ್ದಾರೆ ಎನಿಸುತ್ತಿದೆ. ಹೌದು, ಇದೀಗ ಜಮ್ಮು ಹಾಗೂ ಕಾಶ್ಮೀರದ ವಿಷಯದಲ್ಲಿ ಮಾತನಾಡಿರುವ ನಟಿ ತ್ರಿಷಾ ರವರು ಕಾಶ್ಮೀರದಲ್ಲಿ ಮಕ್ಕಳ ಪರಿಸ್ಥಿತಿ ಬಹಳ ಕಳವಳಕಾರಿಯಾಗಿದೆ , ಶಾಲೆಗಳನ್ನು ಮುಚ್ಚಲಾಗಿದೆ. ಇದು ಮಕ್ಕಳ ಮೇಲೆ ನಡೆಯುತ್ತಿರುವ ಹಿಂಸೆ, ಮಕ್ಕಳ ಮೇಲಿನ ಹಕ್ಕುಗಳ ಯಾವುದೇ ರೀತಿಯ ಉಲ್ಲಂಘನೆಯು ಮಕ್ಕಳ ವಿರುದ್ಧದ ದೌರ್ಜನ್ಯವಾಗಿದೆ’ ಎಂದಿದ್ದಾರೆ. ಇಷ್ಟು ದಿವಸ ಸೇನೆಯ ಮೇಲೆ ನಡೆಯುತ್ತಿದ್ದ ಕಲ್ಲು ತೂರಾಟದ ಬಗ್ಗೆ ಧ್ವನಿ ಎತ್ತದೆ, ಕಾಶ್ಮೀರದ ನೈಜ ಪರಿಸ್ಥಿತಿಯ ಬಗ್ಗೆ ತಿಳಿಯದೆ ಈ ರೀತಿ ಮಾತನಾಡಬಾರದು ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲ ಸ್ವಾಮಿ, ಪ್ರವಾಸಕ್ಕೆ ವಿದೇಶಗಳಿಗೆ ತೆರಳುವ ಇವರಿಗೆ ಕಾಶ್ಮೀರದ ಕುರಿತು ಏನು ಗೊತ್ತು? ಪ್ರವಾಸಕ್ಕೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಖನೆ ಮಾಡಿದ್ದರೆ ಇವರ ಮಾತುಗಳನ್ನು  ನಾವು ಒಪ್ಪಿಕೊಳ್ಳುತ್ತಿದ್ದೆವು ಎಂಬುದು ನಮ್ಮ ವಾದ.

Facebook Comments

Post Author: RAVI