ಐತಿಹಾಸಿಕ ದಿನ,ಭಾರತಕ್ಕೆ ಬರಲಿದೆ ಲಕ್ಷಾಂತರ ಕೋಟಿ ಹಣ- ಕೊಟ್ಟ ಮಾತು ಉಳಿಸಿಕೊಂಡ ಮೋದಿ

ಐತಿಹಾಸಿಕ ದಿನ,ಭಾರತಕ್ಕೆ ಬರಲಿದೆ ಲಕ್ಷಾಂತರ ಕೋಟಿ ಹಣ- ಕೊಟ್ಟ ಮಾತು ಉಳಿಸಿಕೊಂಡ ಮೋದಿ

ನರೇಂದ್ರ ಮೋದಿ ರವರ ರಾಜತಾಂತ್ರಿಕತೆಯ ಬಲದ ಬಗ್ಗೆ ನಿಮಗೆ ತಿಳಿದೇ ಇದೆ. ನೀವು ಯಾರ ಅಭಿಮಾನಿಯೆಯಾಗಿರಿ ವಿಶ್ವ ಮಟ್ಟದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಭಾರತದ ವರ್ಚಸ್ಸು ಜೊತೆಗೆ ಗತ್ತು ಸಹ ಬಹಳ ಹೆಚ್ಚಿದೆ ಎಂಬುವುದರಲ್ಲಿ ಅನುಮಾನವೇ ಇಲ್ಲ. ನರೇಂದ್ರ ಮೋದಿ ರವರು ಒಂದು ನಿರ್ಧಾರ ತೆಗೆದುಕೊಂಡರೆ ವಿಶ್ವದ ಬಲಿಷ್ಠ ರಾಷ್ಟ್ರಗಳು ಬೆಂಬಲಕ್ಕೆ ನಿಲ್ಲುತ್ತವೆ. ತಮ್ಮ ರಾಷ್ಟ್ರದ ನಿಯಮಗಳನ್ನು ಪಕ್ಕಕ್ಕೆ ಇಟ್ಟು ಭಾರತಕ್ಕಾಗಿ ತನ್ನ ನಿಯಮಗಳನ್ನು ಬದಲಾಯಿಸುತ್ತೇವೆ ಇದೀಗ ಇದೇ ರೀತಿಯ ಘಟನೆ ನಡೆದಿದ್ದು ಭಾರತದಲ್ಲಿ ಕೆಲವು ಅಲ್ಲೋಲ ಕಲ್ಲೋಲ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ, ಯಾಕೆಂದರೆ ದೊಡ್ಡ ದೊಡ್ಡ ಕುಳಗಳು ಇದೀಗ ಕಂಬಿ ಎನಿಸುವ ಸಮಯ ದೂರವಿಲ್ಲ.ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತಾ? ಸಂಪೂರ್ಣ ವಿವರಿಗಳಿಗಾಗಿ ಕೆಳಗಡೆ ಓದಿ

ಭಾರತ ಆಗರ್ಭ ಶ್ರೀಮಂತ ರಾಷ್ಟ್ರ ಎನ್ನುವುದರಲ್ಲಿ ಅನುಮಾನವಿಲ್ಲ, ಆದರೆ ಭಾರತದ ಸಂಪತ್ತು ಕೆಲವರ ಕೈಯಲ್ಲಿ ಮಾತ್ರ ಇದೆ ಎನ್ನುವುದು ಅಷ್ಟೇ ಸತ್ಯ, ಆದರೆ ಎಲ್ಲರಿಗೂ ಮತ್ತೊಂದು ವಿಷಯ ತಿಳಿದಿದೆ, ಅದುವೇ ಕಪ್ಪು ಹಣ. ಹೌದು ಭಾರತದ ಅದೆಷ್ಟೋ ಲಕ್ಷ ಕೋಟಿ ಹಣ ವಿದೇಶಗಳಲ್ಲಿ ಕಪ್ಪು ಹಣದ ರೂಪದಲ್ಲಿ ಕೊಳೆಯುತ್ತಿದೆ. ಈಗಾಗಲೇ ದೇಶದಲ್ಲಿ ಕೊಳೆಯುತ್ತಿದ್ದ ಕಪ್ಪು ಹಣವನ್ನು ನರೇದ್ರ ಮೋದಿ ರವರು ನೋಟ್ ಬ್ಯಾನ್ ನ ಮೂಲಕ ಹೊರತಂದಿದ್ದಾರೆ, ಇದೀಗ ವಿದೇಶಗಳಲ್ಲಿ ಕೊಳೆಯುತ್ತಿರುವ ಕಪ್ಪು ಹಣದ ಸರದಿ. ಕಳೆದ 2014 ರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪ್ರಣಾಳಿಕೆ ಬಾರಿ ಹೆಚ್ಚು ಸದ್ದು ಮಾಡಿದ್ದ ವಿಷಯವೆಂದರೆ ಇದೇ ಕಪ್ಪು ಹಣ ವಾಪಸ್ಸು ತರುವಿಕೆಯ ಭರವಸೆ. ಇದು ಸದ್ದು ಮಾಡಲು ಮತ್ತಷ್ಟು ಕಾರಣವೆಂದರೆ ಕೆಲವು ವಿರೋಧ ಪಕ್ಷಗಳು ಈ ಕಪ್ಪು ಹಣವನ್ನು ಮೋದಿ ಪ್ರಥಿಯೊಬ್ಬರಿಗೂ 15 ಲಕ್ಷಗಳನ್ನಾಗಿ ಹಂಚುತ್ತಾರೆ ಎಂಬ ಸುದ್ದಿ, ಇದೀಗ ಇದರ ವಿಚಾರ ಬೇಡ.

ಇದೇ ಕಪ್ಪು ಹಣವನ್ನು ವಿದೇಶಗಳಿಂದ ವಾಪಸ್ಸು ತರುತ್ತೇನೆ ಎಂದು ನರೇಂದ್ರ ಮೋದಿ ಭರವಸೆ ನೀಡಿದ್ದರು, ಈ ಕುರಿತು ಸ್ವಿಟ್ಜರ್ಲ್ಯಾಂಡ್  ದೇಶದ ಜೊತೆ ಹಲವಾರು ಬಾರಿ ಮಾತುಕತೆಗಳು ನಡೆದು ವಿಫಲವಾದ ನಂತರ ಕೊನೆಗೂ ಸ್ವಿಟ್ಜರ್ಲ್ಯಾಂಡ್ ದೇಶ ಕಪ್ಪು ಹಣದ ಸಮೇತ ಖಾತೆದಾರದ ಮಾಹಿತಿ ನೀಡಲು ಒಪ್ಪಿಗೆ ನೀಡಿತ್ತು ಹಾಗೂ ಇದಕ್ಕಾಗಿ ಕೊಂಚ ಸಮಯಾವಕಾಶ ಕೇಳಿತ್ತು, ಯಾಕೆಂದರೆ ಸ್ವಿಟ್ಜರ್ಲ್ಯಾಂಡ್ ದೇಶದ ನಿಯಮದ ಪ್ರಕಾರ ನೀಡಲು ಸಾಧ್ಯವಿಲ್ಲ, ಭಾರತಕ್ಕಾಗಿ ನಿಯಮಗಳನ್ನು ಬದಲಾವೆಣೆ ಮಾಡಿ ಅಂಗೀಕಾರ ಪಡೆದುಕೊಂಡು ನೀಡುವುದಾಗಿ ಕೋರಿತ್ತು. ಕೊನೆಗೂ ಆ ದಿನ ಬಂದೇ ಬಿಟ್ಟಿದೆ, ಇಂದು ಸ್ವಿಸ್ ಬ್ಯಾಂಕ್ ಭಾರತೀಯರ ಕಪ್ಪು ಹಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದೆ.

ಆದರೆ ಈ ಒಪ್ಪಂದ ನಡೆದ ಮೇಲೆ ಕೂಡಲೇ ಎಚ್ಚೆತ್ತುಕೊಂಡ ಖಾತೆದಾರರು ಕಪ್ಪು ಹಣವನ್ನು ವಾಪಸ್ಸು ತೆಗೆದುಕೊಂಡ ಸುದ್ದಿಗಳು ಕೇಳಿಬಂದಿದ್ದವು, ಲಕ್ಷಾಂತರ ಕೋಟಿ ಹಿಂಪಡೆಯಲಾಗಿದೆ ಎಂಬ ಸುದ್ದಿ ಸಹ ಕೇಳಿಬಂದಿದ್ದ ಕಾರಣ ಭಾರತ ಆತಂಕಕ್ಕೆ ಒಳಗಾಗಿತ್ತು, ಆದರೆ ಸ್ವಿಟ್ಜರ್ಲ್ಯಾಂಡ್ ಸರ್ಕಾರವು ಈ ಒಪ್ಪಂದದ ಮುನ್ನ ಸ್ವಿಸ್ ಬ್ಯಾಂಕ್ ಖಾತೆಯ ಸಂಪೂರ್ಣ ವರದಿಗಳನ್ನು ನೀಡಲು ಮುಂದಾಗಿದೆ. ಆದ ಕಾರಣದಿಂದ ಇದೀಗ ಕಪ್ಪು ಹಣದ ಕುಳಗಳು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ, ಇನ್ನು ಮುಂದೆ ಪ್ರತಿಯೊಂದು ಟ್ರಾನ್ಸಾಕ್ಷನ್ ಗಳು ಸಹ ನೇರವಾಗಿ ಭಾರತೀಯ ಸರ್ವರ್ ಗಳಿಗೆ ರವಾನೆಯಾಗಲಿವೆ. ಈ ವಿಷಯ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರ ಜೊತೆ ಶೇರ್ ಮಾಡಿ ಹಂಚಿಕೊಳ್ಳಿ, ಮತ್ತಷ್ಟು ಸುದ್ದಿಗಳಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡಿ ಫಾಲೋ ಮಾಡಿ.