ಬರ ನಿರ್ವಹಣೆ – ಮೋದಿ ಅಖಾಡಕ್ಕೆ ವಿರೋಧ ಪಕ್ಷಗಳ ಬಾಯಿಗೆ ಬೀಗ ! ಎಂದು, ಯಾವಾಗ ಗೊತ್ತಾ?

ಬರ ನಿರ್ವಹಣೆ – ಮೋದಿ ಅಖಾಡಕ್ಕೆ ವಿರೋಧ ಪಕ್ಷಗಳ ಬಾಯಿಗೆ ಬೀಗ ! ಎಂದು, ಯಾವಾಗ ಗೊತ್ತಾ?

ನರೇಂದ್ರ ಮೋದಿ ರವರು ಎರಡನೇ ಬಾರಿಗೆ ಅಧಿಕಾರಕ್ಕೆ ಏರಿದ ಬಳಿಕ ಮತ್ತಷ್ಟು ಬ್ಯುಸಿ ಆಗಿದ್ದಾರೆ. ವಿಶ್ವವೇ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಸಮಯದಲ್ಲಿ ಭಾರತದ ಆರ್ಥಿಕತೆಯನ್ನು ಮೇಲೆತ್ತಲು ಇನ್ನಿಲ್ಲದ ಪ್ರಯತ್ನ ನಡೆಸಿ ಅದೇ ಸಮಯದಲ್ಲಿ ಭಾರತಕ್ಕೆ ಅಂಟಿರುವ ವಿಶೇಷ ಸ್ಥಾನಮಾನದಂತಹ ಪಿಡುಗುಗಳನ್ನು ತೆಗೆದು ಹಾಕಿ, ಭ್ರಷ್ಟಾಚಾರವನ್ನು ಕಿತ್ತೊಗೆಯಲು ದಿನಕ್ಕೊಂದರಂತೆ ಹೊಸ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು, ಮತ್ತೊಂದೆಡೆ ಪಾಕಿಸ್ತಾನ ದಿಂದ ಯುದ್ಧದ ಬೆದರಿಕೆ ಬರುತ್ತಿದ್ದರೂ ಸೇನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಹಲವಾರು ಆಮದು ರಕ್ಷಣಾ ಒಪ್ಪಂದ ಸೇರಿದಂತೆ ಮೇಕ್ ಇನ್ ಇಂಡಿಯಾ ಯೋಜನೆಗೆ ಬಲ ತರಲು ಧಣಿವರಿಯಾದ ನಾಯಕನಂತೆ ದುಡಿಯುತ್ತಿದ್ದಾರೆ. ಹೀಗಿರುವಾಗ ಇದೇ ಸಮಯದಲ್ಲಿ ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಪ್ರವಾಹ ಉಂಟಾಗಿ ಸಾವಿರಾರು ಕೋಟಿ ನಷ್ಟವಾಗಿದೆ, ಜನ ಜೀವನ ಅಸ್ತವ್ಯಸ್ತ ಗೊಂಡಿದೆ.

ಈ ಎಲ್ಲ ಕಾರಣಗಳಿಂದ ನರೇಂದ್ರ ಮೋದಿ ರವರು ಕರ್ನಾಟಕ ರಾಜ್ಯಕ್ಕೆ ಪ್ರವಾಹ ಪರಿಸ್ಥಿತಿ ಅವಲೋಖನೆ ಮಾಡಲು ಬರಲು ಸಾಧ್ಯವಾಗಿರಲಿಲ್ಲ. ಇದರಿಂದ ನರೇಂದ್ರ ಮೋದಿ ರವರ ಮೇಲೆ ಪ್ರತಿ ಪಕ್ಷದ ನಾಯಕರು ಟೀಕೆಗಳ ಬಾಣಗಳನ್ನು ಸುರಿಮಳೆಗೆಯ್ದಿದ್ದರು. ಈ ಎಲ್ಲ ಟೀಕೆಗಳಿಗೂ ಎಂದಿದಂತೆ ನರೇಂದ್ರ ಮೋದಿ ರವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ, ಇದೀಗ ತಮ್ಮ ಕಾರ್ಯದ ಮೂಲಕವೇ ಉತ್ತರ ನೀಡಲು ಮುಂದಾಗಿ, ಇದೇ ತಿಂಗಳ 7 ನೇ ತಾರೀಕು ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಿ ನೆರೆಯ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅವಲೋಖನ ಮಾಡಲಿದ್ದಾರೆ. ಇದರ ಕುರಿತು ಮಾತನಾಡಿರುವ ಬಿ ಸ್ ಯೆಡಿಯೂರಪ್ಪ ನವರು, ಸದ್ಯದಲ್ಲೇ ರಾಜ್ಯಕ್ಕೆ ನರೇಂದ್ರ ಮೋದಿ ರವರು ಬಾರಿ ಪರಿಹಾರದ ಮೂಲಕ ಸಿಹಿ ಸುದ್ದಿ ನೀಡಲಿದ್ದಾರೆ ಹಾಗೂ ಪ್ರತಿಯೊಬ್ಬ ಸದಸ್ಯರಿಗೂ ಬದುಕು ಕಟ್ಟಿಕೊಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.