ಯುದ್ದಕ್ಕೂ ಮುನ್ನ ಮಂಡಿಯೂರಿ ಸೋಲೋಪ್ಪಿಕೊಂಡ ಪಾಕಿಸ್ತಾನ- ಇದು ನವ ಭಾರತದ ತಾಕತ್ತು

ಯುದ್ದಕ್ಕೂ ಮುನ್ನ ಮಂಡಿಯೂರಿ ಸೋಲೋಪ್ಪಿಕೊಂಡ ಪಾಕಿಸ್ತಾನ- ಇದು ನವ ಭಾರತದ ತಾಕತ್ತು

ಕಳೆದ ಕೆಲವು ದಿನಗಳಿಂದ ಕೈಲಾಗದ ಒಂದು ರಾಷ್ಟ್ರವು ಭಾರತದಂತಹ ಒಂದು ಬಲಿಷ್ಠ ರಾಷ್ಟ್ರಕ್ಕೆ ಯುದ್ಧದ ಬೆದರಿಕೆ ಹಾಕುತಿತ್ತು. ಇದರಿಂದ ಭಾರತದ ಅರ್ಥವ್ಯವಸ್ಥೆಗೆ ಬಾರಿ ಪ್ರಭಾವ ಬೀರಿತ್ತು, ಯಾಕೆಂದರೆ ಯುದ್ಧ ನಡೆಯಬಹುದಾದ ಸೂಚನೆಗಳು ಸಿಕ್ಕ ತಕ್ಷಣ ವಿದೇಶಿ ಬಂಡವಾಳವನ್ನು ಹೂಡಿಕೆದಾರರು ನಿಲ್ಲಿಸುತ್ತಾರೆ. ಜಾಗತಿಕ ಮಟ್ಟದಲ್ಲಿ ಅಮೇರಿಕ ಹಾಗೂ ಚೀನಾ ಸೇರಿದಂತೆ ಇರಾನ್ ಮತ್ತಿತರ ರಾಷ್ಟ್ರಗಳ ನಡುವೆ ವಾಣಿಜ್ಯ ಸಮರ ನಡೆಯುತ್ತಿರುವ ಕಾರಣ ಈಗಾಗಲೇ ಭಾರತದ ಹಲವಾರು ವಾಣಿಜ್ಯ ಭಾಗಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಕಡಿಮೆಯಾಗಿದ್ದಾರ ಪರಿಣಾಮ ಆರ್ಥಿಕ ವ್ಯವಸ್ಥೆ ಹದೆಗೆಟ್ಟಿತ್ತು, ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಪಾಕಿಸ್ತಾನವು ತನ್ನ ಆರ್ಥಿಕತೆ ಬಲಪಡಿಸುವುದನ್ನು ಮರೆತು ಭಾರತದ ಆರ್ಥಿಕತೆಗೆ ಮತ್ತಷ್ಟು  ಪೆಟ್ಟು ನೀಡಲು ಯುದ್ಧ ಬೆದರಿಕೆ ಹಾಕುತ್ತ ಗಡಿಯನ್ನು ಉದ್ವಿಗ್ನಗೊಳಿಸಿ ಸೇನೆ ಜಮಾವಣೆ ಮಾಡುತಿತ್ತು.

ಹೇಗಿದ್ದರೂ ಸೋಲುತ್ತೇವೆ ಎಂದು ತಿಳಿದಿದ್ದರೂ ಸಹ ಅಣು ಬಾಂಬ್ ನ ಮೂಲಕ ಭಾರತದ ಮೇಲೆ ಎರಗಿ ಸಾಧ್ಯವಾದಷ್ಟು ನಾಶ ಮಾಡಿ, ಭಾರತವನ್ನು ಕತ್ತಲಲ್ಲಿ ಮುಳುಗಿಸೋಣ ಎಂಬ ಯೋಜನೆಯಿಂದ ಇನ್ನಿಲ್ಲದ ಪ್ರಯತ್ನ ಮಾಡುತಿತ್ತು. ಇಷ್ಟಕೆಲ್ಲ ಕಾರಣ ಭಾರತದ ಕಿರೀಟ ಕಾಶ್ಮೀರದ ಕುರಿತು ಕೇಂದ್ರ ತೆಗೆದುಕೊಂಡ ನಿರ್ಧಾರ. ಇದರಿಂದ ಕೆರಳಿದ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಕಾಶ್ಮೀರದಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂಬುದನ್ನು ಸಾಬೀತುಪಡಿಸಿ, ಕಾಶ್ಮೀರದಲ್ಲಿ ಜನಾಭಿಪ್ರಾಯ ನಡೆಸಿ ದೇಶ ವಿಂಗಡಣೆ ನಡೆಸಿ ಎಂಬ ಒತ್ತಾಯದೊಂದಿಗೆ ವಿಶ್ವದ ಹಲವಾರು ರಾಷ್ಟ್ರಗಳ ಕದ ತಟ್ಟಿದ್ದರು. ಆದರೆ ನಿಮಗೆ ಗೊತ್ತಲ್ಲ, ಭಾರತವನ್ನು ಮುನ್ನಡೆಸುತ್ತಿರುವುದು ಮೋದಿ ಎಂಬ ರಾಷ್ಟ್ರ ಭಕ್ತ. ಯಾವುದಕ್ಕೂ ಜಗ್ಗದೆ ನೇರವಾಗಿ ಎಲ್ಲ ರಾಷ್ಟ್ರಗಳಿಗೂ ತಿರುಗೇಟು ನೀಡಿದ ನರೇಂದ್ರ ಮೋದಿ ರವರು ಅಮೇರಿಕ ದೇಶದ ಅಧ್ಯಕ್ಷ ಎಂಬುದನ್ನು ನೋಡದೆ ನೇರವಾಗಿ ಯಾರು ಈ ವಿಚಾರದಲ್ಲಿ ಮೂಗು ತೂರಿಸಬಾರದು ಎಂದು ಖಡಕ್ ಸಂದೇಶ ನೀಡಿದ್ದರು.

ಈ ಎಲ್ಲ ವಿದ್ಯಮಾನಗಳಿಂದ ಮತ್ತಷ್ಟು ಕೆರಳಿ ಕಂಗಾಲಿಗಿದ್ದ ಪಾಕಿಸ್ತಾನ ತನ್ನ ಕಡೆಯ ಅಸ್ತ್ರ ಯುದ್ಧ, ಯುದ್ಧ ಎಂಬ ಬೆದರಿಕೆಯನ್ನು ಹಾಕಿ ಭಾರತವನ್ನು ತಣ್ಣಗಾಗಿಸಲು ಪ್ರಯತ್ನ ಪಡುತಿತ್ತು, ನರೇಂದ್ರ ಮೋದಿ ರವರು ದೇಶದ ಆರ್ಥಿಕ ವ್ಯವಸ್ಥೆಯ ಯೋಚನೆಯಿಂದ ದಾಳಿ ಮಾಡುವುದಿಲ್ಲ ಎಂದು ಸುಖಾ ಸುಮ್ಮನೆ ಗಡಿಯಲ್ಲಿ ಸೇನಾ ಜಮಾವಣೆ ಮಾಡುವುದು, ಅಣ್ವಸ್ತ್ರ ಬೆದರಿಕೆ ಹಾಕುವುದು ಹೀಗೆ ಕೆಲಸಕ್ಕೆ ಭಾರದ ಕೆಲಸಗಳನ್ನು ಮಾಡುತ್ತಾ ಮೈ ಪರಚಿಕೊಳ್ಳುತಿತ್ತು. ಆದರೆ ಇದ್ಯಾವುದಕ್ಕೂ ಮೋದಿ ಹಾಗೂ ಭಾರತ ಸೇನೆ ತಲೆಕೆಡಿಸಿಕೊಳ್ಳದ ಕಾರಣ ಇದೀಗ ಪಾಕಿಸ್ತಾನ ತನ್ನ ನಿರ್ಧಾರದಲ್ಲಿ ಉಲ್ಟಾ ಹೊಡೆದಿದೆ. ಯುದ್ದಕ್ಕೂ ಮುನ್ನವೇ ತನ್ನ ತಾಕತ್ತು ತಿಳಿದುಕೊಂಡು ಮಂಡಿಯೂರಿ ಸೋಲೋಪ್ಪಿಕೊಂಡಿದೆ.

ಹೌದು, ಇದೀಗ ಈ ಹಿಂದೆ ಯುದ್ಧದ ಬೆದರಿಕೆ ಹಾಕಿದ್ದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ ಉಲ್ಟಾ ಹೊಡೆದು ಉರ್ದು ವಾಹಿನಿಯಲ್ಲಿ ಮಾತನಾಡುವಾಗ ಪಾಕಿಸ್ತಾನ ಎಂದಿಗೂ ಯುದ್ಧ ಬಯಸಿಲ್ಲ, ಪಾಕಿಸ್ತಾನ ಎಂದಿಗೂ ಆಕ್ರಮಣಕಾರಿ ಧೋರಣೆ ತಳೆದಿಲ್ಲ ಹಾಗೂ ತಳೆಯುವುದಿಲ್ಲ, ನಾವು ಶಾಂತಿ ಬಯಸುತ್ತೇವೆ. ಅಣ್ವಸ್ತ್ರಗಳನ್ನು ಹೊಂದಿರುವ ಎರಡು ರಾಷ್ಟ್ರಗಳು ಯುದ್ಧ ಮಾಡುವ ಹಂತಕ್ಕೆ ಬರಬಾರದು. ಆ ಕಾರಣಕ್ಕಾಗಿಯೇ ಮಾತುಕತೆಗೆ ಬರುವಂತೆ ಪಾಕಿಸ್ತಾನ ಸರ್ಕಾರವು ಭಾರತವನ್ನು ಹಲವು ಬಾರಿ ಮನವಿ ಮಾಡಿಕೊಂಡಿದೆ ಆದರೆ ಭಾರತ ಯಾವುದಕ್ಕೂ ಸ್ಪಂದನೆ ನೀಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಯುದ್ಧ ಆಯ್ಕೆಯಲ್ಲ’ ಎಂದಿದ್ದಾರೆ. ಈ ವಿಷಯ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರ ಜೊತೆ ಶೇರ್ ಮಾಡಿ ಹಂಚಿಕೊಳ್ಳಿ, ಮತ್ತಷ್ಟು ಸುದ್ದಿಗಳಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡಿ ಫಾಲೋ ಮಾಡಿ.