ಚಿದಂಬರಂ ರವರು ದೇಶದ ವಿರುದ್ಧ ನಿಂತು ! ಪಾಕ್ ನ ವಕೀಲರನ್ನು ಆಯ್ಕೆ ಮಾಡಿ, ಸಾವಿರಾರು ಕೋಟಿ ವಿದೇಶಿ ಕಂಪನಿಗೆ ದಂಡ ಕಟ್ಟುವ ಹಾಗೆ ಮಾಡಿದ್ದು ಹೇಗೆ ಗೊತ್ತಾ??

ಚಿದಂಬರಂ ರವರು ದೇಶದ ವಿರುದ್ಧ ನಿಂತು ! ಪಾಕ್ ನ ವಕೀಲರನ್ನು ಆಯ್ಕೆ ಮಾಡಿ, ಸಾವಿರಾರು ಕೋಟಿ ವಿದೇಶಿ ಕಂಪನಿಗೆ ದಂಡ ಕಟ್ಟುವ ಹಾಗೆ ಮಾಡಿದ್ದು ಹೇಗೆ ಗೊತ್ತಾ??

ಪಿ ಚಿದಂಬರಂ ಅವರು ಬಂಧನವಾದ ನಂತರ ಒಂದೊಂದೆ ಹಳೆಯ ವಿವಾದಗಳು ಹೊರಬರುತ್ತಿವೆ. ಕಳೆದ ಎರಡು ದಿನಗಳ ಹಿಂದಷ್ಟೇ ತಮ್ಮ ಮಗನ ಮನೆಯಲ್ಲಿಯೇ ಬಾಡಿಗೆಗೆ ಇದ್ದೇನೆ ಎಂದು ದಾಖಲೆಗಳನ್ನು ಸೃಷ್ಟಿಸಿ, ತಿಂಗಳಿಗೆ ಎರಡು ಲಕ್ಷ ರೂ ಸರ್ಕಾರದಿಂದ ಹಣ ಪಡೆಯುತ್ತಿದ್ದ ಸಂಗತಿ ಹೊರಬಿದ್ದ ಬೆನ್ನಲ್ಲೇ ಮತ್ತೊಂದು ಕರ್ಮಕಾಂಡ ಹೊರಬಿದ್ದಿದೆ. ಈ ವಿವಾದ ಇದೀಗ ಬಾರಿ ಸದ್ದು ಮಾಡುತ್ತಿದ್ದು, ಪಿ ಚಿದಂಬರಂ ಅವರು ದೇಶದ ವಿರುದ್ಧ ನಿಂತು ವಿದೇಶಿ ಕಂಪನಿಗೆ ಸರ್ಕಾರದ ಬೊಕ್ಕಸದಿಂದ ಸಾವಿರಾರು ಕೋಟಿ ರೂಪಾಯಿಗಳು ಹರಿದು ಹೋಗುವಂತೆ ಮಾಡಿದ್ದು ಹಾಗೂ ಭಾರತದ ಪರ ನ್ಯಾಯಾಲಯದಲ್ಲಿ ವಾದ ಮಾಡಲು ಪಾಕಿಸ್ತಾನದ ವಕೀಲರನ್ನು ಕರೆ ತಂದಿದ್ದ ಬಾರಿ ಮುಜುಗರದ ಸಂಗತಿ ಹೊರಬಿದ್ದಿದೆ.

ಹೌದು, ಅಂದು ಭಾರತದಲ್ಲಿ ಅಜಾತಶತ್ರು ಎಂದು ಖ್ಯಾತಿ ಪಡೆದುಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಅಧಿಕಾರದಲ್ಲಿ ಇತ್ತು, ಅಮೇರಿಕಾ ಮೂಲದ ಎನ್ರಾನ್ ಎಂಬುವ ಕಂಪನಿಯಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿತ್ತು, ವಿದೇಶಿ ಬಂಡವಾಳವನ್ನು ಉತ್ತೇಜಿಸುವ ಉದ್ದೇಶದಿಂದ ಅಟಲ್ ಬಿಹಾರಿ ವಾಜಪೇಯಿ ಅವರು ಮಹಾರಾಷ್ಟ್ರದ ಧಾಭೋಲ್ ಎಂಬುವ ಪ್ರದೇಶದಲ್ಲಿ ಪವಾರ್ ಪ್ಲಾಂಟ್ ಸ್ಥಾಪಿಸಲು ಅನುಮತಿ ನೀಡಿದ್ದರು, ಆದರೆ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿ ತದ ನಂತರ ಅಧಿಕೃತ ನಿರ್ಧಾರ ತೆಗೆದುಕೊಳ್ಳುವುದಾಗಿ ಮೊದಲೇ ಹೇಳಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಮಹಾರಾಷ್ಟ್ರದ ಜನರ ಅಭಿಪ್ರಾಯ ತೆಗೆದುಕೊಳ್ಳಲು ಮುಂದಾದಾಗ ಜನರಿಂದ ಭಾರಿ ವಿರೋಧ ಕೇಳಿ ಬಂದಿತ್ತು ಆದ ಕಾರಣ ವಾಜಪೇಯಿ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.

ಇದನ್ನೇ ಬಳಸಿಕೊಂಡು ಅಮೇರಿಕಾದ ಕಂಪನಿಯೂ ಭಾರತ ಸರ್ಕಾರದ ವಿರುದ್ಧ ಕಿಡಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿ, ಬರೋಬ್ಬರಿ 38000 ಸಾವಿರ ಕೋಟಿ ರೂಪಾಯಿಗಳನ್ನು ಪರಿಹಾರವನ್ನಾಗಿ ನೀಡಬೇಕು ಎಂದು ಒತ್ತಾಯ ಮಾಡಿತ್ತು. ಇದಕ್ಕೆ ಒಪ್ಪದ ಭಾರತ ಸರ್ಕಾರ ತನ್ನ ಪರವಾಗಿ ನ್ಯಾಯಾಲಯದಲ್ಲಿ ವಾದಿ ನಡೆಸಲು ಇಂದು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಕುಲಭೂಷಣ್ ಜಾಧವ್ ಪರ ಕೇಸ್ ವಾದಿಸುತ್ತಿರುವ ಹರೀಶ್ ಸಾಳ್ವೆ ಅವರನ್ನು ನೇಮಕ ಮಾಡಿತ್ತು. ಆದರೆ ಎನ್ರಾನ್ ಕಂಪನಿ ತನ್ನ ಪರವಾಗಿ ವಾದ ಮಾಡಲು ಇದೆ ಪಿ ಚಿದಂಬರಂ ರವರನ್ನು ಆಯ್ಕೆ ಮಾಡಿತ್ತು. ಭಾರತದ ಸರ್ಕಾರದ ವಿರುದ್ಧ ಕೇಸ್ ವಾದಿಸಲು ಪಿ ಚಿದಂಬರಂ ರವರು ಒಪ್ಪಿಗೆ ನೀಡಿದ್ದರು ಹಾಗೂ ವಾದ ಮಾಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.

ತದ ನಂತರ ರವರ ಸರ್ಕಾರ ಉರುಳಿತು, ಅಂದು ಕೇಂದ್ರ ಸಚಿವರಾಗಿ ಪಿ ಚಿದಂಬರಂ ರವರು UPA ಸರ್ಕಾರದಲ್ಲಿ ಅಧಿಕಾರದ ಸ್ವೀಕರಿಸಿಕೊಂಡರು, ಹಾಗಲಾದರೂ ಪ್ರಕರಣದ ಕೈ ಬಿಡುತ್ತಾರೆ ಎಂದು ಕೊಂಡಿದ್ದರೆ ಅದು ನಮ್ಮ ಊಹೆಯಷ್ಟೇ, ಅಂದು ಭಾರತದ ಸಂವಿಧಾನಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ವಾದ ಮಾಡುವುದನ್ನು ನಿಲ್ಲಿಸಿ, ಅದೇ ಕಂಪನಿ ಗೆ ಲೀಗಲ್ ಅಡ್ವೈಸರ್ ಆಗಿ ಮುಂದುವರಿದರು, ಇಷ್ಟಕ್ಕೆ ಸುಮ್ಮನಾಗದೆ ಭಾರತದ ಪರ ವಕೀಲರಾದ ಹರೀಶ್ ಸಾಳ್ವೆಯನ್ನು ಕಿತ್ತು ಹಾಕಿ ಶತ್ರು ರಾಷ್ಟ್ರ ಪಾಕಿಸ್ತಾನದ ಮೂಲದ ಖವರ್ ಖುರೇಶಿ ಎಂಬ ಪಾಕಿಸ್ತಾನಿ ನ್ಯಾಯವಾದಿಯನ್ನು ನೇಮಿಸಿದರು. ಇದರಿಂದ ಭಾರತ ಸೋತಿತು ಹಾಗೂ ವಿದೇಶಿ ಕಂಪನಿಗೆ ಸಾವಿರಾರು ಕೋಟಿ ದಂಡ ಪಾವತಿ ಮಾಡಿತು. ಇದೀಗ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದ್ದು, ಚಿದು ರವರ ಈ ನಡೆಗೆ ಬಾರಿ ಆಕ್ರೋಶ ವ್ಯಕ್ತವಾಗಿದೆ.