ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆಯ ಅಸಲಿ ತಾಕತ್ತು ಬಹಿರಂಗ ! ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮುಜುಗರ ! ಇವರು ಭಾರತದ ಮೇಲೆ ಯುದ್ದ ಮಾಡುತ್ತಾರಂತೆ !

ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆಯ ಅಸಲಿ ತಾಕತ್ತು ಬಹಿರಂಗ ! ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮುಜುಗರ ! ಇವರು ಭಾರತದ ಮೇಲೆ ಯುದ್ದ ಮಾಡುತ್ತಾರಂತೆ !

ಇದೀಗ ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ಮಾನಸಿಕ ಸ್ಥಿಮಿತ ಕಳೆದುಕೊಂಡಿದೆ. ಜಮ್ಮು-ಕಾಶ್ಮೀರದ ವಿಚಾರದಲ್ಲಿ ಸುಖಾಸುಮ್ಮನೆ ಮೂಗು ತೂರಿಸಿ ತನ್ನ ಅಂತ್ಯಕ್ಕೆ ತಾನೇ ನಾಂದಿ ಹಾಡಲು ಅವಕಾಶ ನೀಡಲು ಮುಂದಾಗಿದೆ. ಹೌದು, ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ದ ನಡೆದಲ್ಲಿ ಪಾಕಿಸ್ತಾನದ ಅಂತ್ಯ ಖಚಿತ ಎಂದು ಎಲ್ಲರಿಗೂ ತಿಳಿದಿದೆ, ಪಾಕಿಸ್ತಾನಕ್ಕೆ ತನ್ನ ತಾಕತ್ತು ಸ್ಪಷ್ಟವಾಗಿ ತಿಳಿದಿದ್ದರೂ ಸಹ ಮತ್ತೊಂದು ಶತ್ರು ರಾಷ್ಟ್ರವಾದ ಚೀನಾ ದೇಶ ಪಾಕಿಸ್ತಾನದ ಪರ ನಿಲ್ಲಲಿದೆ ಎಂದು ಬೀಗುತ್ತಿದೆ. ಆದರೆ, ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ನಿಂತಷ್ಟು ಸುಲಭವಾಗಿ ಯುದ್ದ ಭೂಮಿಯಲ್ಲಿ ನಿಲ್ಲಲು ಸಾಧ್ಯವೇ ಇಲ್ಲ, ಯಾಕೆಂದರೆ ಒಂದು ವೇಳೆ ಆ ರೀತಿ ನಡೆದಲ್ಲಿ ಇನ್ನುಳಿದ ಅದೆಷ್ಟೊ ಬಲಿಷ್ಠ ರಾಷ್ಟ್ರಗಳು ಭಾರತದ ಪರ ನಿಲ್ಲಲಿವೆ. ಅಷ್ಟೇ ಅಲ್ಲದೆ ಇದು ಹಳೆಯ ಭಾರತವಲ್ಲ, ಎಂತಹ ಸವಾಲುಗಳನ್ನು ಎದುರಿಸಲು ಭಾರತ ಶಕ್ತವಾಗಿದೆ. ಇದನ್ನು ಬಹುಶಃ ಪಾಕಿಸ್ತಾನ ಮರೆತಂತೆ ಕಾಣುತ್ತಿದೆ.

ಭಾರತಕ್ಕೆ ಸುಖಾ ಸುಮ್ಮನೆ ಯುದ್ದದ ಬೆದರಿಕೆ ಹಾಕುತ್ತಿರುವ ಇದೇ ಪಾಕಿಸ್ತಾನ ಕೇವಲ ಎರಡು ದಿನಗಳ ಹಿಂದಷ್ಟೇ ಅಣ್ವಸ್ತ್ರ ಹೊತ್ತೊಯ್ಯುವ ಕ್ಷಿಪಣಿ ಪರೀಕ್ಷೆ ಮಾಡಿ, ಭಾರತಕ್ಕೆ ಯುದ್ಧದ ಬೆದರಿಕೆ ಹಾಕಿತ್ತು. ಆದರೆ, ಈ ಅಣ್ವಸ್ತ್ರ ಕ್ಷಿಪಣಿಯ ಸಾಮರ್ಥ್ಯ ಕಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಭಾರಿ ಮುಜುಗರಕ್ಕೆ ಒಳಗಾಗಿದೆ. ಹೌದು, ಪಾಕಿಸ್ತಾನದಿಂದ ಭಾರತದ ಮೂಲೆ ಮೂಲೆಗೂ ಅಣ್ವಸ್ತ್ರ ಹಾರಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿರುವ ಈ ಕ್ಷಿಪಣಿಯ ಸಾಮರ್ಥ್ಯ ಕೇವಲ 290 KM, ನಗಬೇಡಿ ಪ್ಲೀಸ್ !! ಇಸ್ಲಾಮಾಬಾದ್ ನಿಂದ ಅಣ್ವಸ್ತ್ರ ಹಾರಿಸಿದರೆ ಇದು ಪಾಪಿಸ್ತಾನದ ಲಾಹೋರ್ ಕೂಡ ತಲುಪುವುದಿಲ್ಲ. ಈ ವಿಷಯ ತಿಳಿದ ಕೂಡಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮುಜುಗರಕ್ಕೆ ಒಳಗಾಗಿದೆ. ಅಷ್ಟೇ ಅಲ್ಲದೆ ಭಾರತಕ್ಕೆ ಆತಂಕ ಎಂದು ಸುದ್ದಿ ಪ್ರಕಟಣೆ ಮಾಡಿದ ಮಾಧ್ಯಮಗಳನ್ನು ಜನ ಈ ವಿಷಯವನ್ನು ಮತ್ತೊಮ್ಮೆ ಪ್ರಸ್ತಾವನೆ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಈ ವಿಷಯ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರ ಜೊತೆ ಶೇರ್ ಮಾಡಿ ಹಂಚಿಕೊಳ್ಳಿ, ಮತ್ತಷ್ಟು ಸುದ್ದಿಗಳಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡಿ ಫಾಲೋ ಮಾಡಿ.