ಕುಟುಂಬ ರಾಜಕಾರಣ ಹತ್ತಿಕ್ಕಲು ಮಹತ್ವದ ಆದೇಶ ಹೊರಡಿಸಿದ ಮೋದಿ ! ಈ ನಿರ್ಧಾರಕ್ಕೆ ನಿಮ್ಮ ಅಭಿಪ್ರಾಯ??

ಕುಟುಂಬ ರಾಜಕಾರಣ ಹತ್ತಿಕ್ಕಲು ಮಹತ್ವದ ಆದೇಶ ಹೊರಡಿಸಿದ ಮೋದಿ ! ಈ ನಿರ್ಧಾರಕ್ಕೆ ನಿಮ್ಮ ಅಭಿಪ್ರಾಯ??

ಬಿಜೆಪಿ ಪಕ್ಷವು ಮೊದಲಿನಿಂದಲೂ ತನ್ನದೇ ಆದ ಸಿದ್ಧಾಂತಗಳಿಂದ ನಡೆದುಕೊಂಡು ಬಂದಿದೆ. ಸದಾ ಕುಟುಂಬ ರಾಜಕಾರಣದ ವಿರುದ್ಧ ಸೇರಿದಂತೆ ಹಲವಾರು ರೀತಿಯ ಸಿದ್ಧಾಂತಗಳನ್ನು ಬೆಳೆಸಿಕೊಂಡು ಬಂದಿರುವ ಬಿಜೆಪಿ ಪಕ್ಷವು ತನ್ನ ಯಾವುದೇ ನಾಯಕರೇ ಆಗಿರಲಿ ಸಿದ್ಧಾಂತಗಳನ್ನು ಪಾಲಿಸಲೇಬೇಕು ಎಂಬ ತತ್ವದೊಂದಿಗೆ ಬೆಳೆದುಕೊಂಡು ಬಂದಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಇತ್ತೀಚೆಗಷ್ಟೇ ಒಬ್ಬರಿಗೆ ಕೇವಲ ಒಂದು ಹುದ್ದೆ ಇರಬೇಕು ಎಂಬ ಕಾರಣಕ್ಕೆ  ಯಡಿಯೂರಪ್ಪನವರನ್ನು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ನಳಿನ್ ಕುಮಾರ್ ಕಟೀಲ್ ರವರಿಗೆ ಜವಾಬ್ದಾರಿ ನೀಡಲಾಗಿತ್ತು. ಇದೀಗ ಮತ್ತೊಂದು ವಿಚಾರದಲ್ಲಿ ತನ್ನ ಸಿದ್ಧಾಂತದೊಂದಿಗೆ ಮುನ್ನಡೆಯಲು ನಿರ್ಧರಿಸಿರುವ ನರೇಂದ್ರ ಮೋದಿ ರವರು ಎಲ್ಲಾ ಸಂಸದರು ಸೇರಿದಂತೆ ನಾಯಕರಿಗೆ ಕಡಕ್ ಆದೇಶ ಹೊರಡಿಸಿದ್ದಾರೆ.

ಮೊದಲಿನಿಂದಲೂ ಕುಟುಂಬ ರಾಜಕಾರಣಕ್ಕೆ ವಿರುದ್ಧವಾಗಿ ತನ್ನ ಸಿದ್ಧಾಂತವನ್ನು ಬೆಳೆಸಿಕೊಂಡು ಬಂದಿರುವ ಬಿಜೆಪಿ ಪಕ್ಷವು ಇದೀಗ ಮತ್ತೊಮ್ಮೆ ಅದೇ ಹಾದಿಯಲ್ಲಿ ನಡೆಯಲು ತೀರ್ಮಾನ ಮಾಡಿದ್ದು, ಯಾವುದೇ ಸಚಿವಾಲಯಗಳಲ್ಲಿ ಹಾಗೂ ಸಂಬಂಧಿತ ಇಲಾಖೆಗಳಲ್ಲಿ ಯಾವ ರಾಜಕೀಯ ನಾಯಕರೂ ಸಹ ತಮ್ಮ ಆಪ್ತ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳ ಬಾರದು, ಮಾಡಿಕೊಂಡು ಅನಾವಶ್ಯಕವಾಗಿ ಮಾಧ್ಯಮಗಳ ಹಾಗೂ ಸಾರ್ವಜನಿಕರ ಮುಂದೆ ಮುಜುಗರಕ್ಕೆ ಈಡಾಗುವಂತಹ ಪರಿಸ್ಥಿತಿ ಎದುರಾಗಬಾರದು. ಸಲಹೆಗಾರರಾಗಲಿ ಅಥವಾ ಇತರೆ ಯಾವುದೇ ಹುದ್ದೆ ಗಳಾಗಲಿ ತಮ್ಮ ಆಪ್ತರಿಗೆ ನೀಡಬಾರದು, ಅಷ್ಟೇ ಅಲ್ಲದೆ ಕಾರ್ಯವೈಕರಿಯ ವೇಗವನ್ನು ಹೆಚ್ಚಿಸಿ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು ಎಂದು ಮೋದಿ ಆದೇಶ ಹೊರಡಿಸಿದ್ದಾರೆ. ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಹಾಗೂ ಮತ್ತು ಸುದ್ದಿಗಳಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡಿ.